ಸಾರಾಂಶ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧೀನದಲ್ಲಿ ಬರುವ ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದ ಮುಖಾಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧೀನದಲ್ಲಿ ಬರುವ ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದ ಮುಖಾಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಜೂನಿಯರ್ ಪ್ರೊಸೆಸ್ ಆಪರೇಟರ್ ಉದ್ಯೋಗ:
ಐಟಿಐ ಉತ್ತೀರ್ಣ (ಎಲ್ಲ ತಾಂತ್ರಿಕ ಟ್ರೇಡ್‌ಗಳು) ಮತ್ತು ಹೊಸದಾಗಿ ಐಟಿಐ ತೇರ್ಗಡೆಯಾದ ಹಾಗೂ ಐಟಿಐ ತರಬೇತಿಯ ನಂತರ ಕೆಲಸದ ಅನುಭವ ಇರುವ ಅಭ್ಯರ್ಥಿಗಳಿಗೆ ಯುಎಇನಲ್ಲಿ ಜೂನಿಯರ್ ಪ್ರೊಸೆಸ್ ಆಪರೇಟರ್ ಹುದ್ದೆಗಳಲ್ಲಿ ಉದ್ಯೋಗಾವಕಾಶಗಳಿವೆ. ಕರ್ತವ್ಯದ ಸಮಯ ದಿನಕ್ಕೆ 11 ಗಂಟೆ (೮ ಗಂಟೆ ಸಾಮಾನ್ಯ ಶಿಫ್ಟ್ + 3 ಗಂಟೆ ಹೆಚ್ಚುವರಿ). ಆಹಾರ, ವಸತಿ, ಸಾರಿಗೆ, ಆರೋಗ್ಯ ಮತ್ತು ಜೀವ ವಿಮೆಯು ಕಂಪೆನಿಯಿಂದ ಉಚಿತವಾಗಿರುತ್ತದೆ. 2 ವರ್ಷಕ್ಕೆ 60 ದಿನ ವೇತನ ಸಹಿತ ರಜೆ. ಉಚಿತ ಉದ್ಯೋಗ ವೀಸಾ ನೀಡಲಾಗುತ್ತದೆ. ವಿಮಾನ ಟಿಕೆಟ್ ಅಭ್ಯರ್ಥಿಯೇ ಖರೀದಿಸಬೇಕು. ಸಂದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ.ಪುರುಷ ನರ್ಸ್ (ಕೈಗಾರಿಕಾ ಕ್ಷೇತ್ರದಲ್ಲಿ) ಉದ್ಯೋಗ:
40 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು. ವೀಸಾ ಮತ್ತು ವಿಮಾನ ಟಿಕೆಟ್ ಉಚಿತ. ಉಚಿತ ವಸತಿ, ಸಾರಿಗೆ ವ್ಯವಸ್ಥೆ, ವೈದ್ಯಕೀಯ ವಿಮೆ ಮತ್ತು ಆಹಾರ (ದೂರದ ಪ್ರದೇಶಗಳಲ್ಲಿ ನಿಯೋಜಿಸಿದ್ದರೆ) ಲಭ್ಯ. 30 ದಿನಗಳ ವೇತನ ಸಹಿತ ರಜೆ ನೀಡಲಾಗುತ್ತದೆ. ಸಂದರ್ಶನ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.ಪುರುಷ ಭದ್ರತಾ ಸಿಬ್ಬಂದಿ:
10ನೇ ತರಗತಿ ಉತ್ತೀರ್ಣ ಅಥವಾ ಹೆಚ್ಚಿನ ಶಿಕ್ಷಣ ಹೊಂದಿರುವ ಪುರುಷ ಅಭ್ಯರ್ಥಿಗಳಿಗೆ ಯುಎಇನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಯಲ್ಲಿ ಉದ್ಯೋಗವಕಾಶವಿದೆ. 