ಮಳೆಗೆ ಮನೆ ಹಾನಿ: ಸಂತ್ರಸ್ತ ಗಂಗಮ್ಮಗೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ

| Published : Jul 30 2024, 12:39 AM IST

ಮಳೆಗೆ ಮನೆ ಹಾನಿ: ಸಂತ್ರಸ್ತ ಗಂಗಮ್ಮಗೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್‌ನಲ್ಲಿ ಬಿ.ಬಸಾಪುರ ನಿವಾಸಿ ಗಂಗಮ್ಮ ಅವರ ಮನೆಯು ಮಳೆಯಿಂದಾಗಿ ಬಿದ್ದುಹೋಗಿದೆ. ಈ ಹಿನ್ನೆಲೆ ವೃದ್ಧೆಯ ತಾತ್ಕಾಲಿಕ ವಾಸಕ್ಕಾಗಿ ಅಧಿಕಾರಿಗಳು ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದ್ದಾರೆ.

- ಸಾಮಗ್ರಿ ಇಟ್ಟುಕೊಳ್ಳಲು ಸ್ಥಳಾವಕಾಶ ಕಲ್ಪಿಸಿದ ಅಧಿಕಾರಿಗಳು - - -

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್‌ನಲ್ಲಿ ಬಿ.ಬಸಾಪುರ ನಿವಾಸಿ ಗಂಗಮ್ಮ ಅವರ ಮನೆಯು ಮಳೆಯಿಂದಾಗಿ ಬಿದ್ದುಹೋಗಿದೆ. ಈ ಹಿನ್ನೆಲೆ ವೃದ್ಧೆಯ ತಾತ್ಕಾಲಿಕ ವಾಸಕ್ಕಾಗಿ ಅಧಿಕಾರಿಗಳು ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದರು.

ಅಲ್ಲದೇ, ಅಕ್ಕಪಕ್ಕದ ನಿವಾಸಿಗಳ ಮನವೊಲಿಸಿ ಮನೆ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ತುರ್ತಾಗಿ ಸ್ಪಂದಿಸಿದರು. ಅಧಿಕಾರಿಗಳ ಕಾರ್ಯಕ್ಕೆ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರಣ್ಣವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಳೆಯಿಂದ ಜು.26ರಂದು ಗಂಗಮ್ಮ ತಂದೆ ಕೊಟ್ರಚಾರಿ ಅವರ ಮನೆ ಬಿದ್ದುಹೋಗಿತ್ತು. ಸ್ಥಳಕ್ಕೆ ನ್ಯಾಯಾಧೀಶರು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದರು. ಆಗ ತಹಸೀಲಾರ್, ಪಾಲಿಕೆ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಭೇಟಿ ನೀಡಿದ್ದರು.

ಎಸ್‌ಡಿಆರ್‌ಎಫ್‌ನಡಿ ಸಂತ್ರಸ್ತೆಗೆ ಪರಿಹಾರ, ಪಾಲಿಕೆ ವತಿಯಿಂದ ಮನೆ ನಿರ್ಮಿಸಿಕೊಡಲು ದಾಖಲೆಗಳ ಪರಿಶೀಲನೆ ಮಾಡಲಾಯಿತು. ಎಲ್ಲ ದಾಖಲೆಗಳನ್ನು ನ್ಯಾಯಾಧೀಶರು ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು. ವಿವಿಧ ಇಲಾಖೆ ಅಧಿಕಾರಿಗಳು ಸಂತ್ರಸ್ತೆಗೆ ತಾತ್ಕಾಲಿಕವಾಗಿ ಎಲ್ಲ ನೆರವು ನೀಡಲು ಸ್ಪಂದಿಸಿ, ಅಗತ್ಯ ಕ್ರಮ ಕೈಗೊಂಡಿದ್ದಾರೆ.

- - -

-28ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಮಳೆಯಿಂದ ಮನೆ ಬಿದ್ದ ಪರಿಣಾಮವಾಗಿ ಸಂತ್ರಸ್ತೆ ಗಂಗಮ್ಮ ಅವರಿಗೆ ಅಧಿಕಾರಿಗಳು ತಾತ್ಕಾಲಿಕ ವಾಸಕ್ಕಾಗಿ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದರು.