ವಚನಗಳಲ್ಲಿ ಜೀವನ ಮೌಲ್ಯ: ಡಾ.ಲೋಕೇಶ್‌

| Published : Nov 22 2024, 01:19 AM IST

ಸಾರಾಂಶ

ತಮ್ಮ ಅನುಭವ, ಚಿಂತನೆಗಳ ಬರವಣಿಗೆ ಮೂಲಕ ಜನಸಾಮಾನ್ಯರ ಬದುಕು ಕಟ್ಟಿಕೊಟ್ಟವರು ವಚನಕಾರರಾಗಿದ್ದಾರೆ. ಅವರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಡಾ. ಲೋಕೇಶ್ ಎಂ.ಆರ್. ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಮ್ಮ ಅನುಭವ, ಚಿಂತನೆಗಳ ಬರವಣಿಗೆ ಮೂಲಕ ಜನಸಾಮಾನ್ಯರ ಬದುಕು ಕಟ್ಟಿಕೊಟ್ಟವರು ವಚನಕಾರರಾಗಿದ್ದಾರೆ. ಅವರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಡಾ. ಲೋಕೇಶ್ ಎಂ.ಆರ್. ಹೇಳಿದರು.

ತಾಲೂಕಿನ ಎಚ್.ಕಡದಕಟ್ಟೆ ಸಮೀಪದ ವಿಜಯ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ- ಕಾಲೇಜುಗಳ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ವೈಜಾರಿಕೆ ವಿಷಯವಾಗಿ ಉಪನ್ಯಾಸ ನೀಡಿದರು. ವಚನಕಾರರು ಜೀವನ ಮೌಲ್ಯವನ್ನು ಪರಿಚಯಿಸುವ ಜೊತೆಗೆ ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸದಾಶಿವಪ್ಪ ಶಾಗಲೇ ಮಾತನಾಡಿ, ಜಿಲ್ಲೆಯಲ್ಲಿ ಅರಂಭದಲ್ಲಿ 43 ದತ್ತಿಗಳಿದ್ದವು. ಜಿಲ್ಲಾಧ್ಯಕ್ಷರಾದ ನಂತರದ ದಿನಗಳಲ್ಲಿ 170ಕ್ಕೂ ಹೆಚ್ಚು ದತ್ತಿಗಳಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಾವಣಗೆರೆ ದತ್ತಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಬಹಳ ಯಶಸ್ವಿಯಾಗಿ ಜಿಲ್ಲಾ ಸಮ್ಮೇಳನವನ್ನು ಹೊನ್ನಾಳಿ ತಾಲೂಕು ವತಿಯಿಂದ ಮಾಡಿದ್ದನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಜಿ.ಮುರುಗಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮಹೇಶ್ ಜೋಷಿ ಮುಂದಾಳತ್ವದಲ್ಲಿ ಒಂದು ಕೋಟಿ ಸದಸ್ಯರ ನೋಂದಣೆ ನಿರೀಕ್ಷೆ ಹೊಂದಿದೆ. 109 ವರ್ಷಗಳ ಗತಿಸಿರುವ ಪರಿಷತ್ತಿಗೆ ಈಗಾಗಲೇ 4 ಲಕ್ಷ ಸದಸ್ಯತ್ವ ದಾಟಿದೆ. ನಾಡಿನ ಜನರಲ್ಲಿ ದತ್ತಿಗಳ ಮೂಲಕ ಸಾಹಿತ್ಯಕ್ಕೆ ಹೆಚ್ಚು ಒಲವು ಮೂಡಿಸುವಂತೆ ಮಾಡಲಾಗುತ್ತಿದೆ ಎಂದರು.

ದತ್ತಿ ದಾನಿ ದಾವಣಗೆರೆ ಶಾಂತರಾಜ್ ಮಾತನಾಡಿ, ಕಾಯಕನಿಷ್ಠೆ ಹಾಗೂ ದಾಸೋಹ ನಿಷ್ಠೆಯಿಂದಾಗಿ ಮಾಗನೂರು ಬಸಪ್ಪನವರು ಶಥಮಾನದ ಜಿಲ್ಲಾ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದರು.

ಕೋಟೆಹಾಳ್ ಬಸಪ್ಪ ಹಂಪೋಳ್ ಶಿವಪ್ಪ, ಮಾಗನೂರು ಬಸಪ್ಪ, ಕುಂಕೋದ್ ಚನ್ನಬಸಮ್ಮ ಕತ್ತಿಗೆ ನಾಗಮ್ಮ, ನಾಗಪ್ಪ, ಬಸವರಾಜಪ್ಪ, ಹೆಸರಿನಮೂರು ದತ್ತಿ ಉಪನ್ಯಾಸ ಕಾರ್ಯಕ್ರಮದ ಜರುಗಿದವು.

ಕಾರ್ಯಕ್ರಮ ಉದ್ಘಾಟನೆ ನಿವೃತ್ತ ಎಂಜಿನಿಯರ್ ಎಸ್.ಎಸ್. ಬಸವರಾಜಪ್ಪ ನೆರವೇರಿಸಿದರು. ಅಧ್ಯಕ್ಷತೆಯನ್ನು ಜಿಗುರು ಎಜ್ಯುಕೇಷನ್ ಸಂಸ್ಥೆ ನಿರ್ದೇಶಕ ಸುನೀಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಾಗರಾಜ್ ನಾಯ್ಕ, ಚಿಗುರು ಸಂಸ್ಥೆಯ ದೇವರಾಜ್, ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ, ಚಿನ್ಮಯ್ ಎಂ. ಪಾಟೀಲ್ ಪ್ರಾರ್ಥನೆ ಸಲ್ಲಿಸಿದರು. ಕಸಾಪ ಕಾರ್ಯದರ್ಶಿ ಶೇಖರಪ್ಪ ಸ್ವಾಗತಿಸಿ, ಶಾರದಾ ಕಣಗೋಟಗಿ ನಿರೂಪಿಸಿದರು.

- - - -21ಎಚ್.ಎಲ್.ಐ1:

ಕಾರ್ಯಕ್ರಮವನ್ನು ಶಸಾಪ ಅಧ್ಯಕ್ಷ ಡಾ. ಲೋಕೋಶ್ ಎಂ.ಆರ್. ಉದ್ಘಾಟಿಸಿದರು.