ಸಾರಾಂಶ
- ಗಮನ ಸೆಳೆದ ಸ್ತಬ್ಧಚಿತ್ರ ಮೆರವಣಿಗೆ । ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ । ಮುಸ್ಲಿಂ ಸಮಾಜದಿಂದ ಸನ್ಮಾನ, ಹಬ್ಬಕ್ಕೆ ಶುಭ ಹಾರೈಕೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಸರಾ ಹಬ್ಬ ಅಂಗವಾಗಿ ಪ್ರತಿ ವರ್ಷದಂತೆ ವಿಶ್ವ ಹಿಂದು ಪರಿಷತ್ತು, ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿಯಿಂದ ನಗರದಲ್ಲಿ ಶನಿವಾರ 43ನೇ ವರ್ಷದ ಬೃಹತ್ ಶೋಭಯಾತ್ರೆ ಅದ್ಧೂರಿಯಾಗಿ ನಡೆಯಿತು.
ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಿಂದ ಜಡೆ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಬೃಹತ್ ಶೋಭಯಾತ್ರೆಗೆ ಚಾಲನೆ ನೀಡಿ, ಸಮಸ್ತರಿಗೂ ವಿಜಯ ದಶಮಿ ಹಬ್ಬದ ಶುಭ ಹಾರೈಸಿದರು. ಶ್ರೀ ಚಾಮುಂಡೇಶ್ವರಿ ಪುತ್ಥಳಿಯ ಟ್ರ್ಯಾಕ್ಟರ್ ಅನ್ನು ಬಿಜೆಪಿ ಹಿರಿಯ ಮುಖಂಡ, ಪಾಲಿಕೆ ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ ಚಾಲನೆ ಮಾಡಿದರು.ಜಾನಪದ ಕಲಾ ತಂಡಗಳು- ಸ್ತಬ್ಧಚಿತ್ರಗಳು:
ಸಮಾಳ, ನಂದಿಕೋಲು, ವೀರಗಾಸೆ, ಸಮಾಳ, ಡೊಳ್ಳು, ಕೋಲಾಟ, ಸಾಂಪ್ರದಾಯಿಕ ವಾದ್ಯ, ಮಂಗಳ ವಾದ್ಯಗಳು, ಕೀಲು ಕುದುರೆ, ಯಕ್ಷಗಾನ ವೇಷಧಾರಿಗಳು, ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದವು. ಮಹರ್ಷಿ ವಾಲ್ಮೀಕಿ, ವೀರರಾಣಿ ಕಿತ್ತೂರು ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಇಮ್ಮಡಿ ಪುಲಿಕೇಶಿ, ಮಹಾತ್ಮ ಗಾಂಧಿ, ಬಸವಣ್ಣ, ಸ್ವಾಮಿ ವಿವೇಕಾನಂದ, ಗೋಲವಾಲ್ಕರ್ ಸೇರಿದಂತೆ ಮಹನೀಯರು, ದಾರ್ಶನಿಕರ ಸ್ತಬ್ಧಚಿತ್ರಗಳು ಕಣ್ಮನ ಸೆಳೆದವು. ದಿಬ್ಬ ವೃತ್ತವೊಂದರ ಮೇಲ್ಭಾಗದಲ್ಲಿ ಶ್ರೀ ಉಗ್ರನರಸಿಂಹನ ಅವತಾರದ ಸ್ತಬ್ಧಚಿತ್ರ ಗಮನ ಸೆಳೆಯಿತು. ಛತ್ರಪತಿ ಶಿವಾಜಿ ಮಹಾರಾಜರು, ವೀರ ಮದಕರಿ ನಾಯಕ, ಕಿತ್ತೂರು ಚನ್ನಮ್ಮ ಸೇರಿದಂತೆ ಅನೇಕ ಮಹನೀಯರು, ಸಾಧಕರ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಶೋಭೆ ಹೆಚ್ಚಿಸಿದವು.ಡಿಜೆ ಸೌಂಡ್ಸ್‌ಗಾಗಿ ಯುವಜನರ ಪಟ್ಟು:
ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆ ಹಳೆ ಬಿಡಿಒ ಆಫೀಸ್ ರಸ್ತೆ, ಚಾಮರಾಜ ಪೇಟೆ, ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತ, ಹಳೇ ಪಿ.ಬಿ. ರಸ್ತೆ ಮೂಲಕ ಶ್ರೀ ಸಾಗಿ ಬೀರಲಿಂಗೇಶ್ವರ ಮೈದಾನ ತಲುಪಿತು. ಡಿಜೆ ಸೌಂಡ್ ಸಿಸ್ಟಂ ಬರಲಿಲ್ಲವೆಂಬ ಕಾರಣಕ್ಕೆ, ಮೆರವಣಿಗೆ ಆರಂಭಕ್ಕೆ ತಡವಾಗಿತ್ತು. ಡಿಜೆ ಸೌಂಡ್ಸ್ ಬರುವವರೆಗೂ ಯುವಜನರು ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದರು.ಮೇಯರ್ ಕೆ.ಚಮನ್ ಸಾಬ್, ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದು ಸೇಟ್, ಟಿ.ಅಸ್ಗರ್ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಶೋಭಾಯಾತ್ರೆಯಲ್ಲಿದ್ದ ಹಿಂದು ಸಮಾಜದ ಮುಖಂಡರು, ಸಮಾಜ ಬಾಂಧವರು, ಮುಖಂಡರಿಗೆ ವಿಜಯದಶಮಿ ಶುಭ ಕೋರಿ, ಹೂವಿನ ಮಾಲೆ, ಶಾಲು ಹಾಕಿ ಸನ್ಮಾನಿಸಿದರು. ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು.
ಉತ್ಸವ ಹಿನ್ನೆಲೆ ಎಲ್ಲ ಕಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.ಗಣೇಶ ಮೆರವಣಿಗೆ ವೇಳೆಯ ಕಹಿ ಘಟನೆ ಹಿನ್ನೆಲೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಬಂದೋಬಸ್ತ್ ಮಾಡಿದ್ದರು. ವಿಶೇಷವಾಗಿ ಡ್ರೋಣ್ ಕಣ್ಗಾವಲು ಹಾಕಲಾಗಿತ್ತು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಕೆ.ಬಿ. ಶಂಕರ ನಾರಾಯಣ, ಮಾಜಿ ಮೇಯರ್‌ಗಳಾದ ಎಸ್.ಟಿ.ವೀರೇಶ, ಬಿ.ಜಿ. ಅಜಯಕುಮಾರ, ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಲ್ಲಿಕಾರ್ಜುನ, ಹರೀಶ ಪವಾರ, ಆರ್.ಎಲ್.ಶಿವಪ್ರಕಾಶ, ಕೆ.ಪ್ರಸನ್ನಕುಮಾರ, ಆರ್.ಶಿವಾನಂದ, ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ರಾಜು, ಚೇತನ ಶಿವಕುಮಾರ, ಎಚ್.ಬಿ.ಮಂಜುನಾಥ, ಧನಂಜಯ ಕಡ್ಲೇಬಾಳು, ವಿನಾಯಕ ರಾನಡೆ, ಶಿವನಗೌಡ ಪಾಟೀಲ, ಶಂಕರಗೌಡ ಬಿರಾದಾರ, ಗುರು ಸೋಗಿ, ಟಿಂಕರ್ ಮಂಜಣ್ಣ, ಅನೇಕರು ಇತರರು ಇದ್ದರು.
ಸಾರ್ವಜನಿಕ ವಿಜಯದಶಮಿ ಶೋಭಾಯತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್‌ಗೆ ನಿಯೋಜಿಸಿದ ಅಧಿಕಾರಿಗಳು, ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸಲು ಬೆಳಗ್ಗೆಯೇ ಸೂಕ್ತ ಕರ್ತವ್ಯ ಸೂಚನೆ ನೀಡಿದರು. ಅದರಂತೆ ಪೊಲೀಸ್ ಅಧಿಕಾರಿ-ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ. ಮಂಜುನಾಥ, ಎಎಸ್‌ಪಿ ಸ್ಯಾಮ್ ವರ್ಗಿಸ್, ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ, ಪೊಲೀಸ್ ಅಧಿಕಾರಿ ಸಿಬ್ಬಂದಿ ಇದ್ದರು.
- - --(ಫೋಟೋ ಬರಲಿವೆ):