ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

| Published : Nov 24 2024, 01:49 AM IST

ಸಾರಾಂಶ

ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಪಕ್ಷ ನಾಯಕರ ಮೂರ್ಖತನದ ಪರಮಾವಧಿ. ಜನತೆಯ ನೋವಿಗೆ ಬಡವರ ಸಂಕಷ್ಟಕ್ಕೆ ಸ್ಪಂದನೆ ಮಾಡಿದರೆ ಜನ ನಮ್ಮ ಪರವಾಗಿ ಇರುತ್ತಾರೆ ಎಂಬುದಕ್ಕೆ ಈ ಉಪಚುನಾವಣೆಯ ಗೆಲುವು ಉದಾಹರಣೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಪ್ರತಿಯೊಂದು ಮನೆಗೆ ತಲುಪಿ ಜನರು ಕಾಂಗ್ರೆಸ್ ಪರ ಇದ್ದೇವೆ ಎಂಬುದನ್ನು ಉಪಚುನಾವಣೆಯಲ್ಲಿ ತೋರಿಸಿದ್ದಾರೆ ಎಂದರು.

ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಚುನಾವಣೆ ಗೆಲ್ಲುತ್ತೇವೆ ಎನ್ನುವ ವಿಪಕ್ಷ ನಾಯಕರ ಮೂರ್ಖತನದ ಪರಮಾವಧಿ. ಜನತೆಯ ನೋವಿಗೆ ಬಡವರ ಸಂಕಷ್ಟಕ್ಕೆ ಸ್ಪಂದನೆ ಮಾಡಿದರೆ ಜನ ನಮ್ಮ ಪರವಾಗಿ ಇರುತ್ತಾರೆ ಎಂಬುದಕ್ಕೆ ಈ ಉಪಚುನಾವಣೆಯ ಗೆಲುವು ಉದಾಹರಣೆಯಾಗಿದೆ ಎಂದರು.

ಈ ವೇಳೆ ಮನ್ಮುಲ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆಬ್ಬಳ್ಳಿ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಅಪ್ಪಾಜಿ, ನಗರ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಕಾರ್ಮಿಕ ವಿಭಾಗದ ಶಿವರುದ್ರ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಚಿನಕುರಳಿ ರಮೇಶ್, ಕಾಡ ಮಾಜಿ ಸದಸ್ಯ ಹಂಚಹಳ್ಳಿ ಲೋಕೇಶ್, ಚಂದಗಾಲು ವಿಜಯಕುಮಾರ್, ಕಾಂಗ್ರೆಸ್ ನಾಯಕ ಶಿವನಂಜು, ನಗರಸಭಾ ಸದಸ್ಯ ಶ್ರೀಧರ್,

ಪೇಟೆ ಬೀದಿ ರಾಜು, ವಿಜಯಲಕ್ಷ್ಮಿ ರಘುನಂದನ್, ಎಲ್.ಸಂದೇಶ್, ಸಿ.ಎಂ.ದ್ಯಾವಪ್ಪ, ಉಮ್ಮಡಹಳ್ಳಿ ನಾಗೇಶ್, ಚನ್ನಪ್ಪ, ಪ್ರಕಾಶ್, ದೇವರಾಜು ಮತ್ತಿತರರು ಇದ್ದರು.

ಇಂದು ತಾಲೂಕು ಮಟ್ಟದ ರೈತ ಸಮಾವೇಶ

ಭಾರತೀನಗರ: ರಾಜ್ಯ ರೈತ ಸಂಘದ ವತಿಯಿಂದ ಗೆಜ್ಜಲಗೆರೆ ಗೋಲಿಬಾರ್‌ನಲ್ಲಿ ಮಡಿದ ರೈತರ ಹುತಾತ್ಮ ದಿನಾಚರಣೆ ಅಂಗವಾಗಿ ನ.24 ರಂದು ತಾಲೂಕು ಮಟ್ಟದ ಬೃಹತ್ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಧ್ವಜಾರೋಹಣವನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೆರವೇರಿಸುವರು. ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ರೈತಸಂಘದ ವರಿಷ್ಠರಾದ ಸುನೀತ ಪುಟ್ಟಣ್ಣಯ್ಯ, ಕಾರ್ಯಾಧ್ಯಕ್ಷ ಎ.ಎಂ.ಮಹೇಶ್, ಎ.ಗೋವಿಂದರಾಜು, ಜೆ.ಎಂ.ವೀರಸಂಗಯ್ಯ, ಮಹಿಳಾ ಘಟಕ ಕಾರ್ಯಾಧ್ಯಕ್ಷೆ ಯದುಶೈಲ ಸಂಪತ್ತು, ಉಪಾಧ್ಯಕ್ಷ ಕೆ.ಎಂ.ಮಲ್ಲಯ್ಯ, ಎ.ಎಲ್.ಕೆಂಪೂಗೌಡ, ಸಿದ್ದರಾಜು, ಹೊಸಕೋಟೆ ಬಸವರಾಜು, ನೇತ್ರಾವತಿ, ರಮ್ಯರಾಮಣ್ಣ ಸೇರಿದಂತೆ ಹಲವರು ಭಾಗವಹಿಸುವರು.