ಸಾರಾಂಶ
ಉದಾತ್ತತೆ ಮತ್ತು ಶಕ್ತಿ ವಿಶಿಷ್ಠಾಧ್ಯತ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸದಾ ಸೌಖ್ಯ ನೆಮ್ಮದಿ ಸುಖಿಯನ್ನು ಕಾಣಬಹುದಾಗಿದೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
ಪ್ರಾಚೀನ ಪರಂಪರೆಯುಳ್ಳ ವೀರಶೈವ ಧರ್ಮಕ್ಕೆ ಸಿದ್ದಾಂತ ಶಿಖಾಮಣೆ ಗ್ರಂಥ ಸಂವಿಧಾನ ರೂಪದ ಗ್ರಂಥವಾಗಿದೆ. ಎಲ್ಲಾ ಜನಾಂಗದವರನ್ನು ಜೊತೆ-ಜೊತೆಗೆ ಕರೆದುಕೊಂಡು ಹೋಗುವ ಉದಾತ್ತತೆ ಮತ್ತು ಶಕ್ತಿ ವಿಶಿಷ್ಠಾಧ್ಯತ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸದಾ ಸೌಖ್ಯ ನೆಮ್ಮದಿ ಸುಖಿಯನ್ನು ಕಾಣಬಹುದಾಗಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.ಇಲ್ಲಿನ ಚಾನುಕೋಟಿ ಮಠದಲ್ಲಿ ಹಮ್ಮಿಕೊಂಡಿರುವ ಆದಿ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಮತ್ತು ಡಾ. ಸಿದ್ಧಲಿಂಗ ಶಿವಾಚಾರ್ಯ ಷಷ್ಟಿ ಸಮಾರಂಭದ 5 ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಧರ್ಮ ಬಾಂಧವರು ಇಷ್ಟಲಿಂಗ ಪೂಜೆ ನಿಷ್ಟರಾಗಿ ಸದಾ ದೇವರನ್ನು ತಮ್ಮೊಟ್ಟಿಗೆ ಇಟ್ಟುಕೊಂಡವರಾಗಿದ್ದಾರೆ. ಇಷ್ಟ ಲಿಂಗ ಪೂಜೆ ಹೊರತು ಪಡಿಸಿ ಬೇರೆ ದೇವರ ಪೂಜೆ ದರ್ಶನಕ್ಕೆ ಹೋಗುವ ಅವಶ್ಯಕತೆ ಬಾರದು. ಇದರ ಬದಲಾಗಿ ಲಿಂಗ ಪೂಜೆಯನ್ನು ಕಡ್ಡಾಯವಾಗಿ ಪ್ರತಿ ದಿನ ಮಾಡಬೇಕು. ಇದರ ಮೂಲಕ ಸುಖ-ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ ಎಂದರು.ಇಷ್ಟಲಿಂಗ ಪೂಜೆಯನ್ನು ಬಹಿರಂಗವಾಗಿ ಮಾಡುವ ಪದ್ದತಿಗೆ ರಂಭಾಪುರಿ ಪೀಠ ಲಿಂಗೈಕ್ಯ ಜಗದ್ಗುರು ವೀರ ಗಂಗಾಧರ ಶಿವಾಚಾರ್ಯ ಮಹಾ ಸ್ವಾಮೀಜಿ ಚಾಲನೆ ಕೊಟ್ಟಿದ್ದರು. ಬಹಿರಂಗ ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬರು ಮಾಡುವ ಮೂಲಕ ತಮ್ಮ ಎಲ್ಲಾ ಬಗ್ಗೆ ದಾರಿದ್ರವನ್ನು ಕಳೆದುಕೊಳ್ಳಬಹುದಾಗಿದೆ ಎನ್ನುವುದೇ ಪೂಜೆಯ ಸಂದೇಶವಾಗಿದೆ ಎಂದರು.
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಚಾನುಕೋಟಿ ಮಠ ಶಿಕ್ಷಣ ಕಲಿಸುವುದರ ಜೊತೆಗೆ ಹಸಿದವರಿಗೆ ಅನ್ನ ನೀಡುವುದು, ಅಬಲರಿಗೆ ಆಸರೆ ಒದಗಿಸುವ ಉತಮ್ಮ ಕೆಲಸ ಮಾಡುತ್ತಿದೆ. ಇಂತಹ ಮಠದ ಸ್ವಾಮಿಗಳು ಷಷ್ಟಿ ಸಂಭ್ರಮ ಕಾರ್ಯಕ್ರಮವನ್ನು ಸಮಾಜಮುಖಿಯಾಗಿ ಹಮ್ಮಿಕೊಂಡಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದರು.ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ್, ಪಪಂ ಸದಸ್ಯರಾದ ಬಾವಿಕಟ್ಟಿ ಶಿವಾನಂದ, ಮರಬದ ಕೊಟ್ರೇಶ, ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀ, ಕಾನಮಡಗು ಧಾ ಮ ಶರಣರರು ಸೇರಿದಂತೆ ಅನೇಕರಿದ್ದರು. ಕಾರ್ಯಕ್ರಮದಲ್ಲಿ 60 ಜನ ಕಟ್ಟಡ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಿಎಚ್ ಎಂ. ಮಂಜುನಾಥ ಸ್ವಾಗತಿಸಿ, ಶಿಕ್ಷಕ ಮತ್ತಿಹಳ್ಳಿ ನಾಗರಾಜ ನಿರೂಪಿಸಿದರು.