25ರಿಂದ 40 ವರ್ಷದೊಳಗಿನ ಆಸಕ್ತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ 2 ವರ್ಷ ಸೇನೆ, ಪೊಲೀಸ್, ಖಾಸಗಿ ಭದ್ರತೆ, ಇತ್ಯಾದಿ ವಲಯಗಳಲ್ಲಿ ವೃತ್ತಿ ಸೇವಾನುಭವ ಹೊಂದಿರಬೇಕು. ಕನಿಷ್ಠ 5 ಅಡಿ 9 ಇಂಚು ಎತ್ತರವಿರಬೇಕು. ಯಾವುದೇ ಕಾಯಿಲೆಗಳು ಇರಬಾರದು, ದೃಷ್ಟಿ ಮತ್ತು ಶ್ರವಣದೋಷ ಇರಬಾರದು (ಕನ್ನಡಕ/ ಶ್ರವಣ ಸಹಾಯಕ ಉಪಯೋಗಿಸುತ್ತಿರಬಾರದು). ದೇಹದಲ್ಲಿ ನೇರವಾಗಿ ಗೋಚರಿಸುವಂತಹ ಹಚ್ಚೆ/ ಟ್ಯಾಟೂ ಹಾಕಿಸಿಕೊಂಡಿರಬಾರದು. ಇಂಗ್ಲಿಷ್ ಮಾತನಾಡಲು, ಓದಲು, ಬರೆಯಲು ಕಡ್ಡಾಯವಾಗಿ ಬರಬೇಕು. ವಸತಿ, ಸಾರಿಗೆ ವ್ಯವಸ್ಥೆ ಉಚಿತ. ಸಂದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ.ಸಿರಾಮಿಕ್ಸ್ ಉತ್ಪಾದನಾ ಘಟಕದಲ್ಲಿ ಉದ್ಯೋಗ:
ಯುಎಇನಲ್ಲಿ ಸಿರಾಮಿಕ್ಸ್ ಉತ್ಪಾದನಾ ಘಟಕದಲ್ಲಿ ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ ಹೊಂದಿರುವ ಪುರುಷ ಅಭ್ಯರ್ಥಿಗಳಿಗೆ ಹಲವು ಹುದ್ದೆಗಳಲ್ಲಿ ಅವಕಾಶವಿದೆ. ಬಾಡಿ ಪ್ರಿಪರೇಶನ್ಸ್ ಇನ್‌ಚಾರ್ಜ್ ಹುದ್ದೆಗೆ ಡಿಪ್ಲೋಮಾ ಇನ್ ಸಿರಾಮಿಕ್ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. 3 ವರ್ಷ ವೃತ್ತಿ ಅನುಭವ ಹೊಂದಿರಬೇಕು.ಪ್ರೆಸ್ ಮೆಕ್ಯಾನಿಕ್ ಹುದ್ದೆಗೆ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. 1-3 ವರ್ಷ ವೃತ್ತಿ ಅನುಭವ ಹೊಂದಿರಬೇಕು. ಡಿಸೈನರ್ ಹುದ್ದೆಗೆ ಡಿಪ್ಲೋಮಾ ಇನ್ ಸಿರಾಮಿಕ್ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. 1-3 ವರ್ಷ ವೃತ್ತಿ ಅನುಭವ ಹೊಂದಿರಬೇಕು. ಪ್ರೊಡಕ್ಷನ್ ಸೂಪರ್‌ವೈಸರ್ ಹುದ್ದೆಗೆ ಬಿ.ಇ/ ಡಿಪ್ಲೊಮಾ ಇನ್ ಸಿರಾಮಿಕ್ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. 1-3 ವರ್ಷ ವೃತ್ತಿ ಅನುಭವ ಹೊಂದಿರಬೇಕು. ಪಾಲಿಶಿಂಗ್ ಮೆಕ್ಯಾನಿಕ್ ಹುದ್ದೆಗೆ ಐಟಿಐ/ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಸಿ.ವಿ ಮತ್ತು ದಾಖಲೆಗಳನ್ನು hr.imck@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಅಂತಾರಾಷ್ಟ್ರೀಯ ವಲಸೆ ಕೇಂದ್ರ– ಕರ್ನಾಟಕ, 4ನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಡೈರಿ ವೃತ್ತ, ಬನ್ನೇರುಘಟ್ಟ ಮುಖ್ಯರಸ್ತೆ, ಬೆಂಗಳೂರು - ಈ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.