ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಶ್ವಕ್ಕೆ ರಾಮಾಯಣದಂತಹ ಸಾರ್ವಕಾಲಿಕ ಮೌಲ್ಯವನ್ನೊಳಗೊಂಡ ಮಹಾನ್ ಗ್ರಂಥವನ್ನು ಬರೆದ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯದ ಕೆಲಸವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ವಾಲ್ಮೀಕಿ ರಾಮಾಯಣವೆಂದೇ ಪುರಾಣದಿಂದಲೂ ಪ್ರಸಿದ್ಧವಾಗಿರುವ ಈ ಗ್ರಂಥವನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ಆದರ್ಶಗಳನ್ನು ಪಾಲಿಸಿದ್ದೇ ಆದರೆ ಅದಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ, ಮರಿಸ್ವಾಮಿ ಮಾತನಾಡಿ, ರಾಮಾಯಣದಲ್ಲಿ ಶ್ರೀರಾಮನ ಆದರ್ಶ ಗುಣಗಳು, ಸೀತೆಯ ಗುಣಗಳು ಸಮಾಜಕ್ಕೆ ಮಾದರಿಯಾಗಿದ್ದು, ವಾಲ್ಮೀಕಿ ರಾಮಾಯಣದ ಪ್ರತಿಯೊಂದು ಭಾಗದಲ್ಲೂ ಉತ್ತಮ ಮೌಲ್ಯಗಳನ್ನು ಒಳಗೊಂಡಿದೆ. ಭಾರತದ ಮಹಾನ್ ಆದರ್ಶ ಕಾವ್ಯಗಳಲ್ಲಿ ರಾಮಾಯಣ, ಮಹಾಭಾರತ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್. ಮಹದೇವ, ಎಚ್.ವಿ ಚಂದ್ರು, ನಗರಸಭೆ ಸದಸ್ಯೆ ಚಿನ್ನಮ್ಮ, ಕಾಗಲವಾಡಿ ಚಂದ್ರು, ಮಹೇಶ್‌ಕುದರ್, ನಸ್ರುಲ್‌ಖಾನ್, ಆಯಿಭ್‌ಖಾನ್, ಎ,ಪಿ,ಎಂ,ಸಿ ಅಧ್ಯಕ್ಷ ಸೂಮೇಶ್, ಜಿ,ಪಂ ಮಾಜಿ ಸದಸ್ಯ ರಮೇಶ್, ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ಸ್ವಾಮಿ, ಮಹದೇವಯ್ಯ, ಪುಟ್ಟಸ್ವಾಮಿ, ಮರಿಯಾಲದ ಹುಂಡಿ ಕುಮಾರ್, ವಕೀಲ ಪೃಥಿ, ಪರಿಶಿಷ್ಟ ತಾ.ಪಂ ಮಾಜಿ ಸದಸ್ಯ ಮಹಾಲಿಂಗು, ರಾಜು, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸೋಮಣ್ಣ, ಹೆಚ್.ಎಂ. ಮಹದೇವಶೆಟ್ಟಿ, ಚಂಗುಮಣಿ, ರಾಜೇಶ್ ಎನ್.ಆರ್. ಪುರುಷೋತ್ತಮ್, ಮೋಹನ್‌ನಗು, ಮರಿಸ್ವಾಮಿ, ಉತ್ತವಳ್ಳಿ ಕಾಂತರಾಜು, ಪ್ರಶಾಂತ್, ಪಟೇಲ್ ಮಹದೇವಸ್ವಾಮಿ, ರವಿಗೌಡ, ಶಕುಂತಲಾ, ಗಣೆಶ್, ಪ್ರಸಾದ್, ನಾಗಬಸವಣ್ಣ ಇದ್ದರು.