ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸಮಾಜದ ಎಲ್ಲ ಮುಖಂಡರು, ಗುರು ಹಿರಿಯರ ಸಹಕಾರದೊಂದಿಗೆ ಸಮಾಜದ ಸಂಘಟನೆಗೆ ಮುಂದಾಗುವೆ. ಹನೂರು ತಾಲೂಕು ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ತಾಲೂಕು ಅಧ್ಯಕ್ಷರಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ನೂತನ ಅದ್ಯಕ್ಷ ಗೌಡರ ಸೋಮಶೇಖರ್ ಹೇಳಿದರು.ಕೊಳ್ಳೇಗಾಲದಲ್ಲಿ ಗುರುಮಲ್ಲೇಶ್ವರ ಕಾಂಪ್ಲೆಕ್ಸ್ ನಲ್ಲಿ ಸಮಾಜದ ಮುಖಂಡರಿಗೆ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರಲಿಲ್ಲ, ಎಲ್ಲಾ ಸಮಾಜದ ಬಂಧುಗಳ ಒತ್ತಾಸೆಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದೆನೆ. ಸಮಾಜದ ಕೆಲಸ, ಕಾರ್ಯಗಳಿಗೆ ಎಲ್ಲರ ವಿಶ್ವಾಸಗಳಿಸಿ ಹೆಚ್ಚಿನ ಕೆಲಸ ಕಾರ್ಯಗಳಿಗೆ ಮುಂದಡಿ ಇಡುವೆ ಎಂದರು.ನನ್ನ ಜೊತೆ ನಿರ್ದೇಶಕರಾಗಿ ಶಾಗ್ಯ ಗ್ರಾಮದ ಜಡೇಸ್ವಾಮಿ, ಶಾಗ್ಯ ವಿನೋದ್ ಕುಮಾರ್ ಎಂ,ಮಣಗಳ್ಳಿ ಗ್ರಾಮದ ಬಿ.ಪ್ರಭುಸ್ವಾಮಿ, ಹನೂರು ಪಟ್ಟಣದ ಲೋಕೇಶ್, ಮಹದೇಶ್ (ಬಾಬು), ಕಣ್ಣೂರು ಗ್ರಾಮದ ಮರಿದೇವ ಪ್ರಿಂಟರ್ಸ್ ಮಾಲೀಕ ನಾಗೇಂದ್ರ, ಮಂಗಲ ಗ್ರಾಮದ ಜಿ.ಮಹದೇವಸ್ವಾಮಿ, ಜಿ.ಕೆ.ಹೊಸೂರು ಗ್ರಾಮದ ಬಸವರಾಜು, ಪಿ.ಜಿ.ಪಾಳ್ಯ ಗ್ರಾಮದ ಶಿವಸ್ವಾಮಿ, ಹೊಸಪಾಳ್ಯ ಗ್ರಾಮದ ನಾಗೇಂದ್ರಮೂರ್ತಿ, ಅಜ್ಜೀಪುರ ಗ್ರಾಮದ ಮುರುಡೇಶ್ವರ ಪ್ರಿಂಟರ್ಸ್ ಮಾಲೀಕ ಎಂ.ಜಗದೀಶ್, ರಾಮಾಪುರ ಗ್ರಾಮದ ಎಂ.ಮಹದೇವ್, ಪೊನ್ನಾಚಿ ಗ್ರಾಮದ ಡಿ.ಕೆ.ರಾಜು, ಮಹಿಳಾ ವಿಭಾಗದ ನಿರ್ದೇಶಕರಾಗಿ ಚಿಂಚಳ್ಳಿ ಗ್ರಾಮದ ಎಂ.ರಾಣಿ, ಕಣ್ಣೂರು ಗ್ರಾಮದ ವಿ.ನಾಗರತ್ನಮ್ಮ, ಶಿವಪುರ ಗ್ರಾಮದ ನಾಗರತ್ನಮ್ಮ ಉದ್ದನೂರು ಗ್ರಾಮದ ಮಮತಾ ಶಾಂತಮೂರ್ತಿ, ಹನೂರು ಪಟ್ಟಣದ ಜ್ಯೋತಿ, ರಾಮಾಪುರ ಗ್ರಾಮದ ಪ್ರತಿಭಾ ಮಹದೇವ್, ಮಹದೇಶ್ವರ ಬೆಟ್ಟ ಗ್ರಾಮದ ಮಹದೇವಮ್ಮ ಸೇರಿದಂತೆ 20 ಮಂದಿ ಆಯ್ಕೆಯಾಗಿದ್ದಾರೆ, ಈ ಬೆಳವಣಿಗೆ ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಕೊಳ್ಳೇಗಾಲ ತಾಲೂಕು ಅದ್ಯಕ್ಷ ಪುಟ್ಟಣ್ಣ, ಮಾಜಿ ಅಧ್ಯಕ್ಷ ಮಹದೇವಪ್ರಸಾದ್, ತಾಪಂನ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ, ಶಾಗ್ಯರವಿ, ಕಟ್ಟೆ ಬೖಂಗೇಶ್, ಮಹದೇವಸ್ವಾಮಿ, ಜಿನಕನಹಳ್ಳಿ ನಟೇಶ್, ಉತ್ತಂಬಳ್ಳಿ ನಟೇಶ, ಮಾಲಂಗಿ ಬಸವರಾಜು, ಸರಗೂರು ಪ್ರಭಾಕರ ಇನ್ನಿತರರಿದ್ದರು.