ಸಾರಾಂಶ
ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿದರು. ವೀರಭದ್ರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ರಾಜ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು. ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಶಾಮನೂರು ಮಠದ ರುದ್ರಯ್ಯ ಮತ್ತು ಸಹೋದರರು ಹುಬ್ಬಳ್ಳಿ ಇವರಿಂದ ಹೂವಿನ ಅಲಂಕಾರ ನಡೆಯಿತು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಚಿಕ್ಕಹಾಲಿವಾಣ ಗ್ರಾಮದ ವೀರಭದ್ರ ಸ್ವಾಮಿ ರಥೋತ್ಸವ ಸೋಮವಾರ ಬೆಳಗ್ಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವಕ್ಕೆ ಚಿಕ್ಕಹಾಲಿವಾಣ ಸೇರಿ ಹಲವು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.ಬಾವುಟ ಹಾಗೂ ವಿವಿಧ ಹೂವುಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯ ಪ್ರತಿಷ್ಠಾಪಿಸಿ ರಥ ಎಳೆಯಲಾಯಿತು. ಸಹಸ್ರಾರು ಭಕ್ತರು ವೀರಭದ್ರಸ್ವಾಮಿಗೆ ಜಯಘೋಷ ಕೂಗಿ ತೇರು ಎಳೆದು ಭಕ್ತಿ ಸಮರ್ಪಿಸಿದರು. ರಥಕ್ಕೆ ಬಾಳೆಹಣ್ಣು, ಕಾಳುಮೆಣಸು ಮತ್ತಿತರ ಪದಾರ್ಥಗಳ ಭಕ್ತರು ಅರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿದರು. ವೀರಭದ್ರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ರಾಜ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು. ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಶಾಮನೂರು ಮಠದ ರುದ್ರಯ್ಯ ಮತ್ತು ಸಹೋದರರು ಹುಬ್ಬಳ್ಳಿ ಇವರಿಂದ ಹೂವಿನ ಅಲಂಕಾರ ನಡೆಯಿತು.
ವೀರಭದ್ರ ಸ್ವಾಮಿಗೆ ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಉಚ್ಚಾಯ ಕಾರ್ಯಕ್ರಮ ನಡೆದು ನಂತರ ಮಹಾರಥೋತ್ಸವ ನಡೆಯಿತು. ಮಧ್ಯಾಹ್ನ ಮಹಾಪ್ರಸಾದ 3ರಿಂದ 7 ಗಂಟೆವರೆಗೆ ದೇವಸ್ಥಾನ ಆವರಣದಲ್ಲಿ ಬೆಲ್ಲದ ಬಂಡಿ ಪ್ರದರ್ಶನ ನಡೆಯಿತು. ರಾತ್ರಿ 8 ಗಂಟೆಗೆ ಓಕಳಿ ಆಟ ನಡೆಯಿತು.ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳು ಸೇರಿ ನಾಡಿನ ವಿವಿಧ ಭಾಗಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ, ಕಾಣಿಕೆ ಸಮರ್ಪಿಸಿದರು.
----------