ದಿ.ವಸಂತ ನಿಲಜಗಿ ಸಾಮಾಜಿಕ ಕಾರ್ಯ ಅಜರಾಮರ:ಮಂಜುನಾಥ ಶ್ರೀ

| Published : Jul 10 2024, 12:40 AM IST / Updated: Jul 10 2024, 12:41 AM IST

ಸಾರಾಂಶ

ಹುಕ್ಕೇರಿ ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಜಿನೈಕ್ಯ ವಸಂತ ನಿಲಜಗಿ ಅವರ 6ನೇ ಪುಣ್ಯಸ್ಮರಣೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜನಪರ ಕಾರ್ಯಗಳಿಂದ ಇತರರಿಗೆ ಮಾದರಿಯಾಗುವ ಭಾಗ್ಯ ಬೆರಳಣಿಕೆಯಷ್ಟು ಜನರಿಗೆ ಲಭಿಸುತ್ತದೆ. ಅಂಥವರ ಸಾಲಿಗೆ ದಿ.ವಸಂತ ನಿಲಜಗಿ ಅವರನ್ನು ಅಗ್ರಸ್ಥಾನದಲ್ಲಿ ಗುರುತಿಸಬಹುದು ಎಂದು ಕ್ಯಾರಗುಡ್ಡ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಜಿನೈಕ್ಯ ವಸಂತ ನಿಲಜಗಿ ಅವರ 6ನೇ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಸಂತರ ಸಾಮಾಜಿಕ ಕಾರ್ಯಗಳು ಇಂದಿಗೂ ಅಜರಾಮರವಾಗಿವೆ ಎಂದರು.

ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಪತ್ರಕರ್ತ ಬಾಬು ಸುಂಕದ, ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜೀವ ಚೌಗಲಾ ಮಾತನಾಡಿ, ದಿ.ವಸಂತ ನಿಲಜಗಿ ಅವರು ಕೈಗೊಂಡ ಜನಪರ ಕಾರ್ಯಗಳನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ತಂದೆ ಸ್ಥಾಪಿಸಿದ ಸಂಘ-ಸಂಸ್ಥೆಗಳು ಜನರ ಬದುಕಿಗೆ ಆರ್ಥಿಕ ಸದೃಢತೆಗೆ ಸಹಕಾರಿಯಾಗಿವೆ. ಅವರ ತತ್ವ ಸಿದ್ಧಾಂತಗಳ ಮಾರ್ಗದರ್ಶನದಿಂದ ತಮ್ಮ ಸಮೂಹ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ ಎಂದರು.

ವಿಜಯಮಾಲಾ ನಿಲಜಗಿ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ, ಬಿ.ಬಿ.ಲಠ್ಠಿ, ವಿಕಾಸ ಖತಗಲ್ಲಿ, ಕಿರಣ ಸೊಲ್ಲಾಪೂರೆ, ರಾಜೇಂದ್ರ ಪಾಟೀಲ, ಸಂತೋಷ ರಜಪೂತ, ಪ್ರವೀಣ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಿನೈಕ್ಯ ವಸಂತ ನಿಲಜಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.