ಸಾರಾಂಶ
ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿದ 2025ನೇ ಸಾಲಿನ ವಿಶ್ವದ ಶೇ.2ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಶಿವಮೊಗ್ಗದ ಡಾ। ಆರ್.ಎಸ್.ವರುಣ್ ಕುಮಾರ್ ಸತತ 3ನೇ (2023, 2024, 2025) ಬಾರಿಗೆ ಸ್ಥಾನ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿದ 2025ನೇ ಸಾಲಿನ ವಿಶ್ವದ ಶೇ.2ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಶಿವಮೊಗ್ಗದ ಡಾ। ಆರ್.ಎಸ್.ವರುಣ್ ಕುಮಾರ್ ಸತತ 3ನೇ (2023, 2024, 2025) ಬಾರಿಗೆ ಸ್ಥಾನ ಪಡೆದಿದ್ದಾರೆ.ಸ್ಟ್ಯಾನ್‌ಫೋರ್ಡ್ ವಿವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ವರದಿ, ಉಲ್ಲೇಖಗಳು ಹಾಗೂ ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ನಾನಾ ಮಾನದಂಡಗಳನ್ನು ಪರಿಗಣಿಸಿ ಜಾಗತಿಕವಾಗಿ ಸಿದ್ಧಪಡಿಸಿರುವ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಈ ವರ್ಷವೂ ಡಾ। ವರುಣ್ ಕುಮಾರ್ ಅವರು ಸ್ಥಾನ ಪಡೆದಿದ್ದು, ಪ್ರಸ್ತುತ 2025ನೇ ಸಾಲಿನ ಪಟ್ಟಿಯಲ್ಲಿ ಇವರು ಕ್ರಮವಾಗಿ 11379, 44028, 54518, 121882, 124671 ಶ್ರೇಯಾಂಕಗಳನ್ನು ಪಡೆದಿದ್ದಾರೆ.
ಮಲೇಶಿಯಾದ ಸನ್-ವೇ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಡಾ। ವರುಣ್ ಕುಮಾರ್ ಅವರು ಪತ್ರಕರ್ತ ಎನ್.ರವಿಕುಮಾರ್ (ಟೆಲೆಕ್ಸ್), ಶಶಿಕಲಾ ದಂಪತಿ ಪುತ್ರರಾಗಿದ್ದಾರೆ.