ಸಾಕು ಪ್ರಾಣಿಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು ರೈತರ ಕರ್ತವ್ಯ. ಜೀವನೋಪಯೋಗಕ್ಕಾಗಿ ಅವುಗಳಿಗೆ ಯಾವುದೇ ರೋಗ ರುಜನೆಗಳು ಹರಡದಂತೆ ಸೂಕ್ತ ಸಮಯಕ್ಕೆ ಸರಿಯಾಗಿ ಪಶು ವೈದ್ಯರ ಬಳಿ ತಪಾಸಣೆ ನಡೆಸಿ ಲಸಿಕೆ ಹಾಕಿಸಬೇಕು.

ಹಲಗೂರು:

ರೈತರು ತಮ್ಮ ಹಸು ಮತ್ತು ಎಮ್ಮೆಗಳಿಗೆ ಥೈಲೇರಿಯಾ (ಗಂಟು ರೋಗ)ಬರದಂತೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುವ ಮೂಲಕ ರೋಗವನ್ನು ತಡೆಗಟ್ಟಬೇಕು ಎಂದು ಮನ್ನುಲ್ ಒಕ್ಕೂಟದ ನಿರ್ದೇಶಕ ಕೃಷ್ಣೆಗೌಡ ತಿಳಿಸಿದರು.

ಲಿಂಗಪಟ್ಟಣ ಗ್ರಾಮದ ಡೇರಿ ಆವರಣದಲ್ಲಿ (ಗಂಟು ರೋಗ)ಕ್ಕೆ ಚುಚ್ಚುಮದ್ದು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಕು ಪ್ರಾಣಿಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು ರೈತರ ಕರ್ತವ್ಯ. ಜೀವನೋಪಯೋಗಕ್ಕಾಗಿ ಅವುಗಳಿಗೆ ಯಾವುದೇ ರೋಗ ರುಜನೆಗಳು ಹರಡದಂತೆ ಸೂಕ್ತ ಸಮಯಕ್ಕೆ ಸರಿಯಾಗಿ ಪಶು ವೈದ್ಯರ ಬಳಿ ತಪಾಸಣೆ ನಡೆಸಿ ಲಸಿಕೆ ಹಾಕಿಸಬೇಕು ಎಂದರು.

ರಾಸುಗಳಿಗೆ ಚುಚ್ಚು ಮದ್ದಿನ ವೆಚ್ಚದ ಶೇ.50 ರಷ್ಟು ಸಂಘದಿಂದ ನೀಡಲಾಗುತ್ತದೆ. ಉಳಿದ ಶೇ.50 ರಷ್ಟು ವೆಚ್ಚವನ್ನು ನೀವು ಭರಿಸಬೇಕು. ಎಲ್ಲಾ ಹಾಲು ಉತ್ಪಾದಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಪಶು ವೈದ್ಯಾಧಿಕಾರಿ ಡಾ.ತೇಜಸ್ವಿನಿ ಮಾತನಾಡಿ, ಥೈಲೇರಿಯ ರೋಗವು ಹಸು ಮತ್ತು ಎಮ್ಮೆಗಳಲ್ಲಿ ಕಾಣಿಸಿಕೊಳ್ಳುವ ಉಣ್ಣೆಗಳಿಂದ ಹರಡುವ ಪರೋಪ ಜೀವಿ ರೋಗ. ಉಣ್ಣೆಗಳು ಹಸು ಅಥವಾ ಎಮ್ಮೆಗಳನ್ನು ಕಚ್ಚಿದಾಗ ಥೈಲೇರಿಯ ಪ್ರೊಟೋಜೋವಗಳು ರಕ್ತಕ್ಕೆ ಸೇರಿ ರೋಗ ಭಾದಿಸುತ್ತದೆ. ಈ ರೋಗ ಬಾರದಂತೆ ತಡೆಗಟ್ಟಲು ನಿಯಮಿತವಾಗಿ ಉಣ್ಣೆ ನಿಯಂತ್ರಣ, ಲಸಿಕೆ, ಕೊಟ್ಟಿಗೆಗಳ ಸ್ವಚ್ಛತೆ ಕಾಪಾಡುವುದು ಮುಖ್ಯ ಎಂದು ತಿಳಿಸಿದರು.

