ಸಸ್ಯಗಳಿಂದ ನೈಸರ್ಗಿಕ ಔಷಧಿ ಪಡೆಯಲು ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ ಕರೆ

| Published : Aug 30 2024, 01:11 AM IST / Updated: Aug 30 2024, 12:17 PM IST

ಸಸ್ಯಗಳಿಂದ ನೈಸರ್ಗಿಕ ಔಷಧಿ ಪಡೆಯಲು ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪ್ರಕೃತಿಯಿಂದ ದೊರೆಯುವ ಸಸ್ಯಗಳಿಂದ ಔಷಧಿ ಪಡೆಯಬಹುದು ಎಂದು ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ಹೇಳಿದ್ದಾರೆ.

 ತರೀಕೆರೆ :  ಪ್ರಕೃತಿಯಿಂದ ದೊರೆಯುವ ಸಸ್ಯಗಳಿಂದ ಔಷಧಿ ಪಡೆಯಬಹುದು ಎಂದು ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್

ಹೇಳಿದ್ದಾರೆ.ವಿಕಸನ ಸಂಸ್ಥೆಯಿಂದ ಪಟ್ಟಣದ ಗಾಳಿಹಳ್ಳಿಯಲ್ಲಿ ಗಿಡ ಮೂಲಿಕೆ ಔಷಧಿ ಮತ್ತು ಮನೆ ಮದ್ದುಗಳ ತಯಾರಿಕೆ ಹಾಗೂ ಬಳಕೆಗಳ ಬಗ್ಗೆ ಏರ್ಪಡಿಸಿದ್ದ ಎರಡು ದಿನಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ತಮ್ಮ ಮನೆ ಮತ್ತು ಹೊಲಗದ್ದೆಗಳಲ್ಲಿ ಸಿಗುವ ಗಿಡ ಮೂಲಿಕೆಗಳಿಂದ ದೊರೆಯುವ ಕಾಂಡ ಎಲೆ ಹೂಗಳಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿಗಳನ್ನು ತಯಾರು ಮಾಡಿ ತಮಗೆ ಹಾಗೂ ತಮ್ಮ ಕುಟುಂಬಗಳಿಗೆ ಬಳಕೆ ಮಾಡುವ ಮೂಲಕ ಪಾರಂಪಾರಿಕ ವೈದ್ಯ ಪದ್ಧತಿ ಉಳಿಸಬಹುದು, ಈ ನಿಟ್ಟಿನಲ್ಲಿ ವಿಕಸನ ಸಂಸ್ಥೆ ಕಳೆದ 30 ವರ್ಷಗಳಿಂದ ನಾಟೀ ವೈದ್ಯರಿಗೆ, ಸ್ವಸಹಾಯ ಸಂಘದ ವರಿಗೆ, ಶಾಲಾ ಮಕ್ಕಳಿಗೆ ಗಿಡಗಳ ಪರಿಚಯ ಹಾಗೂ ಔಷಧಿಗಳನ್ನು ತಯಾರು ಮಾಡಲು 2500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿರುತ್ತೇವೆ. ನೂರಾರು ಜನರು ಇದರ ಪ್ರಯೋಜನ ಪಡೆದಿದ್ದಾರೆ. ತಾವೇ ಮನೆಗಳಲ್ಲಿ ಔಷಧಿ ಗಿಡಗಳನ್ನು ಬೆಳೆಸಿ ಪಾರಂಪರಿಕ ವೈದ್ಯಪದ್ಧತಿಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಪಾರಂಪರಿಕ ವೈದ್ಯರಾದ ಲಿಲ್ಲಿ ವರ್ಗೀಸ್ ಮಾತನಾಡಿ, ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಔಷಧೀಯ ಗುಣ ಹೊಂದಿರುವ ಕಾಳುಮೆಣಸು, ಅರಿಶಿನ, ನಾಟಿ ಬೆಲ್ಲ, ಹಿಪ್ಪಲಿ, ಜೀರಿಗೆ, ತುಳಸಿ, ದೊಡ್ಡಪತ್ರೆ ಬಳಸಿ ಕಷಾಯವನ್ನು ಮನೆಯಲ್ಲಿ ತಯಾರಿಸಿ ಪ್ರತಿನಿತ್ಯ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.