ಸಾರಾಂಶ
ಬೆಂಕಿ ನಗರದ ಆರೋಗ್ಯ ಕೇಂದ್ರದಲ್ಲಿ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಡಳಿತ ವೈದ್ಯಾಧಿಕಾರಿ ಅಬ್ದುಲ್ ಖಾದರ್ ಭೇಟಿ ನೀಡಿ, ತಾಯಿ ಕಾರ್ಡನ್ನು ಪರಿಶೀಲಿಸಿದರು.
ಹರಿಹರ: ಬೆಂಕಿ ನಗರದ ಆರೋಗ್ಯ ಕೇಂದ್ರದಲ್ಲಿ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಡಳಿತ ವೈದ್ಯಾಧಿಕಾರಿ ಅಬ್ದುಲ್ ಖಾದರ್ ಭೇಟಿ ನೀಡಿ, ತಾಯಿ ಕಾರ್ಡನ್ನು ಪರಿಶೀಲಿಸಿದರು.
ನಂತರ ತಾಯಂದಿರನ್ನು ಕುರಿತು ಮಾತನಾಡಿ, ಹೆರಿಗೆ ಆದ ಅರ್ಧ ಗಂಟೆಗಳ ಒಳಗೆ ಮಗುವಿಗೆ ಎದೆಹಾಲನ್ನು ಕುಡಿಸಬೇಕು. ಏಕೆಂದರೆ ಅದು ಅಮೃತಕ್ಕೆ ಸಮಾನ. ನಂತರ ''''''''''''''''0''''''''''''''''ಒಪಿವಿ''''''''''''''''0'''''''''''''''' ಹೆಪಟೈಟಿ ಬಿ. ಬಿಸಿಜಿ ಲಸಿಕೆಯನ್ನು ಹಾಕಿಸಬೇಕು. ಇವು ಮಗುವಿಗೆ ಮಾರಕ ರೋಗಗಳಿಂದ ರಕ್ಷಣೆ ನೀಡುತ್ತವೆ. ಮಗುವನ್ನು ಯಾವಾಗಲೂ ಬೆಚ್ಚಗೆ ಇಡಬೇಕು. ಹುಟ್ಟಿದ ಮಗುವಿಗೆ ಪ್ರತಿ 2 ಗಂಟೆಗೊಮ್ಮೆ ಎದೆಹಾಲನ್ನು ಕುಡಿಸಬೇಕು. ಮಗುವಿಗೆ ಆರು ವಾರಗಳ ನಂತರ ಪೆಂಟಾ 1 ರೋಟಾ 1, ಐಪಿವಿ 1, ಪಿಸಿವಿ 1, ಔಷಧಿಗಳನ್ನು ಹಾಕಿಸಬೇಕು ಎಂದು ತಿಳಿಸಿದರು.ಹತ್ತು ವಾರಗಳಲ್ಲಿ ಪೆಂಟಾ 2, ರೋಟಾ 2, ಒಪಿವಿ 2 ಇವುಗಳನ್ನು ಹಾಕಿಸಬೇಕು. ಕಾಲಕಾಲಕ್ಕೆ ತಕ್ಕಂತೆ ಮಗುವಿಗೆ ಲಸಿಕೆಗಳನ್ನು ಹಾಕಿಸುವ ಮೂಲಕ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು ಎಂದರು.
ಈ ಸಂದರ್ಭ ನಗರ ಆರೋಗ್ಯ ಕೇಂದ್ರದ ಡಾಕ್ಟರ್ ಕಾವ್ಯ. ತಾಲೂಕು ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ನಾಗರಾಜ್, ತಾಲೂಕು ಬಿಪಿಎಂ. ಸ್ಮಿತಾ ಹಾಗೂ ತಾಯಂದಿರು ಉಪಸ್ಥಿತರಿದ್ದರು.