ಸಾರಾಂಶ
ಕಡೂರು, ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಮತ್ತು ತಾಲೂಕು ಘಟಕದ ಭವನಗಳ ನಿರ್ಮಾಣ ಮತ್ತು ನಿವೇಶನದ ಪ್ರಯತ್ನಕ್ಕೆ ಸಮಾಜದ ಬಂಧುಗಳು ಕೈ ಜೋಡಿಸಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಹೇಳಿದರು.
ಕಡೂರು ತಾಲೂಕು ವೀರಶೈವ-ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ಕಡೂರುವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಮತ್ತು ತಾಲೂಕು ಘಟಕದ ಭವನಗಳ ನಿರ್ಮಾಣ ಮತ್ತು ನಿವೇಶನದ ಪ್ರಯತ್ನಕ್ಕೆ ಸಮಾಜದ ಬಂಧುಗಳು ಕೈ ಜೋಡಿಸಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಹೇಳಿದರು.
ಪಟ್ಟಣದ ನಿವೃತ್ತ ನೌಕರ ಭವನದಲ್ಲಿ ತಾಲೂಕು ಘಟಕ ಏರ್ಪಡಿಸಿದ್ದ ಕಡೂರು ತಾಲೂಕು ವೀರಶೈವ-ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಮೂರನೇ ಬಾರಿಗೆ ನನ್ನನ್ನು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆಸಮಾಜದ ಎಲ್ಲರಿಗೂ ಕೃತಜ್ಞತೆಗಳನ್ನು ಹೇಳುತ್ತೇನೆ. ಈಗ ನಮ್ಮದೇ ಅತ್ಯುತ್ತಮವಾದ ತಂಡ ಆಯ್ಕೆ ಯಾಗಿದ್ದು ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಯೂ ನಡೆದು ಸಕ್ರಿಯವಾಗಿದೆ. ಜಿಲ್ಲಾ ಸಂಘಕ್ಕೆ ಅರಣ್ಯ ಸಚಿವರು ಮಹಾಸಭಾದ ಕಟ್ಟಡ ನಿರ್ಮಿಸಲು ಒಂದೂವರೆ ಎಕರೆ ಜಮೀನು ನೀಡಲು ಮಂದಾಗಿದ್ದು ನಮ್ಮ ಅವಧಿಯಲ್ಲಿ ಮಹಾಸಭಾದ ನೂತನ ಕಟ್ಟಡ, ಕಚೇರಿ ನಿರ್ಮಿಸಲು ಸಮಾಜದ ಬಂಧುಗಳು ತನು,ಮನ, ಧನದ ಸಹಕಾರ ನೀಡಬೇಕು ಎಂದರು. ಕಡೂರು ತಾಲೂಕು ಮಹಾಸಭಾ ಘಟಕದ ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ ಉತ್ತಮ ಸಂಘಟಕರಾಗಿದ್ದು ಸಮಾಜವನ್ನು ಮುನ್ನಡೆಸಲಿದ್ದಾರೆ. ಜಿಲ್ಲಾ ಸಂಘದ ಮಾರ್ಗದರ್ಶನದ ಮೂಲಕ ತಾಲೂಕು ಸಂಘ ಕಾರ್ಯನಿರ್ವಹಿಸಲಿದ್ದು ಸಂಘದ ಶ್ರೇಯೋಭಿವೃದ್ಧಿಗೆ ಅಧ್ಯಕ್ಷರಿಗೆ ಸಲಹೆ,ಸಹಕಾರ ನೀಡುತ್ತೇನೆ ಎಂದರು. ಅದ್ಯಕ್ಷತೆ ವಹಿಸಿದ್ದ ಕಡೂರು ತಾಲೂಕು ವೀರಶೈವ-ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ ಮಾತನಾಡಿ, ರಾಜ್ಯ ಮತ್ತು ಜಿಲ್ಲಾ ಸಂಘದ ಸೂಚನೆಯಂತೆ ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅವರ ಸಹಕಾರದೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಲ್ಲದೆ ತಾಲೂಕು ಸಂಘದ ಸಮುದಾಯ ಭವನ ನಿರ್ಮಾಣ ಮಾಡಲು ಹಾಗೂ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ರುದ್ರಭೂಮಿಗೆ ಭೂಮಿ ಪಡೆಯಲು ಶಾಸಕ ಕೆ.