ನರೇಗ ಯೋಜನೆಯಡಿ ಆಗ ಶೇ. ೯೦ರಷ್ಟು ಹಣ ಕೇಂದ್ರ ಭರಿಸುತ್ತಿದ್ದು, ರಾಜ್ಯ ಸರ್ಕಾರ ಶೇ. 10ರಷ್ಟು ಭರಿಸಬೇಕಾಗಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಸಚಿವ ಈಶ್ವರ ಭೀಮಣ್ಣ ಖಂಡ್ರೆ ವಾಗ್ದಾಳಿ
ಕನ್ನಡಪ್ರಭ ವಾರ್ತೆ ಮಾಲೂರುಕೇಂದ್ರ ಸರ್ಕಾರದ ಅವೈಜ್ಞಾನಿಕ ವಿಬಿ ಜಿ ರಾಮ್ ಜಿ ಯೋಜನೆಯಿಂದ ೩೮೦೦೦ ಕೋಟಿ ರು.ಗಳ ಹೆಚ್ಚುವರಿಯಾಗಿದ್ದು, ರಾಜ್ಯದ ಅರ್ಥಿಕ ಸ್ಥಿತಿ ಕಾಪಾಡಿಕೊಳ್ಳಲು ದೊಡ್ಡ ಹೊಡೆತ ಇದ್ದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಸಚಿವ ಈಶ್ವರ ಭೀಮಣ್ಣ ಖಂಡ್ರೆ ಹೇಳಿದರು.
ಅವರು ಮಾಲೂರಿನಲ್ಲಿ ಸ್ಥಳೀಯ ಶಾಸಕ ನಂಜೇಗೌಡ ಆಯೋಜಿಸಿದ್ದ ೩೨೦೦ ಕೋಟಿ ರು.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರದಲ್ಲಿ ಸೊನೀಯಾ ಗಾಂಧಿ ಆಶಯದಂತೆ ೨೦೦೬ ರಲ್ಲಿ ಪ್ರಾರಂಭವಾಗಿದ್ದ ನರೇಗ ಯೋಜನೆಯು ಜನರು ಗುಳೆ ಹೋಗದಂತೆ ತಡೆಯುವ ಜತೆಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿತ್ತು. ನರೇಗ ಯೋಜನೆಯಡಿ ಆಗ ಶೇ. ೯೦ರಷ್ಟು ಹಣ ಕೇಂದ್ರ ಭರಿಸುತ್ತಿದ್ದು, ರಾಜ್ಯ ಸರ್ಕಾರ ಶೇ. 10ರಷ್ಟು ಭರಿಸಬೇಕಾಗಿತ್ತು.ಆದರೆ ಈಗ ಕೇಂದ್ರ ಸರ್ಕಾರವು ತಮ್ಮ ಹೊರೆಯನ್ನು ರಾಜ್ಯಗಳ ಮೇಲೆ ಹಾಕುತ್ತಿದ್ದು, ಶೇ. ೪೦ರಷ್ಟು ಹಣವನ್ನು ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಇದು ಹೆಚ್ಚು ವರಿ ಹೊರೆಯಾಗಿದೆ ಎಂದ ಮಂತ್ರಿಗಳು ಯೋಜನೆ ಪ್ರಾರಂಭವಾಗಿ ೯ ತಿಂಗಳಲ್ಲೇ ೩೮ ಸಾವಿರ ಕೋಟಿ ಹಣ ನೀಡಬೇಕಾಗಿ ಬಂದಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ತಕ್ಷಣ ಉದ್ಯೋಗ ಅರಿಸಿ ಗುಳೆ ಹೋಗಬಾರದು ಎಂದು ತಕ್ಷಣ ಈ ಯೋಜನೆಗೆ ಅನುಮೋದನೆ ನೀಡಿದರು ಎಂದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ನನಗೆ ೧೯೮೬ ರಿಂದ ರಾಜಕೀಯದಲ್ಲಿ ಹಂತಹಂತವಾಗಿ ಬೆಳೆಸಿದ ಮಾಲೂರಿನ ಜನತೆಯೇ ನನಗೆ ಗಾಢ ಫಾದರ್ ಆಗಿದ್ದಾರೆ. ರಾಜಕೀಯ ಪಲ್ಲಟದಲ್ಲಿ ಜೆಡಿಎಸ್ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ವಾಪಾಸು ಆಗಿದ್ದಾಗ ತಾಲೂಕಿನಲ್ಲಿ ಕಾಂಗ್ರೆಸ್ ಗೆ ಕೇವಲ ೧೦ ಸಾವಿರ ಮತಗಳಿದ್ದವು. ನನ್ನ ಮೇಲೆ ನಂಬಿಕೆ ಇಟ್ಟ ಜನರ ನಂಬಿಕೆ ಹುಸಿಯಾಗದಂತೆ ನೀಡಿರುವ ಆಡಳಿತದಿಂದ ಎರಡು ಬಾರಿ ಶಾಸಕನಾಗಿ ಕ್ಷೇತ್ರದ ಜನತೆ ಆರಿಸಿದ್ದಾರೆ. ಕೋಲಾರ ಚಿಕ್ಕಬಳ್ಳಾಪು ಜಿಲ್ಲೆಯಲ್ಲಿ ಒಬ್ಬರನ್ನು ಮಂತ್ರಿ ಮಾಡಲು ಆಗದಿದ್ದರೂ ಪರವಾಗಿಲ್ಲ. ನಮಗೆ ಹೆಚ್ಚಿನ ಅನುದಾನ ನೀಡಿ ಇನ್ನಷ್ಟು ಶಕ್ತಿವಂತರಾಗಿ ಮಾಡಿದರೆ ಜಿಲ್ಲೆಯ ಎಲ್ಲ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಆಯ್ಕೆಯಾಗಿ ಮುಂದಿನ ೨೦೨೮ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬರಲಿದೆ ಎಂದರು.ಎಸ್.ಎನ್.ನಾರಾಯಣಸ್ವಾಮಿ ಸಮಾಧಾನಪಡಿಸಿದ ಶಾಸಕ:
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾಧಿಕಾರಿ ರವಿಕುಮಾರ್ ಸ್ವಾಗತ ಮಾಡುತ್ತಿದ್ದಾಗ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಹೆಸರು ಹೇಳಿದಾಗ ಶಾಸಕ ನಂಜೇಗೌಡರಿಂದ ಗೌರವ ಸ್ವೀಕರಿಸಲು ನಿರ ಕರಿಸಿದರು. ಆ ವೇಳೆಯ ಅವರಿದ್ದ ಸ್ಥಳಕ್ಕೆ ಧಾವಿಸಿದ ಶಾಸಕ ನಂಜೇಗೌಡ ನಾರಾಯಣಸ್ವಾಮಿ ಕೈಹಿಡಿದು ಕೊಂಡು ಮುಂದೆ ಕರೆದುಕೊಂಡು ಬಂದು ಗೌರವ ಸಲ್ಲಿಸಿದರು. ನಂತರ ಮಂತ್ರಿ ಮಾಡಲಿಲ್ಲ ಎಂದು ಕೋಪಗೊಂಡಿದ್ದ ನಾರಾಯಣಸ್ವಾಮಿ ಅವರ ಪಕ್ಕದಲ್ಲಿ ಕುಳಿತ ಮಾಜಿ ಸಚಿವ ಎಂ.ಸಿ.ಸುಧಾಕರ್ ನಾರಾಯಣಸ್ವಾಮಿ ಅವರನ್ನು ಸಾಮಾಧಾನ ಪಡಿಸುತ್ತಿದ್ದು ಕಂಡು ಬಂದಿತ್ತು.ಕಾರ್ಯಕ್ರಮದಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬಂದವರಿಗಾಗಿ ಶಾಸಕ ನಂಜೇಗೌಡ ಅವರು ಕೊಡುಗೆಯಾಗಿ ಸೀರೆ, ನೀರಿನ ಬಾಟಲು, ಆಹಾರ ಪೊಟಣ್ಣ ವಿತರಿಸಿದರು. ಇದಕ್ಕಾಗಿ ವೇದಿಕೆ ಸುತ್ತಲೂ ೪೮ ಕೌಂಟರ್ ಗಳನ್ನು ತೆರೆಯಲಾಗುತ್ತು. ಸಮಾರಂಭಕ್ಕೆ ಕರೆತರಲು ಬಸ್ ನವ್ಯವಸ್ಥೆ ಮಾಡಲಾಗಿತ್ತು.