ವಿಎಚ್‌ಪಿ ಯಾವುದೇ ಧರ್ಮ, ಸಮಾಜದ ವಿರೋಧಿಯಲ್ಲ: ವಿಠಲ ಮಾಳಿ

| Published : Sep 04 2024, 01:54 AM IST

ಸಾರಾಂಶ

ವಿಶ್ವ ಹಿಂದು ಪರಿಷತ್‌ ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವುದಿಲ್ಲ. ಹಿಂದು ಧರ್ಮ ಸಂಘಟನೆ, ಸಂರಕ್ಷಣೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಸಹಮಂತ್ರಿ ವಿಠಲ ಮಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ವಿಶ್ವ ಹಿಂದು ಪರಿಷತ್‌ ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವುದಿಲ್ಲ. ಹಿಂದು ಧರ್ಮ ಸಂಘಟನೆ, ಸಂರಕ್ಷಣೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಸಹಮಂತ್ರಿ ವಿಠಲ ಮಾಳಿ ಹೇಳಿದರು.

ಮಟ್ಟಣದ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದು ಪರಿಷತ್ ಮೂಡಲಗಿ ಪ್ರಖಂಡದಿಂದ ಆಯೋಜಿಸಿದ್ದ ವಿಶ್ವ ಹಿಂದು ಪರಿಷತ್‌ನ ಷಷ್ಟ್ಯಬ್ದಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಷತ್‌ ದೇಶದಲ್ಲಿ ಸಾಮರಸ್ಯತೆ, ಸಂಸ್ಕೃತಿ, ಶಿಷ್ಟಾಚಾರ, ಪರಿಸರ ರಕ್ಷಣೆ ಹಾಗೂ ಸ್ವದೇಶ ಪ್ರೇಮ ಬೆಳೆಸುತ್ತಲಿದೆ ಎಂದರು.

ವಿಎಚ್‌ಪಿ ಸತ್ಸಂಗ ಪ್ರಮುಖ ದೇಶಪಾಂಡೆ ಮತ್ತು ಪ್ರಾಂತ ಸತ್ಸಂಗ ಪ್ರಮುಖ ರಾರಾಯಣ ಮಾತನಾಡಿ, ವಿಶ್ವ ಹಿಂದು ಪರಿಷತ್‌ 1964ರಲ್ಲಿ ಸ್ಥಾಪನೆಯಾಗಿ 60 ವಸಂತ ಕಳೆದಿದೆ. ಹಿಂದುಗಳು ಜಗತ್ತಿನ 40ಕ್ಕೂ ಅಧಿಕ ದೇಶಗಳಲ್ಲಿ ನೆಲೆಸಿದ್ದು, ವಿಶ್ವ ಮಟ್ಟದಲ್ಲಿ ಹಿಂದು ಸಮಾಜಕ್ಕೆ ಕಟಿಬದ್ಧರಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಎಚ್‌ಪಿ ಜಿಲ್ಲಾಧ್ಯಕ್ಷ ಡಾ.ಆರ್.ಕೆ. ಬಾಗಿ ಮಾತನಾಡಿದರು. ನಾಗರಾಳದ ಅನಂತಾನಂದ ಶರಣರು ಮಾತನಾಡಿದರು.

ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲಾ ಸಹ ಕಾರ್ಯದರ್ಶಿ ದಯಾನಂದ ಸವದಿ ಪ್ರಾಸ್ತಾವಿಕ ಮಾತನಾಡಿದರು. ಅತಿಥಿಗಳಾಗಿ ಬಸವರಾಜ ಪಾಟೀಲ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ವಕೀಲ ಬಲದೇವ ಸಣ್ಣಕ್ಕಿ, ಪ್ರಕಾಶ ಮಾದರ, ಈರಪ್ಪ ಬನ್ನೂರ, ಶಿವಬಸು ಹಂದಿಗುಂದ, ರವೀಂದ್ರ ದಂತಿ, ಮಾಲತಿ ಆಶ್ರೀತ, ಮೂಡಲಗಿ ಪ್ರಖಂಡ ಅಧ್ಯಕ್ಷ ಶಿವಶಂಕರ ಖಾನಾಪುರ, ಸಿದ್ದಪ್ಪ ತಿಗಡಿ, ಶ್ರೀಧರ ಬಡಿಗೇರ, ಮಾಳಪ್ಪ ಮೆಳವಂಕಿ, ಬಸಯ್ಯ ಹಿರೇಮಠ, ದುಂಡಪ್ಪ ಹಳ್ಳೂರ ಇದ್ದರು.ಮಹಾಂತೇಶ ಕುಡಚಿ ನಿರೂಪಿಸಿದರು.