ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಎಚ್.ಡಿ. ಕೋಟೆ ತಾಲೂಕು ಶ್ರೀ ವೇದಮಾತ ಗಾಯಿತ್ರಿ ಬ್ರಾಹ್ಮಣ ಸಂಘದ ವತಿಯಿಂದ ಮಂಗಳವಾರ ಪಟ್ಟಣದ ಆಡಳಿತಸೌಧದ ಸಭಾಂಗಣದಲ್ಲಿ ಶ್ರೀ ಶಂಕರಚಾರ್ಯರ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮ ಹಾಗೂ ಅದ್ದೂರಿಯಾಗಿ ನೆರವೇರಿತು.ನಿವೃತ್ತ ಉಪ ಪ್ರಾಂಶುಪಾಲ ಎಂ.ಸಿ. ಉಮಾಶಂಕರ್ ಮಾತನಾಡಿ, ಈ ಶಂಕರ ಜಯಂತಿಯನ್ನು ಕರ್ನಾಟಕ ಸರ್ಕಾರವು ನಡೆಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ, ಶಂಕರಚಾರ್ಯರು ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿದ್ದರು ಇವರು ಪವಾಡ ಪುರುಷರು ಧರ್ಮದ ಆಚಾರ್ಯರು ಇವರು ಕೇವಲ 32 ವರ್ಷ ಜೀವಿಸಿದ್ದರು ಭಾರತದ ಉದ್ದಗಲಕ್ಕೂ ಎರಡು ಬಾರಿ ಪರ್ಯಾಟನೆಯ ನಡೆಸಿ ಧರ್ಮ ಪ್ರಚಾರವನ್ನು ನಡೆಸಿರುತ್ತಾರೆ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ಆ ಮೂಲಕ ಧರ್ಮದ ಪ್ರಚಾರ ನಡೆಸಿರುತ್ತಾರೆ ಧಾರ್ಮಿಕ ಕ್ಷೇತ್ರ ಸ್ಥಾಪಿಸಿದ ಧರ್ಮ ಶ್ರೇಷ್ಠರಾಗಿದ್ದಾರೆ ಇವರು ಜನಾನುರಾಗಿದ್ದರು ಇವರು ಸನಾತನ ಧರ್ಮಕ್ಕೆ ಪುನರ್ಜೀವನ ನೀಡಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಶಂಕರಾಚಾರ್ಯರು ಸ್ವಲ್ಪ ವರ್ಷಗಳೇ ಬದುಕಿದ್ದರು ಸಹ ಸಾರ್ಥಕ ಜೀವನವನ್ನು ನಡೆಸಿರುತ್ತಾರೆ ಇವರು ಹಿಂದೂ ಧರ್ಮ ಉಳಿವಿಗಾಗಿ ನಡೆಸಿದ ಪ್ರಯತ್ನಗಳು ಇಂದಿಗೂ ಮರೆಯುವಂತಿಲ್ಲ ನಾವುಗಳು ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ ಹಿಂದೂ ಧರ್ಮವನ್ನು ಉಳಿಸಿ ಬೆಳೆಸೋಣ ಎಂದು ತಿಳಿಸಿದರು.ಶ್ರೀ ವೇದಮಾತ ಗಾಯಿತ್ರಿ ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ನರಸಿಂಹ ಪ್ರಸಾದ್, ಉಪಾಧ್ಯಕ್ಷ ವೇಣುಗೋಪಾಲ್, ಗೌರವಾಧ್ಯಕ್ಷ ಎಚ್.ವಿ. ಭುಜಂಗ ರಾವ್, ಸೋಮ ಸುಂದರ್, ಶ್ರೀಕಂಠಯ್ಯ, ಕಾರ್ಯದರ್ಶಿ ಸುನಿಲ್, ಎಚ್.ಎಸ್. ನಾಗೇಂದ್ರ, ಎಚ್.ಎಸ್. ಪ್ರಕಾಶ್, ಶ್ರೀನಿವಾಸ್, ರೋಹಿಣಿ ಸರಸ್ವತಿ ನಟೇಶ್ ಶ್ರೀನಿವಾಸ್ ತೇಜಿ, ಕೋದಂಡರಾಮ ದೇವಾಲಯದ ಅಧ್ಯಕ್ಷ ಗೋಪಿನಾಥ್, ಕಾರ್ಯದರ್ಶಿ ಅನಂತ ಭಾಗವಹಿಸಿದ್ದರು.