ಈ ವೇಳೆ ಮನ್ಮುಲ್ ನಿರ್ದೇಶಕ ಕೃಷ್ಣೇಗೌಡರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸದಾಶಿವ, ಡಾ.ಜಯಂತ್, ಡಾ.ಯೋಗೇಶ್, ರವೀಶ, ದಿವ್ಯಶ್ರೀ, ಶೋಭಿತ್, ರಶ್ಮಿ, ಡೇರಿದ ಅಧ್ಯಕ್ಷ ಶಿವರಾಮು, ಉಪಾಧ್ಯಕ್ಷೆ ಪದ್ಮ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣೆಗೌಡ ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರುಗಳು ಇದ್ದರು.

ಹೆಚ್ಚೆಚ್ಚು ನಂದಿನಿ ಹಾಲು ಮಾರಾಟ ಮಾಡಿ: ನಿರ್ದೇಶಕ ಕೃಷ್ಣೇಗೌಡ

ಹಲಗೂರು: ನಂದಿನಿ ಪಾರ್ಲರ್ ಮಾಲೀಕರು ಹೆಚ್ಚು ಹಾಲು ಮಾರಾಟ ಮಾಡುವ ಮೂಲಕ ಒಕ್ಕೂಟದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ ಮನವಿ ಮಾಡಿದರು.

ತೊರೆಕಾಡನಹಳ್ಳಿ ನಂದಿನಿ ಪಾರ್ಲರ್ ಮಾಲೀಕ ಎಚ್.ಎನ್.ವಿರುಪಾಕ್ಷಮೂರ್ತಿ ಹಾಗೂ ಹಲಗೂರಿನ ಹಾಲು ಮಾರಾಟಗಾರ ಎಚ್‌.ಪಿ.ಮಹದೇವ ಪ್ರಸಾದ್ ಜೊತೆ ಮಾತನಾಡಿ, ನಮ್ಮ ಡೈರಿ ಉತ್ಪನ್ನಗಳಾದ ಸಿಹಿ ಪದಾರ್ಥ ಹಾಗೂ ಬೆಣ್ಣೆ, ತುಪ್ಪ ಹೆಚ್ಚು ಮಾರಾಟ ಮಾಡುವ ಜೊತೆಗೆ ನಂದಿನಿ ಹಾಲನ್ನು ಮಾರಾಟ ಮಾಡಬೇಕು. ಒಕ್ಕೂಟದಿಂದ ನಿಮಗೆ ಬೇಕಾದ ಸೌಲಭ್ಯ ಕೊಡಿಸುತ್ತೇವೆ ಎಂದರು.ಸ್ಥಳದಲ್ಲಿದ್ದ ಮಾರ್ಕೆಟಿಂಗ್ ನ ರಾಜು ಅವರಿಗೆ ನಂದಿನಿ ಪಾರ್ಲರ್ ಅಂಗಡಿಗಳಿಗೆ ಬಣ್ಣದ ಅವಶ್ಯಕತೆ ಹಾಗೂ ಲೈಟಿಂಗ್ ನಾಮಫಲಕ ಜೊತೆಗೆ ಸ್ಟಿಕರ್‌ಗಳನ್ನು ನೀಡಿ ನಂದಿನ ಉತ್ಪನ್ನ, ಹೆಚ್ಚು ಹಾಲು ಮಾರಾಟ ಮಾಡಲು ಸಹಕರಿಸುವಂತೆ ಸೂಚಿಸಿದರು.

ಈ ವೇಳೆ ಹಾಲಿನ ಡೈರಿ ಕಾರ್ಯದರ್ಶಿ ಕೊನ್ನಾಪುರ ನಾಗರಾಜು, ಗೊಲ್ಲರಹಳ್ಳಿ ಶಿವಲಿಂಗೇಗೌಡ, ಸಾಗ್ಯ ಶಂಕರ, ವಡ್ಡರ ದೊಡ್ಡಿ ವೆಂಕಟೇಶ ಸೇರಿದಂತೆ ಇತರರು ಇದ್ದರು.