ಸಹಕಾರ ಸಂಘವು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೇ ಸದಸ್ಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಪೂರಕವಾಗಿ ಕಾರ್ಯ
ಕಂಪ್ಲಿ: ಪಟ್ಟಣದ ಪೇಟೆ ಬಸವೇಶ್ವರ ಸಭಾಂಗಣದಲ್ಲಿ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಜನ ಸಭೆ ನಡೆಯಿತು.
ಸಂಘದ ಅಧ್ಯಕ್ಷ ಎಚ್.ಜಗದೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದ್ದು, ₹5.06 ಕೋಟಿ ನಿವ್ವಳ ಲಾಭ ಗಳಿಸಿದೆ.ಸಂಘದ ಸದಸ್ಯರಿಗೆ ಶೇ. 24ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದರು.ಸಂಘವು ಪ್ರಸ್ತುತ 13,439 ಸದಸ್ಯರನ್ನು ಹೊಂದಿದ್ದು, ₹9.68 ಕೋಟಿ ಷೇರು ಬಂಡವಾಳ, ₹17.89 ಕೋಟಿ ವಿವಿಧ ನಿಧಿಗಳು ಹಾಗೂ ₹ 94.09 ಕೋಟಿ ವಿವಿಧ ಠೇವಣಿ ಹೊಂದಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ₹121.67 ಕೋಟಿಯಷ್ಟಿದ್ದು, ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸದಿಂದ ಸಂಸ್ಥೆ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ಒಟ್ಟು ₹107.05 ಕೋಟಿ ಸಾಲ ವಿತರಿಸಲಾಗಿದೆ. ಇದರಲ್ಲಿ ಶೇ.90ರಷ್ಟು ಸಾಲ ವಸೂಲಿ ಮಾಡಲಾಗಿದ್ದು, ಸಾಲ ವಸೂಲಾತಿ ಸಂಘ ಉತ್ತಮ ಸಾಧನೆ ಮಾಡಿದೆ. ಸಂಘದ ಆರ್ಥಿಕ ಶಿಸ್ತು ಹಾಗೂ ಸದಸ್ಯರ ಸಹಕಾರದಿಂದ ಉತ್ತಮ ಲಾಭ ಗಳಿಸಲು ಸಾಧ್ಯವಾಗಿದೆ ಎಂದರು.ಸಹಕಾರ ಸಂಘವು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೇ ಸದಸ್ಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರಿಗೆ ಅಗತ್ಯವಿರುವ ವಿವಿಧ ಸೌಲಭ್ಯ ಒದಗಿಸುವ ಮೂಲಕ ಸಂಘ ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಕೆ.ಈ. ವೆಂಕಟಸಿದ್ಧಾರ್ಥ, ಸಂಜಿತ್ ಪಾಟೀಲ್, ಟಿ.ಕೆ. ಸ್ವರಾಗ್, ಎಸ್.ಶ್ವೇತಾ, ಸಿ.ಕೆ.ರುದ್ರಯ್ಯಸ್ವಾಮಿ ಹಾಗೂ ಯು.ನಂದಿತ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಂಘದ 2025-26ನೇ ಸಾಲಿನ ಸಾಧನೆ,ಆರ್ಥಿಕ ವ್ಯವಹಾರ ಹಾಗೂ ವಿವಿಧ ಚಟುವಟಿಕೆಗಳ ವಿವರ ಪ್ರೊಜೆಕ್ಟರ್ ಮೂಲಕ ಸಭೆಯಲ್ಲಿ ಪ್ರದರ್ಶಿಸಲಾಯಿತು. ಸಂಘದ ಪ್ರಗತಿ ಹಾಗೂ ಮುಂದಿನ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಟಿ.ಕೊಟ್ರೇಶ್, ನಿರ್ದೇಶಕ ಎಚ್.ಮಂಜುನಾಥ, ಡಿ.ವೀರಪ್ಪ, ವಾಲಿ ಕೊಟ್ರಪ್ಪ, ಕೆ. ಸಣ್ಣ ಗವಿಸಿದ್ದಪ್ಪ, ಚಂದ್ರಶೇಖರಪ್ಪ ಬಣಗಾರ, ಜಿ.ವೀರನಗೌಡ, ಕವಿತಾಳ ಚನ್ನಪ್ಪ, ಡಾ.ವೀರನಗೌಡ ಎಸ್.ಪಾಟೀಲ್, ಕೆ. ಉಷಾರಾಣಿ, ಸಿ.ಎಚ್.ಫಕ್ಕೀರಪ್ಪ, ಎನ್.ಯಂಕಪ್ಪ, ಕಾರೆ ಪಂಪಾಪತಿ, ಕೆ.ಎಂ. ಸೌಭಾಗ್ಯಮ್ಮ, ಮುಖ್ಯ ಕಾರ್ಯ ನಿರ್ವಾಹಕ ಎಂ.ಲೋಕೇಶ್ವರರೆಡ್ಡಿ, ಶಾಖಾ ವ್ಯವಸ್ಥಾಪಕ ವಿಜಯ್,ಆರ್.ಮಂಜು, ಡಿ.ಜಿ. ಪಾಟೀಲ್, ಎನ್. ವೀರೇಶ್, ಬೀರಪ್ಪ, ಶಿವಪ್ಪ, ಸಿಬ್ಬಂದಿ ಟಿ.ಎಂ. ಕುತುಬುದ್ದೀನ್, ಎಸ್. ಅನುರೂಪ, ಕೆ. ಬುಡ್ಡಪ್ಪ, ವಿಜಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.