ಕನ್ನಡಪ್ರಭ ವಾರ್ತೆ ಮಧುಗಿರಿ
ಎಲ್ಲ ಜನಾಂಗದ ಪ್ರೀತಿ,ವಿಶ್ವಾಸವೇ ನಮ್ಮ ಶಕ್ತಿ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವೆಂದು ಶಾಸಕ ಕೆ.ಎನ್.ರಾಜಣ್ಣ ಅಬಿಪ್ರಾಯಪಟ್ಟರು.ತಾಲೂಕಿನ ಚಂದ್ರಗಿರಿಯಲ್ಲಿ ಆಯೋಜಿಸಿದ್ದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಕಾರ್ಮಿಕರಿಗೆ ಸಲಕರಣೆ, ಗ್ರಾಮಸ್ಥರಿಗೆ ನಿವೇಶನಗಳ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಅಭಿವೃದ್ಧಿಯೇ ನನ್ನ ಗುರಿ, ಚುನಾವಣೆಗಳಲ್ಲಿ ಜಾತಿ, ಸುಳ್ಳು ಭರವಸೆಗಳಿಗೆ ಜನ ಮತ ಹಾಕುವುದಿಲ್ಲ,ಈ ಹೋಬಳಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸುವ ಸದುದ್ದೇಶದಿಂದ ಜಿಟಟಿಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೋರಾರ್ಜಿ ದೇಸಾಯಿ ವಸತಿ ಶಾಲೆ , ಇದೇ ಶಾಲೆಯಲ್ಲಿ ಪಪೂ ವಿಜ್ಞಾನ ಕಾಲೇಜು ಪ್ರಾರಂಭಿಸಿ ಮೇಲ್ದರ್ಜೆಗೆ ಏರಿಸಿದ್ದು, ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಕಲಿತು ಹೆತ್ತವರಿಗೆ ಹಾಗೂ ಗುರು ಹಿರಿಯರಿಗೆ ಗೌರವ ತರಬೇಕು ಎಂದು ಕರೆ ನೀಡಿದರು.ನಮ್ಮ ತಾಲೂಕು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗಿ ರೈತರನ್ನು ,ಕೂಲಿಕಾರ್ಮಿರನ್ನು ಸಾಲದ ಸುಳಿಗೆ ನೂಕಲ್ಪಡುತ್ತಿದೆ. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಜಾರಿ ಮಾಡಿದ ಅನ್ನಭಾಗ್ಯ ಯೋಜನೆ ವರದಾನ. ನಮ್ಮ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಬರ ನಿರ್ವಹಣೆ ಮಾಡಲು ಸರ್ಕಾರ ಸನ್ನದ್ಧವಾಗಿದೆ. ಯಾರು ಸಹ ಅಪಪ್ರಚಾರಗಳಿಗೆ ಕಿವಿಗೊಡ ಬೇಡಿ ಎಂದರು.
ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ, ಜಿ.ಜೆ.ರಾಜಣ್ಣ, ಡಿವೈಎಸ್‌ಪಿ ಮಂಜುನಾಥ್, ತಹಸೀಲ್ದಾರ್ ನಂದಿನಿ ಇಓ ಉತ್ತಮ್, ಎಡಿ ಧನಂಜಯ್, ಎಇಇ ಮಂಜುನಾಥ್, ಬೆಸ್ಕಾಂ ಮಾಯಕ್ಕಣ್ಣ ನಾಯ್ಕ್, ಪಿಡಬ್ಲಯೂಡಿ ಇಇ ಹನುಮಂತರಾವ್, ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀಕಾಂತ್,ಗ್ಯಾರಂಟಿ ಅಧ್ಯಕ್ಷ ಚೌಡಪ್ಪ, ಲಕ್ಷ್ಮೀನಾರಾಯಣ್,ನಾರಾಯಣ್ ಗೌಡ,ರಮೇಶ್, ಕುರುಬರಹಳ್ಳಿ,ಹರ್ಷ ,ಪ್ರಸನ್ನ ಕುಮಾರ್,ನಜೀರ್,ಬಿ.ನಾಗೇಶ್ ಬಾಬು,ಪಿಡಿಒ ಗೋಪಾಲಕೃಷ್ಣ್, ಕಂದಾಯ ತನಿಖಾಧಿಕಾರಿ ಜಯಪ್ರಕಾಶ್,ಸಿಡಿಪಿಓ ಕುಮಾರನಾಯ್ಕ್, ಮೇಲ್ವಿಚಾರಕಿ ಭಾರತಿ ಅಂಚಟಗಿರಿ ಇತರರಿದ್ದರು.