ಕಾರ್ಯಾಗಾರಕ್ಕೆ ಆಗಮಿಸಿದ ಸದಸ್ಯರಿಗೆ ತಾವು ತಮ್ಮ ತೋಟದಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ಪರಿಚಯಿಸಿ ಅವುಗಳಿಂದ ಗಿಡಮೂಲಿಕೆಗಳಿಂದ ಸುಮಾರು 10ಕ್ಕೂ ಹೆಚ್ಚು ಮನೆಮದ್ದುಗಳನ್ನು ಬಂದಿರುವ ಅಭ್ಯರ್ಥಿಗಳಿಂದಲೇ ತಯಾರಿಸಿ, ಅವುಗಳ ಪ್ರಾಮುಖ್ಯತೆ ಮತ್ತು ಉಪಯೋಗ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಡು ಬಸಳೆ ಸಸ್ಯ ಪರಿಚಯಿಸಿ ಇಂದು ನಾವು ತೆಗೆದುಕೊಳ್ಳುವ ನೀರಿನಿಂದ ಮೂತ್ರ ಪಿಂಡದಲ್ಲಿ ಕಲ್ಲು ಶೇಖರಣೆಯಾಗುತ್ತಿದೆ. ಅದನ್ನು ನಿವಾರಿಸಲು ಪ್ರತಿನಿತ್ಯ ಕಾಡುಬಸಳೆ ಎರಡು ಎಲೆಗಳನ್ನು ಖಾಲೀ ಹೊಟ್ಟೆಯಲ್ಲಿ 21 ದಿನಗಳವರೆಗೆ ಸೇವಿಸುವುದರಿಂದ ಮೂತ್ರ ಕೋಶದ ಕಲ್ಲು ಹಾಗೂ ನೋವು ನಿವಾರಣೆಯಾಗುತ್ತದೆ ಎಂದು ತಿಳಿಸಿದರು. ಶಿವಮೊಗ್ಗದ ಟೀಮ್ ಒನ್ ಇಂಡಿಯಾದ ರಾಮಚಂದ್ರ ಆಯಸ್ಕಾಂತ ಚಿಕಿತ್ಸೆ ಬಗ್ಗೆ ಮಾತನಾಡಿ ಈ ಚಿಕಿತ್ಸೆಯಿಂದ ಸದೃಢ ದೇಹ, ಸದೃಡ ಆರೋಗ್ಯ, ರೋಗದಿಂದ ಮುಕ್ತಿ, ನೋವು ರಹಿತ ಚಿಕಿತ್ಸೆ, ಆಸ್ವತ್ಸೆ ಖರ್ಚುಗಳಿಂದ ದೂರ ಇರುವ ಬಗ್ಗೆ ತಿಳಿಸಿದರು. ರಕ್ತದ ಒತ್ತಡ, ಮಧುಮೇಹ, ಮಂಡಿನೋವು ಮುಂತಾದ ಹಲವು ಕಾಯಿಲೆಗಳಿಗೆ ಆಯಸ್ಕಾಂತ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.

 ಶಿವಮೊಗ್ಗದ ಯೋಗ ಶಿಕ್ಷಕ ಪ್ರಕಾಶ್‌ ಮಾತನಾಡಿ ಧ್ಯಾನ, ಯೋಗಾಸನದ ಮಹತ್ವ ತಿಳಿಸಿ ಏಕಗ್ರತೆ ಉಪಯೋಗ ವಿವರಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರು ಔಷಧಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ಕಸನ ಸಂಸ್ಥೆ ಸಂಯೋಜಕ ಮುಕುಂದ, ಲಕ್ಷಣ್, ಪ್ರಭಾವತಿ ತರೀಕೆರೆ, ಬೀರೂರು ಹಾಗೂ ಕಡೂರು ತಾಲೂಕಿನ ಹಲವು ಗ್ರಾಮ ಗಳಿಂದ ಪುರುಷ ಹಾಗೂ ಮಹಿಳೆಯರು ಸೇರಿ ಒಟ್ಟು 35 ಪ್ರತಿನಿಧಿಗಳು ಭಾಗವಹಿಸಿ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.