ಸಾರಾಂಶ
ಇತ್ತೀಚಿನ ದಿನದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕ್ಷೀಣಿಸುತ್ತಿದ್ದು, ಇದನ್ನು ಮನಗಂಡ ನಮ್ಮ ಸಂಸ್ಥೆಯು ಕನ್ನಡಿಗರನ್ನು ಬೆಂಬಲಿಸಲಿಲು ಉದ್ಯೋಗ ಮೇಳವನ್ನು ಆಯೋಜಿಸಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿ ವಿಹಾರಿ ವಿವಾಹ ವೇದಿಕೆ, ಸರ್ವ ಅರ್ಜತೆ ಫೌಂಡೇಶನ್ ಕ್ಯಾಡ್‌ಮ್ಯಾಕ್ಸ್ ಸಹಯೋಗದೊಂದಿಗೆ ಕರ್ನಾಟಕದ ಕನ್ನಡದ ಮಹಿಳೆಯರಿಗೆ ಉದ್ಯೋಗ ಮೇಳವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ ಉದ್ಘಾಟಿಸಿದರು.ನೃತ್ಯ ಕಲಾಸಿಂಧು ಎಂ. ಪಂಕಜಾಕ್ಷಿ ರಾಮಕೃಷ್ಣಯ್ಯ, ಉದ್ಯಮಿ ವಿವೇಕಾನಂದ, ವಕೀಲರಾದ ಸಿದ್ದೇಗೌಡ, ಗೂಳೂರ್‌ಶ್ರೀನಿವಾಸ್, ಡಾ. ಪದ್ಮನಾಭ, ವಾದಿರಾಜ್‌ಇನಾಮ್‌ದಾರ್ ಭಾಗವಹಿಸಿದ್ದರು.
ಇತ್ತೀಚಿನ ದಿನದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕ್ಷೀಣಿಸುತ್ತಿದ್ದು, ಇದನ್ನು ಮನಗಂಡ ನಮ್ಮ ಸಂಸ್ಥೆಯು ಕನ್ನಡಿಗರನ್ನು ಬೆಂಬಲಿಸಲಿಲು ಉದ್ಯೋಗ ಮೇಳವನ್ನು ಆಯೋಜಿಸಿದೆ. ಬೆಳಗ್ಗೆ 10 ರಿಂದ 5ರವರೆಗೆ ನೋಂದಣಿ ಮಾಡಿಸಬಹುದು. ಮಾಹಿತಿಗಾಗಿಮೊ. 7892075248 ಸಂಪರ್ಕಿಸಿ.