ಸಾರಾಂಶ
ಮೂಡಿಗೆರೆ: ಅಗಸ್ತ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಅನ್ನಪೂರ್ಣೇಶ್ವರಿ ದೇವಿ ಶ್ರೀ ಕ್ಷೇತ್ರದ ರೈತರಿಗೆ ಗ್ರಾಮಸ್ಥರಿಗೆ ನಾಡಿನ ಜನತೆಗೆ ಒಳಿತು ಮಾಡಿದ್ದಾಳೆ. ನಾವು ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತೇವೆಯೋ ಹಾಗೆಯೆ ಶ್ರೀ ಮಾತೆ ಜನಿಸಿರುವ ದಿನವನ್ನೆ ವರ್ಧಂತೋತ್ಸವ ಆಚರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಹೊರನಾಡು ಆಧಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.
ಮೂಡಿಗೆರೆ: ಅಗಸ್ತ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಅನ್ನಪೂರ್ಣೇಶ್ವರಿ ದೇವಿ ಶ್ರೀ ಕ್ಷೇತ್ರದ ರೈತರಿಗೆ ಗ್ರಾಮಸ್ಥರಿಗೆ ನಾಡಿನ ಜನತೆಗೆ ಒಳಿತು ಮಾಡಿದ್ದಾಳೆ. ನಾವು ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತೇವೆಯೋ ಹಾಗೆಯೆ ಶ್ರೀ ಮಾತೆ ಜನಿಸಿರುವ ದಿನವನ್ನೆ ವರ್ಧಂತೋತ್ಸವ ಆಚರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಹೊರನಾಡು ಆಧಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.ಶ್ರೀ ಕ್ಷೇತ್ರ ಹೊರನಾಡಿನಲ್ಲಿ 52ನೇ ವರ್ಷದ ವರ್ಧಂತೋತ್ಸವ ಅಂಗವಾಗಿ ನಡೆದ ಮೂಲ ಹೋಮಗಳಾದ ಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ವೇದ ಪಾರಾಯಣ ಮಾಡಿ ನಂತರ ಮಾತನಾಡಿದರು.
1973 ರ ಮೇ 5 ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ಶ್ರೀಚಕ್ರಾತ್ಮಕ ದಿವ್ಯ ಮಂದಿರದಲ್ಲಿ ಶ್ರೀ ಆದಿಶಕ್ತಿ ದೇವಿ ಪ್ರತಿಷ್ಠ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಿ ವರ್ಧಂತೋತ್ಸವ ದಂಧೆ ಪುನಃ ಪ್ರತಿಷ್ಠಾಪನೆ ನೆರವೇರಿಸಿದ್ದು, ಇದರ ಅಂಗವಾಗಿ 52ನೇ ವರ್ಷದ ವರ್ಧಂತೋತ್ಸವ ಆಚರಿಸಲಾಗುತ್ತಿದೆ. ದೇಶದ ಜನತೆ ಸುಭೀಕ್ಷೆಯಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಹೋಮ ಹವನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ವರ್ಧಂತೋತ್ಸವದ ಅಂಗವಾಗಿ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ತಂತ್ರಿಗಳಾದ ವೇದ ಬ್ರಹ್ಮಶ್ರೀ ಉದಯಶಂಕರ ಶರ್ಮ ನೇತೃತ್ವದಲ್ಲಿ ಪುರೋಹಿತರು ಈ ಹೋಮಗಳಲ್ಲಿ ಪಾಲ್ಗೊಂಡಿದ್ದರು.ರಾಜಲಕ್ಷ್ಮೀ ಬಿ. ಜೋಷಿ, ರಾಮನಾರಾಯಣ್ ಜೋಷಿ, ರಾಜಗೋಪಾಲ್ ಜೋಷಿ, ಗಿರಿಜಾಶಂಕರ್ ಬಿ. ಜೋಷಿ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.