ಸಾರಾಂಶ
-ಕಲಬುರಗಿ ಸುತ್ತಲಿನ ಆಸ್ತಿಕ ಭಕ್ತರನ್ನೆಲ್ಲ ಅನುಗ್ರಹಿಸಿದ ಗುರುಗಳು । ಸೋಕೇರ್ ಮಕ್ಕಳ ಘಟಕ, ಗಂಗೋತ್ರಿ ಪಾಠಶಾಲೆಗೂ ಭೇಟಿ
-----ಕನ್ನಡಪ್ರಭ ವಾರ್ತೆ ಕಲಬುರಗಿ
ಸನಾತನ ಧರ್ಮದ ಮೇರು ಪೀಠ, ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀಶಾರದಾ ಪೀಠಂ ಶೃಂಗೇರಿಯ ಶ್ರೀ ವಿದುಶೇಖರ ಭಾರತೀ ಶ್ರೀಗಳು ಮಾ.16ರಿಂದ ಮೂರ ದಿನಗಳ ಕಾಲ ನಿರಂತರ ಜಿಲ್ಲೆಯಲ್ಲಿ ದಿಗ್ವಿಜಯ ನಡೆಸುವ ಮೂಲಕ ಕಲಬುರಗಿ ಜಿಲ್ಲೆಯ ಸಮಸ್ತ ಆಸ್ತಿಕ ಭಕ್ತರಿಗೆ ಪುನೀತರನ್ನಾಗಿಸಿದರು.ಕಲಬುರಗಿ ಬಿಸಿಲಿನ ಕಾರಣದಿಂದಾಗಿ ಬಿಸಿಲೂರು ಎಂದೇ ಹೆಸರು ಪಡೆದಿದೆ. ಆದರೆ, ಶ್ರೀ ಶಾರದಾ ಪೀಠಂ ಶೃಂಗೇರಿಯ ಶ್ರೀ ವಿದುಶೇಖರ ಭಾರತೀ ಶ್ರೀಗಳ ಕಲಬುರಗಿ ಭೇಟಿಯ ಕಾಲದಲ್ಲಿ ಆಸ್ತಿಕ ಭಕ್ತರೆಲ್ಲರೂ ಅವರಿದ್ದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಸೇರುವ ಮೂಲಕ ಬಿಸಿಲ ಅಲೆಯನ್ನೇ ಮೀರಿಸುವಂತಹ ಭಕ್ತಿಯ ಸೆಲೆ ಪುಟಿದೆಬ್ಬಿಸಿತ್ತು, ಆ ಮೂಲಕ ಶ್ರೀ ಶಂಕರ ಸೇವಾ ಸಮಿತಿಯ ಕಲಬುರಗಿಯ ಈ ಕಾರ್ಯಕ್ರಮ ಹೊಸ ಇತಿಹಾಸ ಬರೆಯಿತು.
ಮೂರು ದಿನಗಳಿಂದ ಕಲಬುರಗಿ ನಗರದಲ್ಲಿ ಸಾಕ್ಷಾತ್ ಶಿವನ ಅವತಾರಿಗಳಾದ ಶೃಂಗೇರಿ ಪೀಠದ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿದುಶೇಖರ ಭಾರತೀ ಶ್ರೀಗಳು ತಮ್ಮೊಂದಿಗಿದ್ದು ಉಪನ್ಯಾಸ ಮಾಡುತ್ತ ಸನಾತನ ಧರ್ಮದ ಸಂದೇಶ ಸಾರಿದ್ದರ ಜೊತೆಗೆ ಪೂಜೆ-ಪುನಸ್ಕಾರಗಳ ಮೂಲಕವಾಗಿ ಸಹಸ್ರಾರು ಆಸ್ತಿಕ ಭಕ್ತರನ್ನೆಲ್ಲ ಮನದುಂಬಿ ಅನುಗಹಿಸಿರೋದು ತಮ್ಮ ಪುಣ್ಯವೆಂಬಂತೆ ಭಕ್ತರೆಲ್ಲರೂ 3 ದಿನಗಳ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪುನೀತರಾದರು.ಮೂರು ದಿನಗಳಲ್ಲಿ ಶ್ರೀಗಳು ಗಾಣದಾಪುರ ದತ್ತ ಮಹಾರಾಜರ ಮಂದಿರ, ಚಿತ್ತಾಪುರ, ಕಲಬುರಗಿ ನಗರದ ಅನೇಕ ಪವಿತ್ರ ಸ್ಥಾನಗಳು, ಸಾಮಾಜಿಕ ಕೆಲಸಗಳು ನಡೆದಿರುವ ಸೇವಾ ಪ್ರಕಲ್ಪಗಳಿಗೆಲ್ಲದಕ್ಕೂ ಭೇಟಿ ನೀಡಿ, ಪಕ್ಕದ ಬೀದರ್ ಇಲ್ಲೆಲ್ಲಾ ಭೇಟಿ ನೀಡಿ ಎಲ್ಲೆಡೆ ಭಕ್ತಿಯ ಸೆಲೆ ಪುಟಿದೇಳುವಂತೆ ಮಾಡಿದ್ದು ವಿಶೇಷವಾಗಿತ್ತು.
