ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ನಿಧನ

| Published : Aug 07 2024, 01:07 AM IST

ಸಾರಾಂಶ

ವಿಜಯಪುರ: ಜಿಲ್ಲೆಯ ಹಿರಿಯ ಹೋರಾಟಗಾರ, ಕಮ್ಯುನಿಸ್ಟ್‌ ಮುಖಂಡ ಭೀಮಶಿ ಕಲಾದಗಿ(87) ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ. ತಮ್ಮ ಜನಪರ ಹೋರಾಟಗಳಿಂದ ನಾಡಿನಲ್ಲಿ ಹೆಸರಾಗಿದ್ದ ಭೀಮಶಿ ಕಲಾದಗಿ ಅವರು ಬರಗಾಲ ಭೀಮಶಿಯೆಂದೇ ಖ್ಯಾತರಾಗಿದ್ದರು. ಜಿಲ್ಲೆಯ ಮುಳವಾಡ ಏತ ನೀರಾವರಿ ಸೇರಿದಂತೆ ಜಿಲ್ಲೆಯ ಸಮಗ್ರ ನೀರಾವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ ಜೀವನವಿಡಿ ಹೋರಾಟ ಮಾಡಿದ್ದರು. ಅವರ ಅಗಲಿಕೆಯಿಂದ ಹಿರಿಯ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ‌‌‌.

ತಮ್ಮ ನೇರ ನಡೆ- ನುಡಿ, ಹೋರಾಟದಿಂದ ಆಳುವ ವರ್ಗ ಹಾಗೂ ಸರ್ಕಾರಗಳನ್ನು ಬಡಿದೆಬ್ಬಿಸುತ್ತಿದ್ದರು‌‌. ಇಂತಹ ಹಿರಿಯ ಹೋರಾಟದ ಚೇತನ ಇಹಲೋಕ ತ್ಯಜಿಸಿದಕ್ಕೆ ಜಿಲ್ಲೆಯ ಜನಪ್ರತಿನಿಧಿ, ಮುಖಂಡರು ಹಾಗೂ ಅವರ ಅಭಿಮಾನಿ ವರ್ಗ ಕಂಬನಿ ಮಿಡಿದಿದೆ.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅತ್ಯಕ್ರಿಯೆಯನ್ನು ಇಂಡಿ ತಾಲೂಕಿನ ನಿಂಬಾಳ ಗ್ರಾಮದಲ್ಲಿ ಮಂಗಳವಾರ ನೆರವೇರಿಸಲಾಯಿತು.