ಸಸ್ಯಾಹಾರ ಮಾನವರಿಗೆ ಉತ್ತಮ ಸಾತ್ತ್ವಿ ಕ ಅರೋಗ್ಯ ದಾಯಕ ಆಹಾರವಾಗಿದೆ. ಅಹಿಂಸೆ, ಕರುಣೆ, ದಯೆ , ಧ್ಯಾನ ಕ್ಕಾಗಿ ಉತ್ತಮ ಆಹಾರ ಆಯ್ಕೆ ಮಾಡುವ, ಅರೋಗ್ಯ ವಂತ ಸಮಾಜ ನಿರ್ಮಾಣ ಮಾಡಲು ಸರ್ವರ ಸಹಕಾರ ಅಗತ್ಯ ಎಂದು ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯ ವರ್ಯ ಮಹಾ ಸ್ವಾಮೀಜಿಯವರು ಹೇಳಿದ್ದಾರೆ. ಅವರು ಜೈನ ಕಾಶಿ ಮೂಡುಬಿದಿರೆ ಯಲ್ಲಿ ಏಳನೇ ವರ್ಷದ ಮಹಾ ಕರುಣಾ ಸಸ್ಯಾಹಾರ ಜನ ಜಾಗೃತಿ ಜಾಥಾ , ಪಿರ ಮಿಡ್ ಧ್ಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ, ಸಾವಿರ ಕಂಬ ಬಸದಿ ಮುಂಭಾಗ ಸಸಿ ನೆಡುವ ಮೂಲಕ ಜಾಥಾ ಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂಡುಬಿದಿರೆ: ಸಸ್ಯಾಹಾರ ಮಾನವರಿಗೆ ಉತ್ತಮ ಸಾತ್ತ್ವಿ ಕ ಅರೋಗ್ಯ ದಾಯಕ ಆಹಾರವಾಗಿದೆ. ಅಹಿಂಸೆ, ಕರುಣೆ, ದಯೆ , ಧ್ಯಾನ ಕ್ಕಾಗಿ ಉತ್ತಮ ಆಹಾರ ಆಯ್ಕೆ ಮಾಡುವ, ಅರೋಗ್ಯ ವಂತ ಸಮಾಜ ನಿರ್ಮಾಣ ಮಾಡಲು ಸರ್ವರ ಸಹಕಾರ ಅಗತ್ಯ ಎಂದು ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯ ವರ್ಯ ಮಹಾ ಸ್ವಾಮೀಜಿಯವರು ಹೇಳಿದ್ದಾರೆ. ಅವರು ಜೈನ ಕಾಶಿ ಮೂಡುಬಿದಿರೆ ಯಲ್ಲಿ ಏಳನೇ ವರ್ಷದ ಮಹಾ ಕರುಣಾ ಸಸ್ಯಾಹಾರ ಜನ ಜಾಗೃತಿ ಜಾಥಾ , ಪಿರ ಮಿಡ್ ಧ್ಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ, ಸಾವಿರ ಕಂಬ ಬಸದಿ ಮುಂಭಾಗ ಸಸಿ ನೆಡುವ ಮೂಲಕ ಜಾಥಾ ಕ್ಕೆ ಚಾಲನೆ ನೀಡಿ ಮಾತನಾಡಿದರು.ಡಾ ಸುಭಾಷ್ ಪತ್ರಿಜೀ ಅವರ ಪ್ರೇರಣೆ ಯಂತೆ ಪಿರಮಿಡ್ ಸ್ಪಿರಿಚು ವಲ್ ಮೂವ್ ಮೆoಟ್ ಭಾರತ ಅಂಗಸಂಸ್ಥೆ ಪತ್ರೀಜಿ ವೆಜಿಟೇರಿಯನ್ ಮೂವೆಂಟ್ ಕರ್ನಾಟಕ ಶಾಖೆ ಮತ್ತು ಮಂಗಳೂರು ಮೂಡುಬಿದಿರೆ ಪಿರಮಿಡ್ ಸೊಸೈಟಿ ವತಿಯಿಂದ ನಡೆದ ಮೂರು ದಿನಗಳ ಸಸ್ಯಾಹಾರ ಜನಜಾಗೃತಿ ಜಾಥಾ ಜ್ಞಾನ ಪ್ರಚಾರ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೂರು ದಿನಗಳ ಕಾರ್ಯಕ್ರಮ ದಲ್ಲಿ ಮೂರನೇ ದಿನದ ಕಾರ್ಯಕ್ರಮ ಜೈನ ಕಾಶಿ ಮೂಡುಬಿದಿರೆ ಯಲ್ಲಿ ಜರುಗಿತು ಚೌಟರ ಅರಮನೆ ಕುಲದೀಪ ಅರಮನೆ, ಕೃಷ್ಣಪ್ಪ ರಾಮ ನಗರ, ವ್ರಷಭ ಮುತ್ತಿನ ಹುಬ್ಬಳ್ಳಿ, ಸುದರ್ಶನ್ ಎಂ. ವಿಜಯಕ್ಕ ಓಂಶಾಂತಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು ಮೂಡು ಬಿದಿರೆ ಘಟಕದ ಭಾರತಿ ಶೆಟ್ಟಿ ಸ್ವಾಗತಿಸಿದರು, ಪತ್ರೀಜಿ ವೇಜಿ ಟೇರಿಯನ್ ಮೋವ್ ಮೆಂಟ್ ಕರ್ನಾಟಕ ಇದರ ಸಂಸ್ಥಾಪಕಿ ಡಾ ಸುಮಂಗಳ ಸಾಲಿ ಮಠ ಪ್ರಾಸ್ತಾವಿಕ ಮಾತುಗಳೊಂದಿಗೆ ತಮ್ಮಧ್ಯೇಯ ಉದ್ದೇಶ ಗಳನ್ನು ತಿಳಿದರು ಮೂವ್ ಮೆಂಟ್ ಅಧ್ಯಕ್ಷ ಅಧ್ಯಕ್ಷ ಕೆ.ಎಂ. ಸಿದ್ಧಯ್ಯ ಸ್ವಾಮಿ ಉಪಸ್ಥಿತಿಯಲ್ಲಿ ಕರ್ನಾಟಕದ ವಿವಿಧ ಭಾಗ ಗಳಿಂದ ಬಂದ ಪ್ರತಿನಿಧಿಗಳಿಂದ ಪೇಟೆಯಲ್ಲಿ ಜಾಗೃತಿ ಜಾಥಾ ನಡೆಯಿತು.