ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

| Published : Jan 06 2025, 01:01 AM IST

ಸಾರಾಂಶ

ಪಾಲಿಕೆ ವಾರ್ಡ್ ನಂ.42 ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸರಸ್ವತಿಪುರಂನ 4ನೇ ಮುಖ್ಯ ರಸ್ತೆಯಿಂದ ಹಾದು ಹೋಗುವ ದೊಡ್ಡ ಮಳೆ ನೀರು ಚರಂಡಿ ನಿರ್ಮಾಣ

ಕನ್ನಡಪ್ರಭ ವಾರ್ತೆ ಮೈಸೂರು

ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ವಿವಿಧ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.

ಪಾಲಿಕೆ ವಾರ್ಡ್ ನಂ.42 ರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸರಸ್ವತಿಪುರಂನ 4ನೇ ಮುಖ್ಯ ರಸ್ತೆಯಿಂದ ಹಾದು ಹೋಗುವ ದೊಡ್ಡ ಮಳೆ ನೀರು ಚರಂಡಿ ನಿರ್ಮಾಣ, ಟಿಟಿಎಲ್ ಕಾಲೇಜು ಮುಂಭಾಗದಿಂದ ಫೈರ್ ಬ್ರಿಗೇಡ್ ವರೆಗೆ ಚರಂಡಿ ಮತ್ತು ಪಾದಚಾರಿ ಮಾರ್ಗ ಹಾಗೂ ಫೈರ್ ಬ್ರಿಗೇಡ್ ನಿಂದ ಏಕಲವ್ಯ ವೃತ್ತದವರೆಗೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಜೆಎಲ್ ಬಿ ರಸ್ತೆಯ ಮೂಡಾ ಕಚೇರಿಯಿಂದ ಹಳೇ ಜಿಲ್ಲಾಧಿಕಾರಿಯವರ ಕಚೇರಿಯವರೆಗೆ, ಜಿಲ್ಲಾ ನ್ಯಾಯಾಲಯದ ಮುಂಭಾಗದ ರಸ್ತೆ ಹಾಗೂ ಇತರೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು.

ಮಾಜಿ ಮೇಯರ್ ಗಳಾದ ಮೋದಾಮಣಿ, ಟಿ.ಬಿ. ಚಿಕ್ಕಣ್ಣ, ಮುಖಂಡರಾದ ಭಾಸ್ಕರ್ ಗೌಡ, ರಾಜಣ್ಣ, ಶ್ರೀನಿವಾಸ್, ಬಂದಿಗೌಡ, ವಿಶ್ವನಾಥ್, ನಾಗರಾಜು, ರವಿ, ದೀಪು ಪ್ರದೀಪ್, ಮಹೇಶ್, ಸತೀಶ್, ಗಿರೀಶ್, ಪಾಲಿಕೆ ವಲಯ ಕಚೇರಿ 3ರ ಅಧಿಕಾರಿಗಳಾದ ಸತ್ಯಮೂರ್ತಿ, ಮಧುಸೂದನ್, ತೇಜಸ್ವಿನಿ ಮೊದಲಾದವರು ಇದ್ದರು.