ಇಂದು ವಚನ ದರ್ಶನ ಪುಸ್ತಕ ಬಿಡುಗಡೆ, ಉಪನ್ಯಾಸ ಕಾರ್ಯಕ್ರಮ

| Published : Jul 06 2024, 12:52 AM IST

ಸಾರಾಂಶ

ಪ್ರಬುದ್ಧ ಭಾರತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಕನ್ನಡ ಭವನ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳ ಗೌರವ ಸಂಪಾದಕತ್ವ ಹಾಗೂ ಜನಮೇಜಯ ಉಮರ್ಜಿ, ಡಾ.ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ, ಡಾ.ಸಂತೋಷಕುಮಾರ ಪಿ.ಕೆ ಸಂಪಾದಕತ್ವದ "ವಚನ ದರ್ಶನ " ಪುಸ್ತಕ ಲೋಕಾರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜುಲೈ 6 ರಂದು ಸಂಜೆ 6 ಗಂಟೆಗೆ ನಗರದ ಕನ್ನಡ ಭವನ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಬುದ್ಧ ಭಾರತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಕನ್ನಡ ಭವನ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳ ಗೌರವ ಸಂಪಾದಕತ್ವ ಹಾಗೂ ಜನಮೇಜಯ ಉಮರ್ಜಿ, ಡಾ.ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ, ಡಾ.ಸಂತೋಷಕುಮಾರ ಪಿ.ಕೆ ಸಂಪಾದಕತ್ವದ "ವಚನ ದರ್ಶನ " ಪುಸ್ತಕ ಲೋಕಾರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜುಲೈ 6 ರಂದು ಸಂಜೆ 6 ಗಂಟೆಗೆ ನಗರದ ಕನ್ನಡ ಭವನ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಗದಗದ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಇಂಗ್ಲಿಷ್‌ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಆಗಮಿಸುವರು. ಜಿಲ್ಲೆಯ ಎಲ್ಲ ಶಿವಶರಣರು ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬೆಳಗಾವಿ ಜಿಲ್ಲಾ ಘಟಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಬೆಳಗಾವಿಯ ಪ್ರಬುದ್ಧ ಭಾರತದ ಸಂಯೋಜಕ ಡಾ.ಅಲ್ಕಾ ಕಾಳೆ, ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9986048669 ಸಂಪರ್ಕಿಸಬಹುದು.