ವೀರಶೈವರನ್ನು ಒಡೆಯಲು ಇಂದಲ್ಲ, ಮುಂದೆಯೂ ಅವಕಾಶ ನೀಡಲ್ಲ

| Published : Dec 24 2023, 01:45 AM IST

ಸಾರಾಂಶ

ಡಾ.ಶಾಮನೂರು ಶಿವ‍ಶಂಕರಪ್ಪ

ಅಭಾವೀಲಿಂಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಘೋಷಣೆ

ಕನ್ನಡಪ್ರಭ ವಾರ್ತೆ, ದಾವಣಗೆರೆ

ವೀರಶೈವ ಲಿಂಗಾಯತ ಮಹಾಧಿವೇಶನದಲ್ಲಿ ಹೊಸ ಆಲೋಚನೆಗಳು, ಸಮಾಜದ ಜ್ವಲಂತ ಸಮಸ್ಯೆಗೆ ಪರಿಹಾರೋಪಾಯ ಹೊರ ಹೊಮ್ಮುವ ಜೊತೆಗೆ ಸಮಾಜದ ಇಂದಿನ ಹಾಗೂ ಭವಿಷ್ಯದ ಪೀಳಿಗೆಗೆ ಹೊಸ ಹೊಮ್ಮುವ ಪರಿಹಾರಗಳು ದಾರಿ ದೀಪವಾಗುವ ವಿಶ್ವಾಸವಿದೆ ಎಂದು ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವ‍ಶಂಕರಪ್ಪ ತಿಳಿಸಿದರು.

ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶನಿವಾರ ವೀರಶೈವ ಲಿಂಗಾಯತರ 24ನೇ ಮಹಾಧಿವೇಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ 2ನೇ ಬಾರಿಗೆ ನಡೆಯುತ್ತಿರುವ ಮಹಾ ಅಧಿವೇಶನ ಇಡೀ ಸಮಾಜಕ್ಕೆ ಹೊಸ ಸಂದೇಶ ನೀಡುವ, ಸಮಾಜದ ಒಗ್ಗಟ್ಟನ್ನು ಸಾರುವ ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದರು.

ಆಧುನಿಕ ಯುಗದಲ್ಲಿ ನಮ್ಮ ಯುಪ ಪೀಳಿಗೆ ಧರ್ಮ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಯಲು ಅಧಿವೇಶನದಲ್ಲಿ ಹರ-ಗುರು-ಚರಮೂರ್ತಿಗಳು, ಮುತ್ಸದ್ದಿ ನಾಯಕರು, ಯುವ ನಾಯಕರು, ಸಮಾಜದ ಹಿರಿಯ ರು ಮಾರ್ಗದರ್ಶನ ನೀಡುವರು. ದಶಗಳಿಂದಲೂ ನಮ್ಮ ಸಮುದಾಯವನ್ನು ವಿಘಟಿಸುವ ಅನೇಕ ಪ್ರಯತ್ನ ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಅಖಿಲ ಭಾರತ ವೀರಶೈವ ಮಹಾಸಭಾ ಗಟ್ಟಿ ನಿಲುವನ್ನು ತಾಳಿ, ಸಮಾಜ ವಿಘಟನೆಗೆ ಎಂದೆಂದಿಗೂ ವಕಾಶ ನೀಡುವುದಿಲ್ಲ. ಹಿಂದೆಯೂ ನೀಡಿಲ್ಲ. ಇಂದು ಸಹ ನೀಡುವುದಿಲ್ಲ. ಮುಂದೆಂದಿಗೂ ಸಹ ಸಮಾಜ ವಿಘಟನೆಗೆ ಮಹಾಸಭಾ ಅವಕಾಶವನ್ನೇ ನೀಡುವುದಿಲ್ಲವೆಂದು ಹೇಳಲು ಹೆಮ್ಮೆಪಡುತ್ತೇನೆ ಎಂದು ಅವರು ತಿಳಿಸಿದರು.

...............................

ವೀರಶೈವ ಲಿಂಗಾಯತ ಸಮಾಜ ಇಬ್ಭಾಗ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಲೇ ಇದೆ. ಆಗೆಲ್ಲಾ ಗಟ್ಟಿಯಾಗಿ ನಿಂತವರು ಸಮಾಜದ ನಾಯಕರು. ಅದರಲ್ಲೂ ಹಿರಿಯರಾದ ಶತಾಯುಷಿ ಭೀಮಣ್ಣ ಖಂಡ್ರೆ ಹಾಗೂ ಹಾಲಿ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರು. ತೀರಾ ಈಚೆಗೆ ಸಮಾಜವನ್ನು ಒಡೆಯುವ ಕೆಲಸ ನಡೆದ ಸಮಾಜದ ಪರ ಕಲ್ಲುಬಂಡೆಯಂತೆ ಗಟ್ಟಿಯಾಗಿ ನಿಂತವರು ಶಾಮನೂರು ಶಿವಶಂಕರಪ್ಪನವರು. ಶಾಮನೂರು ಬದಲು ಬೇರೆ ಯಾರಾದರೂ ಆಗಿದ್ದರೆ ಸಮಾಜ ಇಬ್ಭಾಗವಾಗಿರುತ್ತಿತ್ತು. ಆದರೆ, ಎಸ್ಸೆಸ್‌ರಂತಹ ಬಂಡೆಯಂತವರು ಇದ್ದಿದ್ದರಿಂದ ಸಮಾಜವೂ ಗಟ್ಟಿಯಾಗಿ ನಿಂತಿದೆ. ರಾಜಕೀಯವೇ ತಮಗೆ ಮುಖ್ಯವಲ್ಲ. ಸಂದರ್ಭ ಬಂದರೆ ರಾಜಕೀಯದಿಂದಲೇ ನಿವೃತ್ತನಾಗುವೆ. ಆದರೆ, ಸಮಾಜ ಹೋಳಾಗಲ್ಲು ಬಿಡಲ್ಲವೆಂದವರು. ಅದೇ ರೀತಿ ಹರಪನಹಳ್ಳಿ ತಾಲೂಕಿನ ಗಂಗಾಧರ ಗುರುಮಠರ ಕಾನೂನು ಹೋರಾಟವೂ ಸಹ ಸಮಾಜವನ್ನು ಒಡೆಯದಂತೆ ತಡೆಯಲು ಕಾರಣವಾಯಿತು.

ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ,

ಶ್ರೀಶೈಲ ಪೀಠ.