-----.....ಬಾಕ್ಸ್......
ಸೋಕೇರ್ ಮಕ್ಕಳ ಕಾಳಜಿ ಕೇಂದ್ರಕ್ಕೆ ಭೇಟಿ:ಕಲಬುರಗಿಯಲ್ಲಿ ದಶಕದಿಂದ ಸಾಗಿರುವ ಸೊಕೇರ್ ಎಂಡ್ ಮಕ್ಕಳ ಕಾಳಜಿ ಕೇಂದ್ರ (ಶೃಂಗೇರಿ ಶಾರದಾಪೀಠದ ಘಟಕ) ಕಲಬುರಗಿ ಶಾಖೆಯಲ್ಲಿನ ಮಕ್ಕಳಿಗೆ ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳು ಕರುಣಾಪೂರಿತರಾಗಿ ವಿಶೇಷ ಅನುಗ್ರಹಮಾಡಿದರು. ಈ ಘಟಕವು ಜೀವಾವಧಿ ಶಿಕ್ಷೆಗೊಳಗಾದ ದೀರ್ಘಕಾಲೀನ ಅಪರಾಧಿಗಳು ಮತ್ತು ಕೈದಿಗಳ ಮಕ್ಕಳಿಗೆ ವಿಶೇಷ ಆರೈಕೆ ಒದಗಿಸುತ್ತಿರುವುದು ವಿಶೇಷವಾಗಿದೆ. ಶೃಂಗೇರಿ ಶರದಾ ಪೀಠದ ವಿಶೇಷ ಪ್ರತಿನಿಧಿಯಾಗಿರುವ ಹಿರಿಯ ವಕೀಲರಾದ ಪ್ರಕಾಶ ಕುಲಕರ್ಣಿಯವರು ಸೋಕೇರ್ ಸಂಸ್ಥೆಯ ಮೇಲುಸ್ತುವಾರಿ ವಹಿಸಿದ್ದು ಇಲ್ಲಿನ ಮಕ್ಕಳಿಗೆ ತುಂಬ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಲ್ಲಿ, ಅವರಿಗೆ ಸಕಲ ಸವಲತ್ತು ಕೊಟ್ಟು ಪೋಷಿಸುವಲ್ಲಿ ಹೆಸರುವಾಸಿಯಾಗಿದ್ದಾರೆ,
---------...ಬಾಕ್ಸ್....
