ವೀರ ಸಾವರ್ಕರ್ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ-ದ್ಯಾಮಣ್ಣವರ

| Published : May 29 2024, 12:52 AM IST

ವೀರ ಸಾವರ್ಕರ್ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ-ದ್ಯಾಮಣ್ಣವರ
Share this Article
  • FB
  • TW
  • Linkdin
  • Email

ಸಾರಾಂಶ

ವೀರ ಸಾವರ್ಕರ ಅವರು ದೇಶ ಕಂಡಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹಾಗೂ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಸಾವರ್ಕರ ಪ್ರೇರಣೆ ಅದಮ್ಯವಾಗಿದೆ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಹೇಳಿದರು.

ಹಾವೇರಿ: ವೀರ ಸಾವರ್ಕರ ಅವರು ದೇಶ ಕಂಡಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹಾಗೂ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಸಾವರ್ಕರ ಪ್ರೇರಣೆ ಅದಮ್ಯವಾಗಿದೆ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ವೀರ ಸಾವರ್ಕರ ಅವರ ೧೪೧ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವೀರ ಸಾವರ್ಕರ ಬಾಲ್ಯದಲ್ಲಿಯೇ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಯುವಕರನ್ನು ಹೋರಾಟದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂತಹ ಮಹಾನ್ ಹೋರಾಟಗಾರ. ಬ್ರಿಟಿಷರ ಕುತಂತ್ರದಿಂದ ಶಿಕ್ಷೆ ಅನುಭವಿಸಿ ಕಾರಾಗೃಹದಲ್ಲಿಯೂ ಕವನ ರಚಿಸಿ ದೇಶ ಭಕ್ತಿ ಮೆರೆದವರು. ಇಂದಿನ ಯುವ ಜನಾಂಗ ಚಲನಚಿತ್ರ ನಟ ನಟಿಯರನ್ನು ಆದರ್ಶ ವ್ಯಕ್ತಿಗಳೆಂದು ಅವರ ಚಿತ್ರದಲ್ಲಿ ನಟಿಸುವುದನ್ನು ಅನುಸರಿಸದೇ ಸ್ವಾತಂತ್ರ ಹೋರಾಟಗಾರರನ್ನು ಆದರ್ಶ ವ್ಯಕ್ತಿಗಳೆಂದು ಅನುಸರಿಸಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ಸ್ವಾತಂತ್ರ ವೀರ ಸಾವರ್ಕರವರು ಸ್ವಾತಂತ್ರ್ಯ ಹೋರಾಟದ ಚಳವಳಿಯ ವೇಗ ಹೆಚ್ಚುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಪುಸ್ತಕ ಬರೆದು ರಾಷ್ಟ್ರದ್ಯಂತ ಚಳವಳಿಯ ಕಾವು ಹೆಚ್ಚಿಸಿದರು. ಸ್ವದೇಶಿ ಚಳವಳಿ, ದೇಶ ವಿಭಜನೆ ಯಾದರೆ ಮುಂದಾಗುವ ಘಟನೆಗಳ ಬಗ್ಗೆ ಪ್ರಥಮ ಬಾರಿಗೆ ವಿಚಾರ ವ್ಯಕ್ತಪಡಿಸಿದರು. ಸಾವರ್ಕರವರ ಉಗ್ರ ಹೋರಾಟದ ಪರಿಣಾಮ ಅರಿತ ಬ್ರಿಟಿಷ ಸರ್ಕಾರ ಅನಗತ್ಯ ಆರೋಪ ಹೋರಿಸಿ ೫೦ ವರ್ಷಗಳ ಕಾಲಾಪಾನಿಯ ಶಿಕ್ಷೆ ನೀಡಿತು. ಸ್ವಾತಂತ್ರ್ಯ ನಂತರ ಸಾವರ್ಕರ ಕುರಿತು ಕಾಂಗ್ರೆಸ್ ಪಕ್ಷ ನಿರಾಧಾರ ಆರೋಪ ಮಾಡಿ ಅವರ ಸಾಧನೆಯನ್ನು ಇತಿಹಾಸದಿಂದ ಮರೆಮಾಚುವ ಸರ್ವಪ್ರಯತ್ನ ಮಾಡಿದೆ. ಆದರೆ ಸಾವರ್ಕರವರು ನೈಜ ದೇಶ ಭಕ್ತರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಬಿಜೆಪಿ ಇಂದು ಅವರ ಜನ್ಮದಿನ ಆಚರಿಸುತ್ತಿರುವುದು ನಾವು ದೇಶ ಪ್ರೇಮಿಗಳು ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದರು. ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ ಮಾತನಾಡಿ, ಸಾವರ್ಕರ ಅವರನ್ನು ಮರೆಮಾಚುವ ಕಾರ್ಯ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಸ್ವಾತಂತ್ರ್ಯ ಹೋರಾಟಗಾರರನ್ನು ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಲು ಬಿಡುವುದಿಲ್ಲ. ಇಂದಿನ ಯುವ ಪೀಳಿಗೆ ಸಾವರ್ಕರವರ ದೇಶಭಕ್ತಿ ಸಮಾಜ ಸುಧಾರಣೆಯ ಕಿಚ್ಚು, ಧರ್ಮದ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಸಾವರ್ಕರ ಅವರು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ೨ ಬಾರಿಗೆ ಜೀವಾವಧಿ ಶಿಕ್ಷೆಗೆ ಒಳಗಾದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಎಂದರು. ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಭರಡಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೋಣನವರ, ಮಧು ಹಂದ್ರಾಳ, ಶಿವಯೋಗಿ ಹುಲಿಕಂತಿಮಠ, ಪುಷ್ಪಾ ಚಕ್ರಸಾಲಿ, ಜಗದೀಶ ಕೊಂಡೆಮ್ಮನವರ, ಗಿರೀಶ ಶೆಟ್ಟರ, ಈರಣ್ಣ ಹೊನ್ನಳ್ಳಿ, ಲೋಕೇಶ ಕವಾಡಿ, ಅಜಯ ಕೋಳೂರ, ಮಂಜುನಾಥ ಕುಂಚಿಕೊರವರ, ಅರ್ಜುನ ಕುಂಚಿಕೊರವರ, ದುರ್ಗೇಶ ಕುಂಚಿಕೊರವರ, ಕರುಣ ದಾವಣಗೆರೆ, ರಾಜು ಕುಂಚಿಕೊರವರ, ರವಿ ಕುಂಚಿಕೊರವರ, ಶಿವರಾಜ ಸಂಗೂರ, ಶ್ರೀಕಾಂತ ವಡ್ಡರ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.