ಸಾರಾಂಶ
ವಿಶ್ವ ಪರಿಸರದ ದಿನದ ಅಂಗವಾಗಿ ಮನೆಗೊಂದು ಮರ ದೇಶದ ಹಿತಕ್ಕೆ ವರ ಎನ್ನುವ ಘೋಷಣೆಯ ಮೂಲಕ ವಿದ್ಯಾರ್ಥಿಗಳು ಶಾಲಾ ಪರಿಸರದ ಸುತ್ತಮುತ್ತ ಗಿಡಗಳನ್ನು ನೆಟ್ಟರು.
ಮೂಲ್ಕಿ: ನಮ್ಮ ದೇಶದಲ್ಲಿ ವೃಕ್ಷಗಳನ್ನು ದೇವರ ಸಮಾನ ಎಂದು ಆರಾಧಿಸುತ್ತಾರೆ. ಇಂತಹ ಮಹತ್ವವುಳ್ಳ ಮರಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದು ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಜಿತೇಂದ್ರ ವಿ. ರಾವ್ ಹೇಳಿದರು.
ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜರುಗಿದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವ ಪರಿಸರದ ದಿನದ ಅಂಗವಾಗಿ ಮನೆಗೊಂದು ಮರ ದೇಶದ ಹಿತಕ್ಕೆ ವರ ಎನ್ನುವ ಘೋಷಣೆಯ ಮೂಲಕ ವಿದ್ಯಾರ್ಥಿಗಳು ಶಾಲಾ ಪರಿಸರದ ಸುತ್ತಮುತ್ತ ಗಿಡಗಳನ್ನು ನೆಟ್ಟು, ಶಾಲಾ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕಿ ಪ್ರಜ್ವಲ, ಶರ್ಮಿಳ, ವನಿತಾ, ಕಾಂತಿ, ನಿಶ್ಮಿತ, ವೀಣಾ, ದೀಪಿಕಾ, ಶ್ರೀಲತಾ, ದೀಪ, ಐಶ್ವರ್ಯ ಹಾಗೂ ವಿದ್ಯಾರ್ಥಿಗಳ ಉಪಸ್ಥಿತರಿದ್ದರು.