ಗಂಗೋತ್ರಿ ವೇದಪಾಠ ಶಾಲೆಗೆ ಶ್ರೀಗಳ ಮೆಚ್ಚುಗೆವಧುಶೇಖರ ಭಾರತಿ ಶ್ರೀಗಳು ಕಲಬುರಗಿಯಲ್ಲಿ ತಂಗಿದ್ದ ಎರಡು ದಿವಸಗಳು ಗಂಗೋತ್ರೀ ವೇದಪಾಠ ಶಾಲೆಗೆ ಭೇಟಿ ನೀಡಿ, ಪಾಠ ಶಾಲೆಯ ಕಾರ್ಯ ಚಟುವಟಿಕೆಗೆ ಮೆಚ್ಚುಗೆ ಸೂಚಿಸಿ ಶಾಲೆಯ ಉತ್ತರೋತ್ತರ ಬೆಳವಣಿಗೆಗೆ ಅನುಗ್ರಹಿಸಿದರು. ರಾಮ್ ಮಂದಿರ ರಿಂಗ್ ರಸ್ತೆ ಬಳಿ ಇರುವ ಗಂಗೋತ್ರಿವೇದ ಪಾಠ ಶಾಲೆಗೆ ದಕ್ಷಿಣಾಮ್ನಾಯ ಶೃಂಗೇರಿ ಪೀಠದ ವಿಧುಶೇಖರ ಭಾರತಿ ಮಹಾಸ್ವಾಮಿ ಭೇಟಿ ನೀಡಿರೋದು ಸುವರ್ಣಗಳಿಗೆ ಎಂದು ಪಾಠಶಾಲೆಯ ಸಂಚಾಲಕ ಡಾ. ಯೋಗೇಶ ಭಟ್ ಬಣ್ಣಿಸಿದ್ದಾರೆ. ಗಂಗೋತ್ರೀ ವೇದಪಾಠ ಶಾಲೆಯಲ್ಲಿ ಋಗ್ವೇದ ಸಂಹಿತಾ ಅಧ್ಯಯನ ಪೂರ್ತಿ ಮುಗಿಸಿದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಪಾಠಶಾಲೆಯ ಗುರುಗಳಾದ ಮೋಹನಭಟ್ ಜೋಶಿಯವರ ನೇತೃತ್ವದಲ್ಲಿ ವೇದ ಪಾರಾಯಣ ಮಾಡಿಸಿದರು. ಇದೊಂದು ಭಾವುಕ ಕ್ಷಣವಾಗಿ ಪಾಠಶಾಲೆಯ ಇತಿಹಾಸದ ಪುಟಗಳಲ್ಲಿ ದಾಖಲಾಯ್ತು. ಎಲ್ಲರಿಗೂ ಶ್ರೀಗಳು ಆಶಿರ್ವಾದಪೂರ್ವಕ ಸನ್ಮಾನ ಮಾಡಿದರು. ವಿದ್ಯಾರ್ಥಿಗಳೆಲ್ಲರೂ ಕೃತಾರ್ಥ ಭಾವ ಹೊಂದಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವೇದಾಧ್ಯಯನ ಪುನರುಜ್ಜೀವನಗೊಳಿಸಿದ್ದಕ್ಕಾಗಿ ಜಗದ್ಗುರು ಸಂತಸ ವ್ಯಕ್ತಪಡಿಸಿದರೆಂದು ಡಾ. ಯೋಗೇಶ ಭಟ್ ಹೇಳಿದ್ದಾರೆ.
------....ಬಾಕ್ಸ್....
ಸನಾತನ ಧರ್ಮ ಉಳಿಸಿದವರು ಶಂಕರಾಚಾರ್ಯರು: ಶ್ರೀಗಳಿಗೆ ಪತ್ರಶ್ರೀ ಶೃಂಗೇರಿ ಶಾರದಾ ಪೀಠಂ ಕಲಬುರ್ಗಿ ಜಿಲ್ಲಾ ಘಟಕ, ಶಂಕರ ಮಠದಿಂದ ವಿಧುಶೇಖರ ಶ್ರೀಗಳಿಗೆ ಸಾರ್ವಜನಿಕವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಭಿನಂದನಾ ಪತ್ರ ಅರ್ಪಿಸಲಾಯಿತು. ಇಂದು ವಿಶ್ವದಲ್ಲಿ ಸನಾತನ ಧರ್ಮ ಉಳಿದಿದೆ. ವಿಶ್ವದ ವಿಜ್ಞಾನದ ತಳಹದಿಯಾದ ವೇದ ಶಾಸ್ತ್ರಗಳು ಉಳಿದಿವೆ ಎಂದರೆ ಅದು ಜಗದ್ಗುರು ಶಂಕರಾಚಾರ್ಯ ಕೃಪೆಯಿಂದ, ವೇದ ಉಪನಿಷತ್ತು ಮತ್ತು ಪುರಾಣಗಳು ಇನ್ನು ಪೃಥ್ವಿಯ ಮೇಲೆ ಇವೆ ಎಂದರೆ ಅದು ಸನಾತನದ ದೇಣಿಗೆ, ಸನಾತನತೆ ಮತ್ತು ಅದರ ಧರ್ಮ ಗ್ರಂಥಗಳು ಉಳಿಯಲು ಕಾರಣಕರ್ತರಾದ ಅತಿ ಮಹಾನ್ ಯೋಗಿಗಳೇ ಜಗದ್ಗುರು ಶ್ರೀಶಂಕರಾಚಾರ್ಯರು. ಶೃಂಗೇರಿ ಪೀಠಕ್ಕೆ ಚಿರಋಣಿಯಾಗಿರುವುದು, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕಾಯ್ದುಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಶೃಂಗೇರಿ ಪೀಠಕ್ಕೆ ಶಂಕರ ಸೇವಾ ಸಮಿತಿಯ ಪರವಾಗಿ ವಕೀಲ ಪಿ.ಎಚ್.ಕುಲಕರ್ಣಿ ಗೌರವ ಅರ್ಪಿಸಿದರು.
