ಖಾಸಗಿ ಪಿಯು ಕಾಲೇಜು, ಶಿಕ್ಷಣ ಸಂಸ್ಥೆಯನ್ನು ನಡೆಸುವುದೇ ಇಂದು ಕಷ್ಟವಾಗುತ್ತಿದ್ದು, ಇಂತಹ ಸ್ಪರ್ಧಾತ್ಮಕ ಪರಿಸರದಲ್ಲಿ ವಿದ್ವತ್ ಎಜುಕೇಷನ್ ಟ್ರಸ್ಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದು ಶ್ರೀ ವಿನಾಯಕ ಎಜುಕೇಷನಲ್ ಟ್ರಸ್ಟ್‌ನ ಟ್ರಸ್ಟಿ, ಅಥಣಿ ಕಾಲೇಜು ಅಧ್ಯಕ್ಷ, ಉದ್ಯಮಿ ಅಥಣಿ ಪ್ರಶಾಂತ ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಖಾಸಗಿ ಪಿಯು ಕಾಲೇಜು, ಶಿಕ್ಷಣ ಸಂಸ್ಥೆಯನ್ನು ನಡೆಸುವುದೇ ಇಂದು ಕಷ್ಟವಾಗುತ್ತಿದ್ದು, ಇಂತಹ ಸ್ಪರ್ಧಾತ್ಮಕ ಪರಿಸರದಲ್ಲಿ ವಿದ್ವತ್ ಎಜುಕೇಷನ್ ಟ್ರಸ್ಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದು ಶ್ರೀ ವಿನಾಯಕ ಎಜುಕೇಷನಲ್ ಟ್ರಸ್ಟ್‌ನ ಟ್ರಸ್ಟಿ, ಅಥಣಿ ಕಾಲೇಜು ಅಧ್ಯಕ್ಷ, ಉದ್ಯಮಿ ಅಥಣಿ ಪ್ರಶಾಂತ ಶ್ಲಾಘಿಸಿದರು.ನಗರದ ವಿದ್ವತ್ ಎಜುಕೇಷನಲ್ ಟ್ರಸ್ಟ್‌ನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ವತ್‌ನ ವ್ಯವಸ್ಥಾಪಕ ಟ್ರಸ್ಟಿ ಬಿ.ಎಸ್.ಅರುಣಕುಮಾರ, ಟ್ರಸ್ಟಿ ಡಿ.ಎಸ್.ಸುನೀತಾ ಅರುಣ್ ಇಡೀ ಸಂಸ್ಥೆಯ ಸದಸ್ಯರ ಒಗ್ಗಟ್ಟಿನ ಪರಿಶ್ರಮದ ಫಲವಾಗಿ ವಿದ್ವತ್ ಸಂಸ್ಥೆ ವರ್ಷ ವರ್ಷಕ್ಕೂ ಉತ್ತಮವಾಗಿ ಬೆಳೆಯುವ ಜೊತೆಗೆ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುತ್ತಿದೆ ಎಂದರು.
ವಿದ್ವತ್ ವಾರ್ಷಿಕೋತ್ಸವಕ್ಕೆ ವಿವಿಧ ಕಾಲೇಜುಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದಾರೆ. ಹಾಗೆ ನೋಡಿದರೆ ಬೇರೆ ಶಿಕ್ಷಣ ಸಂಸ್ಥೆಗಳು ಸ್ಪರ್ಧೆಯೊಡ್ಡುತ್ತಿರುವವರು. ಆದರೆ, ಅರುಣ್-ಸುನಿತಾ ದಂಪತಿ ಮೇಲಿನ ಅಭಿಮಾನದಿಂದ ಅನ್ಯ ಕಾಲೇಜು ಮುಖ್ಯಸ್ಥರು ಸಹ ಅತಿಥಿಗಳಾಗಿ ಆಗಮಿಸಿರುವುದು, ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸುವುದಾಗಿ ಅತಿಯಾಗಿ ರಿಯಾಯಿತಿ ಕೇಳದೆ, ಕಾಲೇಜಿನ ಶುಲ್ಕ ಪಾವತಿಸಿ, ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.ಶಿರಮಗೊಂಡನಹಳ್ಳಿ ಅನ್‌ಮೋಲ್ ಎಜುಕೇಷನ್ ಅಧ್ಯಕ್ಷ ಸಿ.ಜಿ.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯತ್ತ ಸ್ಪಷ್ಟ ಯೋಜನೆ ರೂಪಿಸಿಕೊಂಡು, ಅದಕ್ಕೆ ನಿರಂತರ ಪ್ರಯತ್ನಪಡಬೇಕು. ಉತ್ತಮವಾಗಿ ಅಭ್ಯಾಸ ಮಾಡಬೇಕು ಎಂದರು.
