ಸಾರಾಂಶ
ಸತತ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಪ್ರಿಲಿಮ್ಸ್ ಕೂಡ ಪಾಸಾಗಲಿಲ್ಲ. ಆದರೆ, ಆಸಕ್ತಿ ವಹಿಸಿ ಪ್ರಯತ್ನ ಮುಂದುವರಿಸಿದ್ದರಿಂದ ನಾಲ್ಕನೇ ಪ್ರಯತ್ನದಲ್ಲಿ ದೇಶಕ್ಕೆ 100ನೇ ರ್‍ಯಾಂಕ್ , ಕರ್ನಾಟಕಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾಳೆ ಈ ಯುವತಿ.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸತತ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಪ್ರಿಲಿಮ್ಸ್ ಕೂಡ ಪಾಸಾಗಲಿಲ್ಲ. ಆದರೆ, ಆಸಕ್ತಿ ವಹಿಸಿ ಪ್ರಯತ್ನ ಮುಂದುವರಿಸಿದ್ದರಿಂದ ನಾಲ್ಕನೇ ಪ್ರಯತ್ನದಲ್ಲಿ ದೇಶಕ್ಕೆ 100ನೇ ರ್‍ಯಾಂಕ್ , ಕರ್ನಾಟಕಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾಳೆ ಈ ಯುವತಿ.22ನೇ ವಯಸ್ಸಿನಿಂದಲೇ ಯುಪಿಎಸ್‌ಪಿ ಪರೀಕ್ಷೆಯ ಹಂಬಲ ಇಟ್ಟುಕೊಂಡಿದ್ದ ಈ ಯುವತಿ ಕೊನೆಗೆ 26ನೇ ವಯಸ್ಸಿನಲ್ಲಿಯೇ ಸಾಧಿಸಿ ತೋರಿಸಿದ್ದಾಳೆ. ಹೀಗಾಗಿ ಯುಪಿಎಸ್‌ಸಿ ಈಗ ಬಿಡುಗಡೆ ಮಾಡಿರುವ ಫಲಿತಾಂಶದಲ್ಲಿ ದೇಶಕ್ಕೆ 100 ರ್‍ಯಾಂಕ್ ಪಡೆದಿದ್ದಾಳೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದ ವಿಜೇತಾ ಭೀಮಸೇನ್ ಹೊಸಮನಿ ಈ ರ್‍ಯಾಂಕ್ ಪಡೆದ ಯುವತಿ.
ಯುಪಿಎಸ್‌ಸಿಗೆ ಸತತ ಓದು ಬೇಕು ಎನ್ನುವ ವಿಜೇತಾ ಅವರು ಆನ್‌ಲೈನ್ ಮೂಲಕ ಕೋಚಿಂಗ್ ಕೂಡ ಪಡೆದುಕೊಂಡಿದ್ದಾರೆ. 2022ನೇ ಬ್ಯಾಚಿನ ಇವರ ಗೆಳತಿ ಕೃತಿಕಾ ಗೋಯಲ್ ಅವರು 14ನೇ ರ್‍ಯಾಂಕ್ ಪಡೆದಿದ್ದು, ಕೂಡ ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಸತತ ಅಧ್ಯಯನ ಮೂಲಕ ತಾವು ಅಂದುಕೊಂಡ ದಾರಿಯಲ್ಲಿ ಯಶಸ್ಸು ಸಾಧಿಸಿದ್ದಾಳೆ.ವಿಜೇತಾ ಹೊಸಮನಿ ಅವರ ತಂದೆ ಭೀಮಸೇನ್ ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುವ ಮೂಲಕ ನಿವೃತ್ತಿಯ ಜೀವನವನ್ನು ಹುಬ್ಬಳ್ಳಿಯಲ್ಲಿ ಕಳೆಯುತ್ತಿದ್ದಾರೆ.
ಗುಜರಾತ್ ಯೂನಿವರ್ಸಿಟಿಯಲ್ಲಿ ಬಿಎ ಹಾಗೂ ಎಲ್‌ಎಲ್‌ಬಿ ಕ್ರಿಮಿನಲ್ ಲಾ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರು. ನಂತರ ಫ್ಲಾಟ್ ಪರೀಕ್ಷೆಯಲ್ಲಿ ಪಾಸಾಗಿ ಕ್ರಿಮಿನಲ್ ಲಾ ವೃತ್ತಿ ಜೀವನ ಬಿಟ್ಟು, ಯುಪಿಎಸ್‌ಸಿ ಪರೀಕ್ಷೆ ಎದುರಿಸಬೇಕೆಂಬ ಹಂಬಲ ಅವರದ್ದಾಗಿತ್ತು. ಹೀಗಾಗಿ ತಮ್ಮ ಸಹಪಾಠಿಗಳ ಜೊತೆ ಸತತ ಓದು ಹಾಗೂ ಆನ್‌ಲೈನ್ ತರಬೇತಿ ಪ್ರಯತ್ನ ಮಾಡುವ ಮೂಲಕ 2023ನೇ ಬ್ಯಾಚಿನ ಒಂದು 100ನೇ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಎತ್ತರಿಸಿದ್ದಾರೆ.ಫೋಟೋ ೧೬ಡಿಎಚಪಿ೧