ಸಾರಾಂಶ
ವಚನಕಾರರು ಆಯಾಯ ಕಾಲಘಟ್ಟದಲ್ಲಿ ವೈಚಾರಿಕತೆ ಬಗ್ಗೆ ತಮ್ಮ ವಚನಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೂ ಇಂದಿಗೂ ನಮ್ಮಲ್ಲಿ ಮೌಢ್ಯಗಳು ಜೀವಂತವಾಗಿರುವುದು ದುರದುಷ್ಟಕರ. ವಿದ್ಯಾರ್ಥಿಗಳು ವಚನಕಾರರ ವಚನಗಳನ್ನು ಅಧ್ಯಯನ ಮಾಡಿ ಜನತೆಯ ಮೌಢ್ಯಗಳನ್ನು ಹೋಗಲಾಡಿಸಲು ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ವಚನ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ. ಅದು ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮನದಟ್ಟು ಮಾಡಿಕೊಡುವ ಗ್ರಂಥವಿದ್ದಂತೆ ಎಂದು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ತ್ರಿವೇಣಿ ಅಭಿಪ್ರಾಯಪಟ್ಟರು.ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸ್‌ಸಿ ಸಹಯೋಗದಿಂದ ಏರ್ಪಡಿಸಿದ್ದ ವಚನ ಸಾಹಿತ್ಯ ಮತ್ತು ವೈಚಾರಿಕತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನಕಾರರು ಆಯಾಯ ಕಾಲಘಟ್ಟದಲ್ಲಿ ವೈಚಾರಿಕತೆ ಬಗ್ಗೆ ತಮ್ಮ ವಚನಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೂ ಇಂದಿಗೂ ನಮ್ಮಲ್ಲಿ ಮೌಢ್ಯಗಳು ಜೀವಂತವಾಗಿರುವುದು ದುರದುಷ್ಟಕರ. ವಿದ್ಯಾರ್ಥಿಗಳು ವಚನಕಾರರ ವಚನಗಳನ್ನು ಅಧ್ಯಯನ ಮಾಡಿ ಜನತೆಯ ಮೌಢ್ಯಗಳನ್ನು ಹೋಗಲಾಡಿಸಲು ಮುಂದಾಗಬೇಕೆಂದು ಕರೆ ನೀಡಿದರು.ಕಾಲೇಜು ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಮಾತನಾಡಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ಬಸವಣ್ಣ, ಕುವೆಂಪು ರವರ ಸಾಹಿತ್ಯವನ್ನು ಅರಿತುಕೊಂಡು ಉತ್ತಮ ಸಮಾಜದ ಬೆಳವಣಿಗೆಗೆ ಮುಂದಾಗಬೇಕಿದೆ ಎಂದರು.
ಸಮಾರಂಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮಾತನಾಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಉಮೇಶ್, ಕನ್ನಡ ವಿಭಾಗದ ಡಾ. ಚಂದ್ರು ಹಾಗೂ ಇನ್ನಿತರರು ಹಾಜರಿದ್ದರು.ಬಸವಣನವರ ಮೌಲ್ಯಯುತ ವಚನಗಳಿಂದ ವ್ಯಕ್ತಿಗತ ಸುಧಾರಣೆ: ಎಸ್.ನಾಗರಾಜುಮದ್ದೂರು:
ಬಸವಣ್ಣನವರ ಮೌಲ್ಯಯುತ ವಚನಗಳನ್ನು ಮನೆಗಳಲ್ಲಿ ಮಕ್ಕಳಿಗೆ ಹಾಗೂ ಕುಟುಂಬ ಸದಸ್ಯರಿಗೂ ಬೋಧಿಸುವುದರಿಂದ ವ್ಯಕ್ತಿಗತ ಸುಧಾರಣೆ ಆಗುತ್ತದೆ ಎಂದು ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ನಾಗರಾಜು ಹೇಳಿದರು.ತಾಲೂಕಿನ ವೈದ್ಯನಾಥಪುರ ಗ್ರಾಮದ ಕದಂಬ ಜಂಗಮ ಮಠದ ಆವರಣದಲ್ಲಿ ಜಿಲ್ಲಾ ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ನಿಯಮಿತ ಆಶ್ರಯದಲ್ಲಿ ಹುಣ್ಣಿಮೆ ಪ್ರಯುಕ್ತ ಪ್ರತಿ ತಿಂಗಳು ನಡೆಯುವ 143ನೇ ಆಧ್ಯಾತ್ಮಿಕ ಕಾರ್ಯಕ್ರಮ ಹಾಗೂ ಮನೆಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಶಿಕ್ಷಣಕ್ಕೆ ಮಹತ್ತರ ಹಾಗೂ ಮೌಲ್ಯಯುತ ವಚನಗಳನ್ನುನೀಡಿದ್ದಾರೆ. ಅವುಗಳನ್ನು ಸಂರಕ್ಷಿಸುವ ಹೊಣೆ ನಮ್ಮದಾಗಿದೆ ಎಂದು ಅಭಿಪ್ರಾಯಪಟ್ಟರು.ಈ ವೇಳೆ ಭಕ್ತರಿಗೆ ಭಕ್ತಾದಿಗಳೆಲ್ಲರಿಗೂ ಸಹ ಅನ್ನಸಂತರ್ಪಣೆ, ವಿನಿಯೋಗಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ರುದ್ರಸ್ವಾಮಿ, ಉಪಾಧ್ಯಕ್ಷ ಡಿ.ದ್ಯಾವಣ್ಣ, ವೀರಶೈವ ಜನಾಂಗದ ಮುಖಂಡರಾದ ಬಸವಣ್ಣ, ಮಹದೇವಯ್ಯ, ಮಧುಸೂದನ್, ಇನ್ನಿತರರಿದ್ದರು.