---------------...ಕೋಟ್.....
ಸನಾತನಿಗಳ ಐಕ್ಯತೆಗೆ ಕನ್ನಡಿ ಹಿಡಿದ ದಿಗ್ವಿಜಯಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಕಲಬುರಗಿ ದಿಗ್ವಿಜಯ ಹೊಸ ದಾಖಲೆ ಬರೆದಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆ ಮಠಭೇದ ಮರೆತು ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಹೊಸ ದಾಖಲೆ ಬರೆದಿದೆ. ಸನಾತನಿಗಳ ಐಕ್ಯತೆಯನ್ನು ಪ್ರದರ್ಶಿಸಿ, ಕಲಬುರಗಿ ನಗರದ ಎಲ್ಲಾ ಬ್ರಾಹ್ಮಣರು ಯಾವುದೇ ತಾರತಮ್ಯವಿಲ್ಲದೆ ಈ ಕಾರ್ಯಕ್ರಮ ಭಾಗಿಯಾಗಿದ್ದರು. ಈ ಒಗ್ಗಟ್ಟು ಹೀಗೆಯೆ ಮುಂದುವರೆಯಲಿ.
-ಪ್ರಕಾಶ . ಎಚ್. ಕುಲಕರ್ಣಿ, ವಿಶೇಷ ಪ್ರತಿನಿಧಿಗಳ, ಹಿರಿಯ ವಕೀಲರುಶೃಂಗೇರಿ ಶಾರದಾ ಪೀಠಂ, ಕಲಬುರಗಿ ಘಟಕ
---------------ಫೋಟೋ- ಶ್ರೀ 1, ಶ್ರೀ 2
ಕಲಬುರಗಿ ದಿಗ್ವಿಜಯದಲ್ಲಿ ವಿಧುಶೇಖರ ಭಾರತಿ ಶ್ರೀಗಳಿಂದ ಪೂಜೆಫೋಟೋ- ಶ್ರೀ 3 ಮತ್ತು ಶ್ರೀ 4
ಕಲಬುರಗಿಯಲ್ಲಿರುವ ಗಂಗೋತ್ರಿ ವೇದಪಾಠಶೆಲೆಗೆ ಗುರುಗಳ ಬೇಟಿ- ಅಲ್ಲಿನ ಅಧ್ಯನಾರ್ಥಿಗಳೊಂದಿಗೆ ಸಂವಾದಫೋಟೋ- ಶ್ರೀ 5, ಶ್ರೀ 6, ಶ್ರೀ 7
ಕಲಬುರಗಿಯಲ್ಲಿರುವ ಶಂಕರಮಠ ಸಂಚಾಲಿತ ಸೋಕೇರ್ ಮಕ್ಕಳ ಆರೈಕೆ ಕೇಂದ್ರಕ್ಕೆ ವಿಧುಶೇಖರ ಬಾರತಿ ಶ್ರೀಗಳ ಭೇಟಿ, ಅಲ್ಲಿನ ಮಕ್ಕಳಿಗೆ ವಿಸೇಷ ಅನುಗ್ರಹ