ಸಾರಾಂಶ
ಉಡುಪಿ: 33/11 ಕೆವಿ ಉದ್ಯಾವರ ಉಪಸ್ಥಾವರದ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಟಪಾಡಿ, ಮೇಲ್ಪೇಟೆ, ಪಿತ್ರೋಡಿ, ಪಿತ್ರೋಡಿ ಇಂಡಸ್ಟ್ರಿಯಲ್, ಬಲಾಯಿಪಾದೆ, ಸಂಪಿಗೆನಗರ ಮತ್ತು ಕಡೆಕಾರು ಫೀಡರ್ ಮಾರ್ಗದಲ್ಲಿ ಕಟಪಾಡಿ, ಕೋಟೆ, ಏಣಗುಡ್ಡೆ, ಮೂಡಬೆಟ್ಟು, ಮಠದಂಗಡಿ, ಅಂಕುದ್ರು, ಬೋಳಾರ್ ಗುಡ್ಡೆ, ಗೋವಿಂದಗುಡ್ಡೆ, ಪಿತ್ರೋಡಿ, ಮುದ್ದಲಗುಡ್ಡೆ, ಪಿತ್ರೋಡಿ ಇಂಡಸ್ಟ್ರಿಯಲ್ ಏರಿಯಾ, ಬಲಾಯಿಪಾದೆ, ಕಟ್ಟೆಗುಡ್ಡೆ, ಎಸ್.ಡಿ.ಎಂ ಕಾಲೇಜು ಹತ್ತಿರ, ಗುಡ್ಡೆಯಂಗಡಿ, ಕಂಪನಬೆಟ್ಟು, ಬೈಲುಜಿಡ್ಡೆ, ಸಾಲ್ಮರ, ಕಲಾಯಿಬೈಲು, ಸಂಪಿಗೆನಗರ, ಕುತ್ಪಾಡಿ, ಅನಂತಕೃಷ್ಣನಗರ, ಕಡೆಕಾರ್, ಕಿದಿಯೂರು, ಪಡುಕೆರೆ, ಕನ್ನರ್ಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 4ರಂದು ಬೆಳಗ್ಗೆ 9.30 ಗಂಟೆಯಿಂದ 5.30 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ.
-------------------------------ಟೆರೇಸ್‌ನಿಂದ ಬಿದ್ದು ಮುಖ್ಯ ಶಿಕ್ಷಕ ಸಾವು
ಕಾರ್ಕಳ: ಟೆರೇಸಿನಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮರ್ಣೆ ಗ್ರಾಮ ಬೊಂಡುಕುಮೇರಿಯಲ್ಲಿ ಸಂಭವಿಸಿದೆ.ಸುಂದರ್ ನಾಯ್ಕ (55) ಮೃತ ಶಿಕ್ಷಕ. ಇವರು ಎಣ್ಣೆಹೊಳೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಮೇ 1 ರಂದು ರಾತ್ರಿ ಸುಮಾರು 10.30 ವೇಳೆಗೆ ಮನೆಯ ಟೆರೇಸಿಯಲ್ಲಿ ಮಲಗಿದ್ದರು. ಬೆಳಗ್ಗೆ 6.30ರ ವೇಳೆಗೆ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ನಿದ್ರೆಯ ಮಂಪರಿನಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎನ್ನಲಾಗುತ್ತಿದೆ. ಮೃತರು ಪತ್ನಿ ಮತ್ತು ಇಬ್ಬರು ಅವಳಿ ಪುತ್ರಿಯರನ್ನು ಅಗಲಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))