ಸಮಾಜದಲ್ಲಿ ಛಾಯಾಗ್ರಾಹಕರ ಮೌಲ್ಯ ಅಪಾರವಾದದ್ದು: ಪತ್ರಕರ್ತ ಲಕ್ಷ್ಮೀ ಮಚ್ಚಿನ

| Published : May 18 2024, 12:30 AM IST

ಸಮಾಜದಲ್ಲಿ ಛಾಯಾಗ್ರಾಹಕರ ಮೌಲ್ಯ ಅಪಾರವಾದದ್ದು: ಪತ್ರಕರ್ತ ಲಕ್ಷ್ಮೀ ಮಚ್ಚಿನ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರದ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ, ಬೈಂದೂರು ವಲಯದ ವತಿಯಿಂದ ಕೆನೋನ್ ಕಾರ್ಯಾಗಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರತನ್ನದೆಯಾದ ಕಲ್ಪನೆ ಮೂಲಕ ಛಾಯಾಗ್ರಹಣ ಮಾಡುವುದರೊಂದಿಗೆ ಒಂದೊಂದು ಚಿತ್ರಗಳಿಗೂ ಅವಿನಾಭಾವ ಸಂಬಂಧ ಸೃಷ್ಟಿ ಮಾಡುವ ಕಲಾಕಾರರು ಛಾಯಾಗ್ರಾಹಕರು. ಯಾವುದೇ ಚಿತ್ರ ಕೇವಲವಲ್ಲ ಹಾಗೂ ಆ ಚಿತ್ರವನ್ನು ಸೃಷ್ಟಿಸಿದ ಕಲಾವಿದ, ಛಾಯಾಗ್ರಾಹಕ ಯಾವತ್ತೂ ಕೇವಲ ಅನ್ನಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಛಾಯಾಗ್ರಾಹಕರ ಮೌಲ್ಯ ಅಪಾರವಾದದ್ದು ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕುಂದಾಪುರದ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ, ಬೈಂದೂರು ವಲಯದ ವತಿಯಿಂದ ಆಯೋಜಿಸಲಾದ ಕೆನೋನ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ, ಬೈಂದೂರು ವಲಯ ಅಧ್ಯಕ್ಷ ದಿವಾಕರ ಶೆಟ್ಟಿ ವಹಿಸಿದ್ದರು.

ಈ ಸಂದರ್ಭ ಕೆನೋನ್ ತರಬೇತುದಾರ ಮ್ಯಾಥ್ಯೂ, ವ್ಯವಹಾರ ವ್ಯವಸ್ಥಾಪಕ ಅಜಯ್, ಸಂಘದ ಗೌರವಾಧ್ಯಕ್ಷ ಶ್ರೀಧರ್ ಹೆಗ್ಡೆ, ಸಲಹಾ ಸಮಿತಿ ಅಧ್ಯಕ್ಷ ದಿನೇಶ್ ಗೋಡೆ, ನಿಕಟಪೂರ್ವ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ ಮಠ, ಕೋಶಾಧಿಕಾರಿ ಹರೀಶ್ ಹಂಗಳೂರು, ಮಾಜಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಮೊದಲಾದವರು ಉಪಸ್ಥಿತರಿದ್ದರು.

ಶ್ರೀನಿವಾಸ್ ಶೇಟ್ ಪ್ರಾರ್ಥಿಸಿದರು. ದಿವಾಕರ ಶೆಟ್ಟಿ ಸ್ವಾಗತಿಸಿದರು. ಹರೀಶ್ ಹಂಗಳೂರು ವಂದಿಸಿದರು. ಉಪಾಧ್ಯಕ್ಷ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು.