ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 29ನೇ ಕಂಬ್ಳ ವಾರ್ಡಿನ ವೇರ್ ಹೌಸ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿ 40 ಲಕ್ಷ ರು. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಅದರ ಗುದ್ದಲಿ ಪೂಜೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್‌, ಇಲ್ಲಿನ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಈ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ನೆರವೇರಲಿದೆ. ಕಾಮಗಾರಿ ವೇಳೆ ಉಂಟಾಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸುವಂತೆ ಶಾಸಕರು ಮನವಿ ನೀಡಿದರು.

ನಿಕಟಪೂರ್ವ ಪಾಲಿಕೆ ಸದಸ್ಯೆ ಲೀಲಾವತಿ ಪ್ರಕಾಶ್, ಪ್ರಮುಖರಾದ ರಕ್ಷಿತ್ ಕೊಟ್ಟಾರಿ, ಜಯರಾಜ್ ಕೊಟ್ಟಾರಿ, ರಿತೇಶ್ ಶೆಟ್ಟಿ, ಪ್ರಕಾಶ್ ಕೊಡಿಯಾಲ್‌ಬೈಲ್, ಪ್ರವೀಣ್ ನಿಡ್ಡೆಲ್, ವಿಮಲಾ ಟೀಚರ್, ರೇಖಾ ಶೆಟ್ಟಿ, ಗಣೇಶ್ ಪೈ, ಸಂತೋಷ್ ಶೇಟ್, ನಾಗರಾಜ್ ಭಟ್, ಎಂ.ವಿಠಲದಾಸ್ ಭಟ್, ಮೋಹನ್ ಶೆಟ್ಟಿ, ಸುಮೀತ್ ಶೆಟ್ಟಿ, ವಿಕ್ರಮ್ ಕೊಟ್ಟಾರಿ ಮತ್ತಿತರರು ಇದ್ದರು.