ಎಸ್.ಆನಂದ್ ಅವರ ಬಳಿ ಮಾತನಾಡಿದ್ದು ಅವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಸಮಾಜದ ಬಂಧು ಗಳೊಂದಿಗೆ ಶಾಸಕರನ್ನು ಗೌರವಿಸಿ ಮನವಿ ಸಲ್ಲಿಸೋಣ. ಪ್ರತಿ ತಿಂಗಳ ನಾಲ್ಕನೇ ವಾರ ಸಮಾಜದ ಸದಸ್ಯರ ಸಭೆ ಕರೆದು ಅಭಿವೃದ್ಧಿ, ಸಂಘಟನೆಯ ಕುರಿತು ಚರ್ಚೆ ನಡೆಸಲಾಗುವುದು ಎಂದರು.ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮಾತನಾಡಿ ಸಮಾಜದ ಯಾವುದೇ ಸಭೆ, ಸಮಾರಂಭಗಳನ್ನು ನಡೆಸಲು ರಾಜ್ಯ ಸಂಘ ಆರ್ಥಿಕವಾಗಿ ಸಹಾಯ ನೀಡುವುದಿಲ್ಲ. ಸಮಾಜ ಬಂಧುಗಳು ಆರ್ಥಿಕವಾಗಿ ಸಂಘವನ್ನು ಬಲಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.ರಾಜ್ಯ ಸಮಿತಿಗೆ ಜಿಲ್ಲೆಯಿಂದ ಆಯ್ಕೆಯಾಗಿರುವ ಪೂರ್ಣೆಶ್‍ಮೂರ್ತಿ, ತರೀಕೆರೆ ತಾಲೂಕು ಸಮಾಜದ ಅಧ್ಯಕ್ಷ ಮುಂಡ್ರೆ ಗಿರಿರಾಜ್, ಮೂಡಿಗೆರೆ ಘಟಕದ ಅಧ್ಯಕ್ಷ ಓಂಕಾರ್, ಚುನಾವಣಾ ವೀಕ್ಷಕ ನಂಜುಂಡಾರಾಧ್ಯ, ಗರ್ಜೆ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ತುರುವನಹಳ್ಳಿ ರೇಣುಕಣ್ಣ ಮತ್ತಿತರರು ಸಮಾಜ ಸೇವೆ ಕುರಿತು ಮಾತನಾಡಿದರು.ಸಮಾಜದ ಮುಖಂಡರಾದ ಪಿ.ಆರ್.ಪ್ರೇಮಕುಮಾರ್, ಗಂಗಾಧರಯ್ಯ, ಜಿ.ಎಂ. ಯತೀಶ್, ಕುಶ, ಕಲ್ಲು ಕುಮಾರ್,ಉಮಾ ಬಸವರಾಜು, ಜ್ಯೋತಿ, ಜಯಂತಿ,ಕಲ್ಪನ ಸಮಾಜದ ಮುಖಂಡರು ಇದ್ದರು.-- ಬಾಕ್ಸ್ --ನೂತನ ಪದಾಧಿಕಾರಿಗಳು
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಕಡೂರು ತಾಲೂಕು ಘಟಕಕ್ಕೆ ಗೌರವ ಅಧ್ಯಕ್ಷರಾಗಿ ರಂಭಾಪುರಿ ಶಾಖಾ ಮಠದ ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷರಾಗಿ ಚೀರನಹಳ್ಳಿಯ ಶೇಖರಪ್ಪ, ಗಿರಿಯಾಪುರದ ಕಂಠಯ್ಯ ಮತ್ತು ಕಡೂರಿನ ವೀಣಾ ಈಶ್ವರಪ್ಪ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಗಿರಿಯಾಪುರದ ಶಿವಶಂಕರ್, ಕೋಶಾಧ್ಯಕ್ಷರಾಗಿ ಗೆದ್ಲೆಹಳ್ಳಿ ಗುತ್ತಿಗೆದಾರ ಜಗದೀಶ್, ಸಹ ಕಾರ್ಯದರ್ಶಿಗಳಾಗಿ ಮೆಸ್ಕಾಂ ಮಲ್ಲಿಕಾರ್ಜುನ್, ಯಳಗೊಂಡನಹಳ್ಳಿ (ಮಹೇಶ್)ಹೇಮಂತ್‍ಕುಮಾರ್, ಕಡೂರಿನ ಶುಭಮಂಗಳ ಅವರು ಆಯ್ಕೆಯಾಗಿದ್ದಾರೆ.27ಕೆಕೆಡಿಯು1.ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಕಡೂರು ಘಟಕದ ನೂತನ ಪದಾಧಿಕಾರಿಗಳೊಂದಿಗೆ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೆಶ್ ಮತ್ತು ತಾಲೂಕು ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ ಇದ್ದರು.