ಭಗವಂತನ ಸ್ಮರಣೆಯಿಂದ ಬದುಕು ಸಾರ್ಥಕ: ವಿದ್ಯಾಪ್ರಿಯ ತೀರ್ಥ ಶ್ರೀ

| Published : Jul 09 2024, 12:49 AM IST

ಸಾರಾಂಶ

ಭಗವಂತನ ಶಾಂತ ಕೃಪಾದೃಷ್ಟಿ ನಮ್ಮ ಮೇಲೆ ಬೀಳಲಿ ಎನ್ನುವ ಉದ್ದೇಶದಿಂದ ನಾವೆಲ್ಲ ದೇವಸ್ಥಾನಗಳಿಗೆ ಹೋಗುತ್ತೇವೆ. ಭಗವಂತನ ಸ್ಮರಣೆ ಎಷ್ಟು ಮಾಡಿದರೂ ಕಡಿಮೆಯೇ.

ಕನ್ನಡಪ್ರಭ ವಾರ್ತೆ ಮೈಸೂರು

ಸದಾ ನಮ್ಮನ್ನು ಸಲಹುತ್ತಿರುವ ಭಗವಂತನ ಧ್ಯಾನ, ಜಪ, ತಪ ಮಾಡುವುದರಿಂದ ನಮ್ಮ ಬದುಕು ಕೂಡ ಸಾರ್ಥಕವಾಗುತ್ತದೆ ಎಂದು ಅದಮಾರು ಮಠದ ಪೀಠಾಧೀಶ ಶ್ರೀ ವಿದ್ಯಾಪ್ರಿಯಾತೀರ್ಥ ಶ್ರೀಪಾದಂಗಳ ತಿಳಿಸಿದರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿಯ ವತಿಯಿಂದ ನೂರಾರು ಭಕ್ತರ ಸಮಕ್ಷಮದಲ್ಲಿ ನೆರವೇರಿದ ಮಹಾಮೃತ್ಯುಂಜಯ ಹೋಮ ಬಳಿಕ ಮಾತನಾಡಿದ ಅವರು, ಭಗವಂತನ ಶಾಂತ ಕೃಪಾದೃಷ್ಟಿ ನಮ್ಮ ಮೇಲೆ ಬೀಳಲಿ ಎನ್ನುವ ಉದ್ದೇಶದಿಂದ ನಾವೆಲ್ಲ ದೇವಸ್ಥಾನಗಳಿಗೆ ಹೋಗುತ್ತೇವೆ. ಭಗವಂತನ ಸ್ಮರಣೆ ಎಷ್ಟು ಮಾಡಿದರೂ ಕಡಿಮೆಯೇ. ಮನುಷ್ಯನ ನೆಮ್ಮದಿಗೆ ಭಗವಂತನೇ ಹಾದಿ ಎಂದರು.

ಶ್ರೀ ಪಾದಂಗಳರವರ 7 ದಿನಗಳ ಪ್ರವಚನದ ಮಂಗಳ ಹಾಗೂ ಶ್ರೀ ಕೃಷ್ಣ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿಯ ವತಿಯಿಂದ ಶ್ರೀಪಾದಂಗಳ ಅವರಿಗೆ ಪುಷ್ಪವೃಷ್ಟಿ ಹಾಗೂ ಭಕ್ತ ಜನರಿಗೆ ಮಂಗಳಾಕ್ಷತೆ ನೀಡಿದರು.

ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್. ಶೇಖರ್, ಕಾರ್ಯದರ್ಶಿ ಕೆ.ವಿ. ಶ್ರೀಧರ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಪಿ.ಜಿ. ಪ್ರವೀಣ್, ಸದಸ್ಯರು ಮತ್ತು ಭಕ್ತಾದಿಗಳು ಇದ್ದರು.