ಕನ್ನಡದಲ್ಲಿ ವಚನ ಸಾಹಿತ್ಯಕ್ಕೆ ವಿಶೇಷ ಸ್ಥಾನ

| Published : Aug 30 2024, 02:01 AM IST

ಕನ್ನಡದಲ್ಲಿ ವಚನ ಸಾಹಿತ್ಯಕ್ಕೆ ವಿಶೇಷ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶೇಷ ಸ್ಥಾನ ವಚನ ಸಾಹಿತ್ಯಕ್ಕಿದೆ. ಕನ್ನಡನಾಡು ತುಂಬಾ ಸಂಪತ್ಭರಿತ ನಾಡು ಹೊಂದಿದೆ ಎಂದು ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು. ಪಟ್ಟಣದ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಿಂದಗಿ ಹಾಗೂ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿರುವ ವಚನ ದಿನ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶೇಷ ಸ್ಥಾನ ವಚನ ಸಾಹಿತ್ಯಕ್ಕಿದೆ. ಕನ್ನಡನಾಡು ತುಂಬಾ ಸಂಪತ್ಭರಿತ ನಾಡು ಹೊಂದಿದೆ ಎಂದು ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು. ಪಟ್ಟಣದ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಿಂದಗಿ ಹಾಗೂ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿರುವ ವಚನ ದಿನ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಹನ್ನೆರಡನೇಯ ಶತಮಾನದ ವಚನ ಸಾಹಿತ್ಯ ಶರಣರು ಕನ್ನಡಕ್ಕೆ ಕೊಟ್ಟ ಲೋಕ ಕಾಣಿಕೆ ವಚನಗಳು ಕನ್ನಡ ಸಾಹಿತ್ಯ ಭಂಡಾರದ ಅಮೂಲ್ಯ ರತ್ನಗಳಾಗಿ ವಿಶ್ವ ಸಾಹಿತ್ಯ ದೃಷ್ಠಿಯಿಂದ ಕನ್ನಡ ಸಾಹಿತ್ಯದ ಬೆಲೆಯನ್ನು ಹೆಚ್ಚಿಸಿವೆ. ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ವಿಶ್ವ ಸಾಹಿತ್ಯದಲ್ಲಿ ಎಷ್ಟೇ ಅದ್ಭುತ ಧಾರ್ಮಿಕ, ಸಾಮಾಜಿಕ ಪರಿವರ್ತನೆಯ ಸಾಹಿತ್ಯ ಮೂಡಿಬಂದಿದ್ದರೂ ವಚನ ಸಾಹಿತ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಾರಣ ಅವು ಎಲ್ಲ ಕಾಲಕ್ಕೂ ಎಲ್ಲ ಜನರಿಗೂ ಸಲ್ಲುವಂತಹ, ಹೃದಯದಿಂದ ಮೂಡಿಬಂದಿರುವ ಅಮೃತ ಬಿಂದುಗಳು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಭಾರತೀಯ ಸಾಹಿತ್ಯ ಹಾಗೂ ವಿಶ್ವ ಸಾಹಿತ್ಯಕ್ಕೆ ಕನ್ನಡ ಭಾಷೆಯ ಅಮೂಲ್ಯ ಕೊಡುಗೆ ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಕೊಡಮಾಡಿದ ಅನರ್ಘ್ಯ ಸಾಹಿತ್ಯರತ್ನ ಇದಾಗಿದೆ ಎಂದು ಹೇಳಿದರು.

ಜಾನಪದ ದತ್ತಿ ಪ್ರಶಸ್ತಿಗೆ ಭಾಜನರಾದ ಬೋರಗಿಯ ತತ್ವಪದ ಹಾಗೂ ಜನಪದ ಹಾಡುಗಾರ್ತಿ ಇಮಾಂಬಿ ದೊಡಮನಿ, ಡಾಕ್ಟರೇಟ್ ಪದವಿ ಪುರಸ್ಕೃತ ಜಿಪಿಪಿ ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹಾಗೂ ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಶರಣಬಸವ ಜೋಗೂರ ಮಾತನಾಡಿದರು. ಕದಳಿ ವೇದಿಕೆ ಅಧ್ಯಕ್ಷೆ ಸುಜಾತಾ ಕಿಣಗಿ, ಶಿವಪ್ಪ ಗೌಸಾನಿ, ಬಿ.ಎಸ್.ಹನುಮಶೆಟ್ಟಿ, ಚನ್ನಪ್ಪ ಕತ್ತಿ, ಮಹಾನಂದಾ ಬಮ್ಮಣ್ಣಿ, ಮಹಾದೇವಪ್ಪ ಸಿಂದಗಿ, ಶಿವಶರಣ ಬೂದಿಹಾಳ, ಮಧು ಬಮ್ಮಣ್ಣಿ, ಜಗದೇವಿ ಅಂಬಲಗಿ, ಎಸ್.ಜಿ.ಮಾರ್ಸನಳ್ಳಿ, ಎನ್.ಬಿ.ಪೂಜಾರಿ, ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ದುಂಡಯ್ಯ ಮಠಪತಿ, ರಾಹುಲ ನಾರಾಯಣಕರ್, ಸರಸ್ವತಿ ಸಿಂದಗಿ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ನೀಲಕಂಠ ಮೇತ್ರಿ, ಆರ್.ಎಂ.ಕೊಳ್ಳೂರೆ, ಉದಯ ಶಿವಸಿಂಪಿಗೇರ, ಎಸ್.ಎಸ್.ತಾಳಿಕೋಟಿ, ಸುನೀಲ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಇನ್ನಿತರರು ಇದ್ದರು.