ಸಾರಾಂಶ
ವಾಲ್ಮೀಕಿ ನಾಯಕ ಸಮಾಜದವರು ಒಗ್ಗಟ್ಟಿನಿಂದ ಜಾಗ್ರತರಾಗಿರಬೇಕು.
ಸಂಡೂರು: ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಮಹಿಳಾ ಘಟಕ ಉದ್ಘಾಟಿಸಲಾಯಿತು.
ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕಿ ಅನ್ನಪೂರ್ಣಾ ಈ. ತುಕಾರಾಂ, ವಾಲ್ಮೀಕಿ ನಾಯಕ ಸಮಾಜದವರು ಒಗ್ಗಟ್ಟಿನಿಂದ ಜಾಗ್ರತರಾಗಿರಬೇಕು. ಉತ್ತಮ ಶಿಕ್ಷಣ ಪಡೆದು, ನಮ್ಮ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಂಕಿ-ಅಂಶಗಳೊಂದಿಗೆ ಒಟ್ಟಾಗಿ ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸಿದಾಗ ಸಮಸ್ಯೆಗೆ ಪರಿಹಾರ ಹಾಗೂ ಉತ್ತಮ ಫಲ ಪಡೆಯಲು ಸಾಧ್ಯ. ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ವಿ. ಅಂಬರೀಷ್, ಇನ್ನಿತರ ಪದಾಧಿಕಾರಿಗಳು, ಮುಖಂಡರಾದ ಡಿ. ಕೃಷ್ಣಪ್ಪ, ಸಿ.ಎಂ. ಶಿಗ್ಗಾವಿ, ಅಂಜಿನಪ್ಪ, ವಿ.ಎಸ್. ಶಂಕರ್ ಭಾಗವಹಿಸಿದ್ದರು.
ಮಹಿಳಾ ಘಟಕದ ಪದಾಧಿಕಾರಿಗಳು:ಎನ್. ಪೂರ್ಣಿಮ (ಅಧ್ಯಕ್ಷೆ), ಎನ್. ಜ್ಯೋತಿ ಹಾಗೂ ಎನ್. ಯಶೋದಾ (ಉಪಾಧ್ಯಕ್ಷರು), ಟಿ. ಕವಿತಾ (ಪ್ರಧಾನ ಕಾರ್ಯದರ್ಶಿ), ನಿರ್ಮಲಾ ಹಾಗೂ ಎಂ.ಎಸ್. ಪದ್ಮಾವತಿ (ಸಹ ಕಾರ್ಯದರ್ಶಿಗಳು), ಗೌರಮ್ಮ, ಕವಿತಾ ಹಾಗೂ ಕೊಟ್ರಮ್ಮ (ತಾಲೂಕು ಸಂಚಾಲಕರು), ಜಿ. ಗೌರಮ್ಮ (ಖಜಾಂಚಿ), ಕೆ. ಕವಿತಾ, ಲಕ್ಷ್ಮಿ, ಪಿ. ಶಾಂತಾ, ವಾಲ್ಮೀಕಿ ಶಿವರುದ್ರಮ್ಮ ಹಾಗೂ ಎಸ್. ಪಾರ್ವತಿ (ಸದಸ್ಯರು).