ಶರಣರ ವಚನಗಳು ನಮ್ಮ ಬದುಕಿನ ಮೌಢ್ಯಗಳನ್ನು ಕಿತ್ತೆಸೆದು ಮೌಲ್ಯ ಬಿತ್ತುವ ಕೆಲಸ ಮಾಡುತ್ತವೆ. ಕಾಯಕ, ದಾಸೋಹದ ಮೂಲ ಮಂತ್ರಗಳನ್ನು ನಮ್ಮ ಸಮಾಜಕ್ಕೆ ಕೊಡುಗೆಯಾಗಿ ನೀಡಿದವರು ಶರಣರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಂಗಮನಾಥ ಲೋಕಾಪೂರ ಹೇಳಿದರು.

ನವಲಗುಂದ:

ಶರಣರ ವಚನಗಳು ನಮ್ಮ ಬದುಕಿನ ಮೌಢ್ಯಗಳನ್ನು ಕಿತ್ತೆಸೆದು ಮೌಲ್ಯ ಬಿತ್ತುವ ಕೆಲಸ ಮಾಡುತ್ತವೆ. ಕಾಯಕ, ದಾಸೋಹದ ಮೂಲ ಮಂತ್ರಗಳನ್ನು ನಮ್ಮ ಸಮಾಜಕ್ಕೆ ಕೊಡುಗೆಯಾಗಿ ನೀಡಿದವರು ಶರಣರು. ಅವರ ವಚನದ ಸಾರ ಬದುಕಿನ ದಾರಿ ದೀಪವಾಗಲಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಂಗಮನಾಥ ಲೋಕಾಪೂರ ಹೇಳಿದರು.

ಪಟ್ಟಣದ ಎ.ಬಿ. ಕೊಪ್ಪದ ಅವರ ಗುರು ಕಾರುಣ್ಯದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್‌ ಹಾಗೂ ಜಾನಪದ ಪರಿಷತ್‌ ಆಶ್ರಯದಲ್ಲಿ ಆಯೋಜಿಸಿದ್ದ ಮನೆ ಮನೆಯಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ರಾಮು ಮೂಲಗಿ ಅವರು ವಿವಿಧ ಹಬ್ಬಗಳ ವಿಶೇಷತೆ, ಮಹತ್ವದ ಬಗ್ಗೆ ಜಾನಪದ ಹಾಡುಗಳ ಮೂಲಕ ತಿಳಿಸಿದರು.

ಅಣ್ಣಪ್ಪ ಬಾಗಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್‌ ತಾಲೂಕಾಧ್ಯಕ್ಷ ಎ.ಬಿ. ಕೊಪ್ಪದ ಹಾಗೂ ಧಾರವಾಡ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಪ್ರಮಿಳಾ ಜಕ್ಕಣ್ಣವರ, ಹಿರಿಯ ಕಲಾವಿದ ಸಿ.ಬಿ. ಹೂಗಾರ, ಎಸ್.ಎಫ್‌. ನೀರಲಗಿ, ಪಿ.ಕೆ. ಹಿರೇಗೌಡ್ರ, ಶ್ರೀನಿವಾಸ ಅಮಾತೆಣ್ಣವರ, ಸಿದ್ಧಲಿಂಗೇಶ ಹಂಡಗಿ, ಪ್ರಕಾಶ ಹೂಗಾರ, ಗಣೇಶ ಹೂಳೆಯಣ್ಣವರ ಮಾತನಾಡಿದರು.

ಇದೇ ವೇಳೆ ನಾಗನೂರಿನ ಸಹಜ ಕೃಷಿಕ ರೈತ ಶೌಕತಅಲಿ ಲಂಬೂನವರ ಅವರನ್ನು ಸನ್ಮಾನಿಸಲಾಯಿತು. ಕೊಪ್ಪದ ಪರಿವಾರದಿಂದ ಸುಮಂಗಲಾ, ಕೊಪ್ಪದ ಹಾಗೂ ಸವಿತಾ ಉಳ್ಳಾಗಡ್ಡಿ ಅವರಿಂದ ಮಹಿಳೆಯರಿಗೆ ಉಡಿ ತುಂಬಿ ಮಣ್ಣಿನ ಪೂಜೆ ಪುಸ್ತಕ ನೀಡಲಾಯಿತು.

ವಸಂತ ಚಾಕಲಬ್ಬಿ, ಮಲ್ಲಿಕಾರ್ಜುನ ವಗ್ಗರ, ಬಸವರಾಜ ಯಲಿಗಾರ, ಡಿ.ಎಚ್. ಮಳಲಿ, ಪಿ.ಸಿ. ಸೂರಪ್ಪನವರ, ವೈ.ಕೆ. ಹಾಲವರ ಉಪಸ್ಥಿತರಿದ್ದರು. ಎನ್.ಎಚ್. ತಾಳಿಕೋಟಿಮಠ ವಚನ ಗಾಯನ ಮಾಡಿದರು. ಸಾತ್ವಿಕ ಕೊಪ್ಪದ ವಂದಿಸಿದರು. ಸಂಜೀವಗೌಡ, ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು.