ಕುಂದಾಪುರ: ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ ವತಿಯಿಂದ ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ‘ಹ್ಯಾಪಿ ಕ್ಲಾಸ್ ರೂಮ್’ ಕುರಿತು ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಗುರುಕುಲ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸುಪ್ರಿಯಾ ಶೆಟ್ಟಿ ಹಾಗೂ ನವ್ಯ ಜಿ.ಕೆ. ಆಗಮಿಸಿ, ತಮ್ಮ ಮಾರ್ಗದರ್ಶನದ ಮೂಲಕ ಸಂತೋಷಕರ ತರಗತಿ ವಾತಾವರಣ ನಿರ್ಮಾಣ, ವಿದ್ಯಾರ್ಥಿಗಳ ಮನೋವೈಜ್ಞಾನಿಕ ಅಗತ್ಯಗಳು, ಶಿಕ್ಷಕರ ಧನಾತ್ಮಕ ಪಾತ್ರ ಹಾಗೂ ಕಲಿಕೆಯನ್ನು ಆನಂದಕರವಾಗಿಸುವ ವಿಧಾನಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಶಿಕ್ಷಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.ಗುರುಕುಲ ಸ್ಕೂಲ್ ಮುಖ್ಯೋಪಾಧ್ಯಾಯಿನಿ ಡಾ. ರೂಪ ಶೆಣೈ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿದರು. ಸುಜಾತಾ ನಿರ್ವಹಿಸಿ, ವಂದಿಸಿದರು.
ವಕ್ವಾಡಿ ಗುರುಕುಲ ಸ್ಕೂಲ್: ಶಿಕ್ಷಕರ ವೃತ್ತಿಪರ ತರಬೇತಿ
ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ ವತಿಯಿಂದ ‘ಹ್ಯಾಪಿ ಕ್ಲಾಸ್ ರೂಮ್’ ಕುರಿತು ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಸಂಪನ್ನಗೊಂಡಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.