ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ

| Published : Feb 12 2024, 01:35 AM IST

ಸಾರಾಂಶ

ನಮ್ಮ ಜಿಲ್ಲಾ ಸಂಘವು ರಾಜ್ಯ ಸಂಘದ ಸದಸ್ಯತ್ವ ಪಡೆದಿದೆ. ಈ ಐಡಿ ಕಾರ್ಡಗಳು ರಾಜ್ಯಾದ್ಯಂತ ಮಾನ್ಯತೆ ಹೊಂದಿವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಸ್ತುತ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಫೋಟೋಗ್ರಾಫಿ ಕಲೆಯಲ್ಲಿ ಎಲ್ಲರೂ ಮುಂದೆ ಬರಬೇಕು ಎಂದು ಅನುಭವಿ ಛಾಯಾಗ್ರಾಹಕ ಅಮೃತ್ ಚರಂತಿಮಠ ಹೇಳಿದರು. ಸದಾಶಿವ ನಗರದ ಸಂಘದ ಕಚೇರಿಯಲ್ಲಿ ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರ ಮತ್ತು ವಿಡಿಯೋ ಗ್ರಾಫರ ಕ್ಷೇಮಾಭಿವೃದ್ಧಿ ಸಂಘದ ಐಡಿ ಕಾರ್ಡುಗಳನ್ನು ಸಂಘದ ನೋಂದಾಯಿತ ಸದಸ್ಯರಿಗೆ ವಿತರಿಸಿ ಮಾತನಾಡಿದ ಅವರು, ಈ ಐಡಿ ಕಾರ್ಡ್‌ಗಳನ್ನು ಎಲ್ಲರೂ ಧರಿಸಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ, ನಯ ವಿನಯ ಇರಬೇಕು ಎಂದರು.ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ, ಛಾಯಾಗ್ರಾಹಕರು ಎಲ್ಲ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು, ಗ್ರಾಹಕರೊಂದಿಗೆ ವರ್ತಿಸುವುದನ್ನು ನಾವು ಕಲಿಯಬೇಕು. ಇದರಿಂದ ನಮಗೆ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಆಗ ನಮ್ಮನ್ನು ಸಮಾಜವು ಕೂಡ ಗುರುತಿಸುತ್ತದೆ.

ಸಂಘದ ಸದಸ್ಯರಾದ ರಿತೇಶ ಒಕ್ಕಲಗೌಡ ಹಾಗೂ ರಾಜು ಮುಚ್ಚಂಡಿ, ಮಿನಾಜ ಬಾದಾಮಿ, ಮಂಜುನಾಥ ಕುಂದರಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಅಧ್ಯಕ್ಷ ಬಸವರಾಜ ರಾಮಣ್ಣವರ ಮಾತನಾಡಿ, ನಮ್ಮ ಜಿಲ್ಲಾ ಸಂಘವು ರಾಜ್ಯ ಸಂಘದ ಸದಸ್ಯತ್ವ ಪಡೆದಿದೆ. ಈ ಐಡಿ ಕಾರ್ಡಗಳು ರಾಜ್ಯಾದ್ಯಂತ ಮಾನ್ಯತೆ ಹೊಂದಿವೆ ಎಂದು ತಿಳಿಸಿದರು. ಬರುವ ದಿನಗಳಲ್ಲಿ ಬೇರೆ ಬೇರೆ ಕಾರ್ಯಾಗಾರಗಳನ್ನು ಪ್ರಸಿದ್ಧ ಹಾಗೂ ಅನುಭವಿಗಳಿಂದ ನಡೆಸಲಾಗುವುದು, ಕಾರಣ ಎಲ್ಲಾ ಛಾಯಾಗ್ರಾಹಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದರು. ಸಂಘದ ಕಾರ್ಯದರ್ಶಿ ಪ್ರಕಾಶ ಕಳಸದ ನಿರೂಪಿಸಿ, ವಂದಿಸಿದರು.