ಸಾರಾಂಶ
ಗ್ರಂಥಾಲಯದ ಓದುಗರ ಸಂಖ್ಯೆ ಹೆಚ್ಚಿಸಲು ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಹರಿಹರದಲ್ಲಿ ಹೇಳಿದ್ದಾರೆ.
- ಹರಿಹರದಲ್ಲಿ ಪುಸ್ತಕ ಪ್ರದರ್ಶನ, ಸದಸ್ಯತ್ವ ಅಭಿಯಾನ ಪಿ.ಆರ್.ತಿಪ್ಪೇಸ್ವಾಮಿ - - - ಕನ್ನಡಪ್ರಭ ವಾರ್ತೆ ಹರಿಹರ
ಗ್ರಂಥಾಲಯದ ಓದುಗರ ಸಂಖ್ಯೆ ಹೆಚ್ಚಿಸಲು ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಹೇಳಿದರು.ಗ್ರಂಥಾಲಯ ಇಲಾಖೆ ಮತ್ತು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಆಚರಣೆ ನಿಮಿತ್ತ ಜಿಲ್ಲಾ ಕೇಂದ್ರ ಗ್ರಂಥಾಲಯದ ಹರಿಹರ ಶಾಖೆಯಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನ, ಸದಸ್ಯತ್ವ ಅಭಿಯಾನ ಮತ್ತು ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಂಥಾಲಯಕ್ಕೆ ಓದುಗರನ್ನು ಸೆಳೆಯಲು ಸದಸ್ಯತ್ವ ಅಭಿಯಾನ,ವಿಶೇಷ ಪುಸ್ತಕಗಳ ಸಂಗ್ರಹ ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.
ದಾವಣಗೆರೆ ನಗರ ವ್ಯಾಪ್ತಿಯ 9 ಮತ್ತು ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ ತಾಲೂಕು ಕೇಂದ್ರಗಳ 4 ಸೇರಿ ಒಟ್ಟು ಒಂಬತ್ತು ಶಾಖಾ ಗ್ರಂಥಾಲಯಗಳಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ನಿಮಿತ್ತ ಪುಸ್ತಕ ಪ್ರದರ್ಶನ, ಸದಸ್ಯತ್ವ ಆಂದೋಲನ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಮಾತನಾಡಿ, ನಗರದ ಗ್ರಂಥಾಲಯ ಇಷ್ಟೊಂದು ಆಧುನಿಕವಾಗಿರುವುದು ತಮಗೆ ತಿಳಿದೆ ಇರಲಿಲ್ಲ. ತಾಲೂಕಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬೇಕು. ಗ್ರಂಥಾಲಯದ ಅಭಿವೃದ್ಧಿಗೆ ನಗರಸಭೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಮಾತನಾಡಿದರು. ರಾಜ್ಯ ಮಕ್ಕಳ ಪರಿಷತ್ ಜಿಲ್ಲಾಧ್ಯಕ್ಷ ಡಿ.ಫ್ರಾನ್ಸಿಸ್ ಕ್ಷೇವಿಯರ್ ಉಪನ್ಯಾಸ ನೀಡಿದರು. ಗ್ರಂಥಾಲಯ ಸಪ್ತಾಹದ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಹುಮಾನ ವಿತರಿಸಲಾಯ್ತು. ಗ್ರಂಥಾಲಯ ಸಹಾಯಕ ರವಿಕುಮಾರ್, ಜಿಲ್ಲಾ ಗ್ರಂಥಾಲಯದ ಮಂಜುನಾಥ ಬಗರಿ, ಕೆ.ಎಚ್. ಹರೀಶ್, ಬಿ.ಇ.ಮಹಾಸ್ವಾಮಿ, ಗೋಪಾಲಕೃಷ್ಣ, ರಮೇಶ, ಸುರೇಶ್, ಅರುಂದತಿ ಸಂಜಯ್ ಪಿ., ಓದುಗರಿದ್ದರು.- - -
-21ಎಚ್‍ಆರ್‍ಆರ್02:ಹರಿಹರದಲ್ಲಿ ಗ್ರಂಥಾಲಯ ಇಲಾಖೆ ಮತ್ತು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಆಚರಣೆ ನಡೆಯಿತು.