ಮಾಗನೂರು ಬಸಪ್ಪ ಪಿಯು ಕಾಲೇಜಿನ ನಿರ್ದೇಶಕ ಡಾ.ಜಿ.ಎನ್.ಎಚ್.ಕುಮಾರ ಮಾತನಾಡಿ, ಪಿಯುನಲ್ಲಿ ವಿಜ್ಞಾನಕ್ಕೆ ಮಕ್ಕಳನ್ನು ಸೇರಿಸುವ ಪಾಲಕರು ಪದೇಪದೇ ಮಕ್ಕಳನ್ನು ರಜೆ ಮಾಡಿಸಿಕೊಂಡು, ಎಲ್ಲಿಗೂ ಕರೆದೊಯ್ಯಬಾರದು. ನಿಮ್ಮ ಮಕ್ಕಳಿಗೆ, ಆ ಮಕ್ಕಳ ಭವಿಷ್ಯಕ್ಕೆ ಪಿಯು ಶಿಕ್ಷಣ ಹಂತ ಅತ್ಯಂತ ಮಹತ್ವದ್ದು ಎಂದರು.ಸಂಸ್ಥೆ ಟ್ರಸ್ಟಿ ಡಿ.ಎಸ್.ಸುನಿತಾ ಅರುಣ್, ವ್ಯವಸ್ಥಾಪಕ ಟ್ರಸ್ಟಿ ಬಿ.ಎಸ್.ಅರುಣಕುಮಾರ ಮಾತನಾಡಿದರು.
2025ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಂ.ಎಸ್.ವಿನಾಯಕ, ಜೆಇಇ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 227ನೇ ರ್‍ಯಾಂಕ್ ಪಡೆದ ಸಚಿನ್ ನಿಟ್ಟೂರುಗೆ ತಲಾ 50 ಸಾವಿರ ರು.ನಗದು ಬಹುಮಾನ ನೀಡಿ, ಪ್ರೋತ್ಸಾಹಿಸಲಾಯಿತು. ಪಾಲಕರ ಪರ ಹರಪನಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಶಶಿಕಲಾ ಹಾದಿಮನಿ, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಪಿ.ಸಿ.ರಾಮನಾಥ ಮಾತನಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ವಿದ್ವತ್ ಟ್ರಸ್ಟಿ ಬಿ.ಎಸ್.ಸುಬ್ರಹ್ಮಣ್ಯ, ಕನ್ನಡಪ್ರಭದ ನಾಗರಾಜ ಎಸ್.ಬಡದಾಳ್, ಬೋಧಕರಾದ ತೋಟಪ್ಳಳ ಮಂಜುನಾಥ, ರುದ್ರೇಶ, ಎಸ್.ಎಂ.ಮಧು, ವೈ.ವೆಂಕಟೇಶ, ಪಿ.ಎಸ್.ಶೇಖರ, ಎಸ್.ಸೀಮಾ ಕುಮಾರ, ಕೋ-ಆರ್ಡಿನೇಟರ್ ಬಿ.ಆರ್.ಮಂಜುನಾಥ, ಪಿಆರ್‌ಒ ಜಿ.ಎಸ್.ಲಿಂಗರಾಜ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.