ಸಾರಾಂಶ
ಹೃದಯವಂತ ವ್ಯಕ್ತಿಯಾಗಿ ಕ್ಷೇತ್ರದ ಜನರ ಮನಸ್ಸನ್ನು ಗೆದ್ದ ಒಳ್ಳೆಯ ರಾಜಕಾರಣಿಯಾಗಿದ್ದವರು ಸುರಪುರ ಶಾಸಕ ರಾಜಾವೆಂಕಟಪ್ಪ ನಾಯಕ
ಸುರಪುರ: ಹೃದಯವಂತ ವ್ಯಕ್ತಿಯಾಗಿ ಕ್ಷೇತ್ರದ ಜನರ ಮನಸ್ಸನ್ನು ಗೆದ್ದ ಒಳ್ಳೆಯ ರಾಜಕಾರಣಿಯಾಗಿದ್ದವರು ಸುರಪುರ ಶಾಸಕ ರಾಜಾವೆಂಕಟಪ್ಪ ನಾಯಕ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.
ಸಮೀಪದ ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಬುಧವಾರ ಇತ್ತೀಚೆಗೆ ಅಗಲಿದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಅವರ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವೆಂಕಟಪ್ಪ ನಾಯಕ ಅವರ ತಂದೆ ದಿ.ಕುಮಾರ ನಾಯಕ ಅವರ ಜೊತೆಗೂ ನನ್ನ ಒಡನಾಟವಿತ್ತು. ಇತ್ತೀಚಿಗೆ ಇವರ ಜೊತೆಗೂ ಹೆಚ್ಚು ಒಡನಾಟ ಹೊಂದಿದ್ದು ಇವರನ್ನು ನಂಬಿ ಬರುವ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗಳಿಗೆ ನೀಡುತ್ತಿದ್ದ ಸಲಹೆಗಳು ಸಾಮಾಜಿಕವಾಗಿ ಅನೇಕ ಬದಲಾವಣೆಯಾಗಿವೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕ್ರಣ್ಣ ವಣಕ್ಯಾಳ ಮಾತನಾಡಿ, ಹಲವು ಬಾರಿ ಶಾಸಕರಾದರೂ ಸರ್ಕಾರದಲ್ಲಿ ಸಚಿವ ಸ್ಥಾನದ ಬಗ್ಗೆ ಆಸೆ ಪಟ್ಟವರಲ್ಲ. ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಸದಾ ಶ್ರಮಿಸುತ್ತಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನ ಇಡೀ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.ಈ ವೇಳೆ ಅನೇಕ ಮುಖಂಡರು ರಾಜಾ ವೆಂಕಟಪ್ಪ ನಾಯಕ ಅವರ ಬಗ್ಗೆ ಮಾತನಾಡಿದರು. ಇದಕ್ಕೂ ಮೊದಲು ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್, ವಾಮನರಾವ ದೇಶಪಾಂಡೆ, ಬಾಪುಗೌಡ ಪಾಟೀಲ್, ಹಣಮಂತ್ರಾಯ ದಳಪತಿ, ಚಂದ್ರಶೇಖರ ದಂಡಿನ್, ಶರಣಬಸ್ಸು ಡಿಗ್ಗಾವಿ, ಬಸನಗೌಡ ಯಾಳಗಿ, ರಾಮನಗೌಡ ಹದನೂರ, ಮಾನಪ್ಪ ಸೂಗೂರ, ವೀರರಾಯಪ್ಪ ರಾಜು ಧಣಿ, ವೆಂಕಟೇಶ ಬೇಟೆಗಾರ, ಗೌಡಪ್ಪಗೌಡ ಆಲ್ದಾಳ, ಹಳ್ಳೆಪ್ಪ ಹವಾಲ್ದಾರ, ರಮೇಶ ದೊರೆ ಆಲ್ದಾಳ, ಕ್ರಷ್ಣಯ್ಯ ಗುತ್ತೇದಾರ, ಕನಕಾಚಲ ನಾಯಕ ಸೇರಿದಂತೆ ಇತರರಿದ್ದರು. ಬಸವರಾಜ ಚಿಂಚೋಳಿ ಸ್ವಾಗತಿಸಿದರು. ಸಾಹೇಬಲಾಲ ಆಂದೇಲಿ ನಿರೂಪಿಸಿದರು. ರಂಗಪ್ಪ ವಡ್ಡರ್ ವಂದಿಸಿದರು.