ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ಜಯಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಗೋಣೂರು ಗ್ರಾಪಂ ಸದಸ್ಯೆ ವೆಂಕಟಲಕ್ಷ್ಮಮ್ಮ ಆಂಜಿನಪ್ಪ (ಕುಟ್ಟಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರಾಗಿದ್ದ, ವಸಂತ ಶಶಿಧರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೋಣೂರು ಗ್ರಾಂಪ ಸದಸ್ಯೆ ವೆಂಕಟಲಕ್ಷ್ಮಮ್ಮ ಆಂಜಿನಪ್ಪ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು, ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ, ಜಯಮಂಗಲ ಗ್ರಾಪಂ ಅಧ್ಯಕ್ಷರಾಗಿ ವೆಂಕಟಲಕ್ಷ್ಮಮ್ಮ ಆಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೈರಾರೆಡ್ಡಿ ಘೋಷಿಸಿದರು. ಚುನಾವಣಾ ಸಭೆಯಲ್ಲಿ ಎಲ್ಲಾ 16 ಸದಸ್ಯರು ಹಾಜರಾಗಿದ್ದರು. ನೂತನ ಅಧ್ಯಕ್ಷರು ಆಯ್ಕೆಯಾದ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಆಂಜಿನಪ್ಪ, ಇಲ್ಲಿನ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎಲ್ಲಾ ಸದಸ್ಯರನ್ನು ಒಗ್ಗಟ್ಟಾಗಿ ಕರೆದೊಯ್ದು, ಸದಸ್ಯರ ಗ್ರಾಮಗಳಲ್ಲಿ ಅಭಿವೃದ್ಧಿಗೆ ಸಹಕಾರ ನೀಡುವುದರ ಜೊತೆಗೆ ವಿವಿಧ ಯೋಜನೆಗಳಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಮೂಲಭೂತ ಸೌಲತ್ತುಗಳನ್ನು ಒದಗಿಸುವುದರ ಮೂಲಕ ಅಭಿವೃದ್ಧಿ ಮಾಡಲಾಗುವುದು ಎಂದರು.ಗ್ರಾಮ ಪಂಚಾಯಿತಿ ಸದಸ್ಯರಾದ ಬಿ. ಶಿವಶಂಕರ್, ರಾಧಮ್ಮ, ಎಸ್. ಮಂಜುನಾಥ್, ವಸಂತಮ್ಮ, ಶ್ರೀನಿವಾಸ್ ಟಿವಿ, ನಾಗರತ್ನಮ್ಮ, ಬಿ.ಎಂ.ಸೋಮಶೇಖರಯ್ಯ, ಯಶೋದಮ್ಮ, ಅನಿಲ್ ಕುಮಾರ್, ವೆಂಕಟೇಶ್, ತ್ರಿವೇಣಿ, ಸವಿತಾ, ಮುರಳಿ ಕೃಷ್ಣ, ಪಿಡಿಒ ಅಂಬರೀಶ್ ಬಾಬು, ಕಾರ್ಯದರ್ಶಿ ದಯಾನಂದ್, ಗ್ರಾಪಂ ಮಾಜಿ ಅಧ್ಯಕ್ಷ ರಘುನಾಥ ಕೆ., ಮುಖಂಡರಾದ ಮಾಜಿ ಸದಸ್ಯ ಟಿ.ವಿ.ಮುನಿರಾಜು, ವೆಂಕಟೇಶ್, ಜಗದೀಶ್ ಗೌಡ, ಲೋಕೇಶ್, ಮರಿಯಪ್ಪ, ನಾರಾಯಣಸ್ವಾಮಿ, ಚೌಡಪ್ಪ, ನಾಗೇಶ್, ರಾಮಸ್ವಾಮಿ, ಇನ್ನಿತರರು ಹಾಜರಿದ್ದರು.