ನಟರಾಜ್ ಜೋಯಿಸ್, ಶರತ್ ಕುಮಾರ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ

| Published : Aug 27 2024, 01:30 AM IST

ನಟರಾಜ್ ಜೋಯಿಸ್, ಶರತ್ ಕುಮಾರ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಜನಸಂಖ್ಯೆಯಲ್ಲಿ ಯುವಶಕ್ತಿಯ ಪ್ರಮಾಣವನ್ನು ಕಡಿಮೆಗೊಳಿಸುವ, ಅಸಮಾನತೆ ಸೃಷ್ಟಿಸುವ ಸನ್ನಿವೇಶ ಉಂಟಾಗುತ್ತಿದೆ. ಒಂದೇ ಮಗು ಸಾಕು ಎನ್ನುವ ಆಲೋಚನೆಯೂ ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ನಿಂದ ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 18ನೇ ಆರಾಧನಾ ಮಹೋತ್ಸವದಲ್ಲಿ ಮೆಡಿವೇವ್ ಸಂಸ್ಥಾಪಕ ಡಾ.ಸಿ. ಶರತ್ ಕುಮಾರ್ ಮತ್ತು ಸಂಧ್ಯಾ ಸುರಕ್ಷಾ ಟ್ರಸ್ಟ್ ಸಂಸ್ಥಾಪಕ ಬಿ.ಆರ್. ನಟರಾಜ ಜೋಯಿಸ್ ಅವರಿಗೆ ವಾಸುದೇವ ಮಹಾರಾಜ್ ಸದ್ಭಾವನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿದ ಡಾ.ಸಿ. ಶರತ್ ಕುಮಾರ್ ಮಾತನಾಡಿ, ಫ್ಯಾಮಿಲಿ ಪ್ಲಾನಿಂಗ್ ಮತ್ತು ಭ್ರೂಣ ಹತ್ಯೆಗಳು ಇಂದು ಸಮಾಜದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸುತ್ತಿವೆ. ಇದನ್ನು ತಡೆದರೆ ದೇಶವೂ ಮುಂದಿನ 50 ವರ್ಷ ನೆಮ್ಮದಿಯಿಂದ ಇರಬಹುದು ಎಂದರು.ದೇಶದಲ್ಲಿ ಜನಸಂಖ್ಯೆಯಲ್ಲಿ ಯುವಶಕ್ತಿಯ ಪ್ರಮಾಣವನ್ನು ಕಡಿಮೆಗೊಳಿಸುವ, ಅಸಮಾನತೆ ಸೃಷ್ಟಿಸುವ ಸನ್ನಿವೇಶ ಉಂಟಾಗುತ್ತಿದೆ. ಒಂದೇ ಮಗು ಸಾಕು ಎನ್ನುವ ಆಲೋಚನೆಯೂ ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಮಕ್ಕಳನ್ನು ಹೆರಲು ಹಿಂಜರಿಕೆ ಬೇಡ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಅತ್ಯಗತ್ಯ ಎಂದು ಅವರು ಹೇಳಿದರು.ನಂತರ ವಿನಾಯಕ ಹೊನ್ನಾವರ ಅವರು ಕೊಳಲು ವಾದನ ಪ್ರಸ್ತುತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಕೆ.ಆರ್. ಯೋಗಾನರಸಿಂಹನ್, ಸಮಾಜ ಸೇವಕ ಕೆ. ರಘುರಾಂ, ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಂ.ವಿ. ನಾಗೇಂದ್ರಬಾಬು, ಮುಖ್ಯ ನಿರ್ವಾಹಕ ಎನ್. ಅನಂತ್, ಕಾರ್ಯಕಾರಿ ಸಮಿತಿ ಸದಸ್ಯ ಎಂ. ಮೋಹನ್ ಮೊದಲಾದವರು ಇದ್ದರು.