ಭಾರತದ ಅಣುಶಕ್ತಿ ಜಗತ್ತಿಗೆ ಪರಿಚಯಿಸಿದ ವಾಜಪೇಯಿ: ವೀರಣ್ಣ ಚರಂತಿಮಠ

| Published : Dec 26 2024, 01:06 AM IST

ಭಾರತದ ಅಣುಶಕ್ತಿ ಜಗತ್ತಿಗೆ ಪರಿಚಯಿಸಿದ ವಾಜಪೇಯಿ: ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಸಾರ್ವಭೌಮತ್ವ ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುವುದರ ಜೊತೆಗೆ ವಿಶ್ವಶಾಂತಿ ಪ್ರಬಲ ಪ್ರತಿಪಾದಕವಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಶ್ವದ ಬೆದರಿಕೆಗೆ ಅಂಜದೆ ಭಾರತದ ಅಣು ಶಕ್ತಿಯನ್ನು ಜಗತ್ತಿಗೆ ತೋರಿಸಿದವರು ಅಟಲ್ ಬಿಹಾರಿ ವಾಜಪೇಯಿಯರವರು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜಿನ್‌ನಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಬಾಗಲಕೋಟೆ ಮತಕ್ಷೇತ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಭಾರತ ರತ್ನ ಅಜಾತ ಶತ್ರು ದಿ.ಅಟಲ್ ಬಿಹಾರಿ ವಾಜಪೇಯಿ ಜೀ ಅವರ 100ನೇ ಜನ್ಮ ದಿನದ ವಿಶೇಷ ಆಚರಣೆ ಸುಶಾಸನ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, 1998ರ ಮೇ 11ರಂದು ನಡೆದ ಪೋಖ್ರಾನ್ ಪರೀಕ್ಷೆಗಳು ವೈಜ್ಞಾನಿಕ ಪರಾಕ್ರಮವನ್ನು ತೋರಿಸಿದರೆ, ಮೇ.13 ಪೋಖ್ರಾನ್ ಪರೀಕ್ಷೆಯು ಅಟಲ್ ಬಿಹಾರಿ ವಾಜಪೇಯಿಯವರ ಮೂಲಕ ಭಾರತದ ನಿಜವಾದ ನಾಯಕತ್ವವನ್ನು ದೇಶ ಕಂಡಿತು. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಸಾರ್ವಭೌಮತ್ವ ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುವುದರ ಜೊತೆಗೆ ವಿಶ್ವಶಾಂತಿ ಪ್ರಬಲ ಪ್ರತಿಪಾದಕವಾಗಿತ್ತು. ವಾಜಪೇಯಿಯರವರ ದೇಶಭಕ್ತಿ ಇಂದಿನ ಯುವಶಕ್ತಿಗೆ ಪ್ರೇರಣೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ವಾಜಪೇಯಿಯರ ಜನ್ಮದಿನವಾದ ಡಿ.25ನ್ನು 2014ರಿಂದ ಸುಶಾಸನ ದಿನ (ಉತ್ತಮ ಆಡಳಿತ ದಿನ)ವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆಡಳಿತವನ್ನು ಪಾರದರ್ಶಕವಾಗಿಸುವುದು ಹಾಗೂ ಪರಿಣಾಮಕಾರಿಯಾಗಿಸುವುದು ಇದರ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಬಸವರಾಜ ಯಂಕಂಚಿ,ಲಕ್ಷ್ಮೀನಾರಾಯಣ ಕಾಸಟ, ರಾಜು ನಾಯ್ಕರ, ನಗರ ಸಭೆ ಅಧ್ಯಕ್ಷೆ ಸವೀತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾರಾವ, ಜೋತಿ ಭಜಂತ್ರಿ, ಸರಸ್ವತಿ ಕುರಬರ, ಭಾಗೀರಥಿ ಪಾಟೀಲ, ಗುಂಡುರಾವ ಶಿಂದೆ, ಶಿವಾನಂದ ಟವಳಿ, ಮುತ್ತಣ್ಣ ಬೇಣ್ಣೂರ,ಕೇಶವ ಭಜಂತ್ರಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪಕ್ಷದ ಧ್ವಜಕ್ಕೆ ಪುಷ್ಪಾರ್ಚಣೆ ಮಾಡಿ ಅಟಲ್ ಜಿ ಅವರ ಗೀತ ಗಾಯನ ಮಾಡಲಾಯಿತು. ನಂತರದಲ್ಲಿ 124ರ ಬೂತ್‌ ಅಧ್ಯಕ್ಷ ಈರಣ್ಣ ಮುಂಡರಗಿ ಮನೆ ಮೇಲೆ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಲಾಯಿತು.