ವಾಲ್ಮೀಕಿ ಬದುಕಿಗೆ ಬೆಳಕು ನೀಡಿದ ಶ್ರೇಷ್ಠ ಮಹರ್ಷಿ

| Published : Sep 03 2024, 01:35 AM IST

ಸಾರಾಂಶ

ಧಾರ್ಮಿಕ ವಿಚಾರಧಾರೆಗಳ ಬೆಳಕು ನೀಡಿ, ಉತ್ತಮ ಬದುಕು ಕಂಡುಕೊಳ್ಳುವ ಮಾರ್ಗತೋರಿದ ಶ್ರೇಷ್ಠ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಅವರ ಮಾರ್ಗದಲ್ಲಿ ನಡೆಯುವ ಸಂದೇಶವನ್ನು ಸಾರಲಾಗಿದೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಧಾರ್ಮಿಕ ವಿಚಾರಧಾರೆಗಳ ಬೆಳಕು ನೀಡಿ, ಉತ್ತಮ ಬದುಕು ಕಂಡುಕೊಳ್ಳುವ ಮಾರ್ಗತೋರಿದ ಶ್ರೇಷ್ಠ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಅವರ ಮಾರ್ಗದಲ್ಲಿ ನಡೆಯುವ ಸಂದೇಶವನ್ನು ಸಾರಲಾಗಿದೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.

ಅವರು, ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಾಯಕರ ವಿದ್ಯಾರ್ಥಿನಿಯಲ, ವಾಲ್ಮೀಕಿ ಕಲ್ಯಾಣಮಂಟಪ ಟ್ರಸ್ಟ್, ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘ, ವಾಲ್ಮೀಕಿ ಮಹಿಳಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾಪುಸ್ಕಾರ, ಸಮುದಾಯದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಯಕ ಸಮುದಾಯ ಕಳೆದ ಹಲವಾರು ದಶಕಗಳಿಂದ ಕಲ್ಯಾಣಮಂಟಪದ ಟ್ರಸ್ಟ್ ಮೂಲಕ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸುವ ಮೂಲಕ ಸಮುದಾಯದ ಜನರ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಈ ಸಮಾಜದ ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಲಿ ಎಂದು ಆಶಿಸುವೆ. ನೂರಾರು ವಿದ್ಯಾರ್ಥಿಗಳು ತಮ್ಮದೇ ಆದ ಪ್ರತಿಭೆಯಿಂದ ಸನ್ಮಾನಿತರಾಗಿದ್ದಾರೆ. ಸೇವೆಯಿಂದ ನಿವೃತ್ತರಾದ ನೌಕರರನ್ನೂ ಸಹ ಅಭಿನಂದಿಸಲಾಗಿದೆ. ಇವೆರೆಲ್ಲರ ಬದುಕು ಉಜ್ವಲವಾಗಲಿ ಎಂದು ಶುಭಹಾರೈಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ ಮಾತನಾಡಿ, ನಾಯಕ ಸಮುದಾಯ ಬಹುಮುಖ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುವ ಮೂಲಕ ಈ ಸಮುದಾಯದ ವಿದ್ಯಾರ್ಥಿಗಳು ಪ್ರತಿಭೆಯಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ, ಪೆನ್ನು ವಿತರಣೆ ಮಾಡುವುದಲ್ಲದೆ, ಸಮಾಜಮುಖಿ ಚಟುವಟಿಕೆಗಳಿಗೂ ಸಹ ಸಹಕಾರ ನೀಡಲಾಗುತ್ತಿದೆ ಎಂದರು.

ನಾಯಕ ಸಮುದಾಯದ ಕ್ರಿಯಾಶೀಲತೆಯ ಬಗ್ಗೆ ಸಹಾಯಕ ವಾಣಿಜ್ಯತೆರಿಗೆ ಆಯುಕ್ತ ಎ. ತಿಪ್ಪಾನಾಯಕ, ಕೆಎಂಎಫ್ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಉಪಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ, ಪಿಟಿಎಸ್‌ಮಾಸ್ಟರ್, ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾಧ್ಯಕ್ಷ ಪಿ.ಕೆ. ಸದಾನಂದ ಮುಂತಾದವರು ಮಾತನಾಡಿದರು.

ನಾಯಕರ ವಿದ್ಯಾರ್ಥಿನಿಲಯ ಹಾಗೂ ವಾಲ್ಮೀಕಿ ಕಲ್ಯಾಣಮಂಟಪ ಟ್ರಸ್ಟ್ ಅಧ್ಯಕ್ಷ ಎಚ್. ಮಲ್ಲಪ್ಪನಾಯಕ ಮಾತನಾಡಿ, ಕಳೆದ 1965ರಲ್ಲಿ ಕಲ್ಯಾಣಮಂಟಪ ಆರಂಭದ ಮೂಲಕ ಸಮಾಜದ ಚಟುವಟಿಕೆಗೆ ಚಾಲನೆ ನೀಡಲಾಗಿದೆ. ಈ ಸಮುದಾಯದ ಹಿರಿಯ ಮುಖಂಡ ದಿವಂಗತ ಸೂರನಾಯಕ, ಮಾಜಿ ಸಚಿವ ತಿಪ್ಪೇಸ್ವಾಮಿ ಮುಂತಾದವರ ನಿಸ್ವಾರ್ಥಸೇವೆ ಫಲವಾಗಿ ಇಂದು ಈ ಸಮಾಜ ಉನ್ನತ್ತಮಟ್ಟಕ್ಕೆ ಬೆಳೆದಿದೆ ಎಂದರು.

ನಾಯಕ ಸಮಾಜದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರದುರ್ಗ ರಸ್ತೆಯಲ್ಲಿ1ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತಮಂಡಳಿಯೂ ಸೇರಿದಂತೆ ಇಡೀ ಸಮುದಾಯ ನಮ್ಮ ಬೆನ್ನ ಹಿಂದೆ ನಿಂತು ನಮ್ಮನ್ನು ಪ್ರೋತ್ಸಾಹಿಸುತ್ತಿದೆ. ಸಮಾಜದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಕಲ್ಯಾಣಮಂಟಪ ಟ್ರಸ್ಟ್ ಕಾರ್ಯದರ್ಶಿ ಸಿ.ಕೆ. ರಂಗಸ್ವಾಮಿ, ಹಾಸ್ಟಲ್ ಕಾರ್ಯದರ್ಶಿ ದುಗ್ಗಾವರ ತಿಪ್ಪೇಸ್ವಾಮಿ, ನಿರ್ದೇಶಕ ಆರ್.ಪಾಪಣ್ಣ, ಬಾಳೆಮಂಡಿರಾಮದಾಸ್, ಟಿ. ಶಿವಕುಮಾರ್, ಜೆ. ರಘುವೀರನಾಯಕ, ಬೋರಯ್ಯ, ಕೆ.ಬಿ.ಪ್ರಭಾಕರ, ಬಿಇಒ ಕೆ.ಎಸ್. ಸುರೇಶ್, ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್, ಕಾರ್ಯದರ್ಶಿ ಡಾ.ಡಿ.ಎನ್. ರಘುನಾಥ, ಮಹಿಳಾ ಸಂಘದ ಅಧ್ಯಕ್ಷೆ ಯಶೋಧಮ್ಮ, ಕಾರ್ಯದರ್ಶಿ ಎಚ್.ಎಂ. ಸೂರ್ಯಪ್ರಭಾ, ಉಪಮುಖ್ಯ ವಿದ್ಯುತ್ ಪರಿವೀಕ್ಷಕ ಜೆ.ಎಚ್. ಶ್ರೀನಿವಾಸ್, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಎಸ್. ಸುರೇಶ್, ವಾಣಿಜ್ಯತೆರಿಗೆ ಅಧಿಕಾರಿ ಮಂಜಣ್ಣ, ಅಜ್ಜಣ್ಣ, ನಗರಸಭಾ ಸದಸ್ಯರಾದ ಕವಿತಾಬೋರಯ್ಯ, ಡಾ. ನಾಗೇಂದ್ರ ನಾಯಕ, ಸೌಭಾಗ್ಯಮ್ಮ, ಕರವೆ ಅಧ್ಯಕ್ಷ ಟಿ.ಜೆ. ವೆಂಕಟೇಶ್, ಓ. ರಾಮಣ್ಣ, ಬೋರಯ್ಯ, ಪ್ರಶಾಂತ್‌ ನಾಯಕ, ವಿಷಯ ಪರಿವೀಕ್ಷಕ ಗೋವಿಂದಪ್ಪ ಮುಂತಾದವರು ಭಾಗವಹಿಸಿದ್ದರು.