ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಪಟ್ಟಣದ ಗುರುಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್, ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗುರುವಾರ ಮಧ್ಯವರ್ಜನ ಶಿಬಿರಕ್ಕೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟೇಶ್, ಸಿಪಿಐ ಶಬ್ಬೀರ್ ಹುಸೇನ್ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಹಿರಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಮದ್ಯಪಾನ ಬಿಡಿಸುವುದಕ್ಕಾಗಿ ಇಂತಹ ಮಧ್ಯವರ್ಜನ ಶಿಬಿರ ಮಾಡುತ್ತಾ ಬಂದಿದ್ದು, 1,848ನೇ ಶಿಬಿರ ಇದಾಗಿದ್ದು, ಈ ಶಿಬಿರದ ಆಯೋಜನೆಯನ್ನು ಸ್ಥಳಿಯ ಸಂಸ್ಥೆಗಳು ಸಹಕಾರ ಸಂಘಗಳು ತಾಲೂಕು ಆಡಳಿತ ಆರೋಗ್ಯ ಇಲಾಖೆ ಸಹಕಾರದೊಂದಿಗೆ ನಡೆಸಲಾಗಿದೆ. ಈ ಶಿಬಿರ ಸೆ. 5ರಂದು ಕೊನೆಗೊಳ್ಳಲಿದೆ ಎಂದರು.ತಾಲೂಕು ಆರೋಗ್ಯ ಅಧಿಕಾರಿ ಟಿ. ರವಿಕುಮಾರ್ ಮಾತನಾಡಿ, ಜನತೆ ಕುಡಿತದ ದಾಸರಾಗಿ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಶೇ. 22 ಪುರುಷರು ಹಾಗೂ ಶೇ. ಎರಡರಷ್ಟು ಮಹಿಳೆಯರು ಇಂತಹ ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಆದ್ದರಿಂದ ಕುಡಿತಕ್ಕೆ ದಾಸರಾಗಿರುವ ಜನತೆ ಇದರಿಂದ ಹೊರಗೆ ಬರಬೇಕು, ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಆರೋಗ್ಯವಂತರಾಗಿ ಬಾಳಬೇಕು ಎಂದರು.ಸಿ.ಎಂ. ನಾಗಣ್ಣ, ನಿವೃತ್ತ ಬ್ಯಾಂಕ್ ಅಧಿಕಾರಿ ವೀರಪ್ಪ, ವರ್ತಕರ ಸಂಘದ ಅಧ್ಯಕ್ಷ ವಿನಯ್, ಶ್ರೀಕಾಂತ್, ಪಿಎಸ್.ಐ ಪ್ರಕಾಶ್, ತಾಲೂಕು ಯೋಜನಾಧಿಕಾರಿ ಭಾಸ್ಕರ್, ಸಂಸ್ಥೆಯ ಮೇಲ್ವಿಚಾರಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.