ವಿಕಾಸಪರ್ವ ಸಾಮಾಜಿಕ ಜವಾಬ್ದಾರಿ ನೆನಪಿಸುವ ಚಲನಚಿತ್ರ

| Published : Aug 30 2024, 01:03 AM IST

ವಿಕಾಸಪರ್ವ ಸಾಮಾಜಿಕ ಜವಾಬ್ದಾರಿ ನೆನಪಿಸುವ ಚಲನಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಾಸಪರ್ವ ಒಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದ್ದು, ಈ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ಕಮರ್ಷಿಯಲ್ ಆಗಿ ಹೇಳುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ವಿಶೃತ್ ನಾಯಕ್ ಅವರು ವಿಕಾಸ ಪರ್ವ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜೊತೆಗೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅರಸ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಎಂದರು. ಮನುಷ್ಯ ಸ್ವಲ್ಪ ವಿವೇಚನೆಯಿಂದ ನಡೆದುಕೊಂಡರೆ ಅದು ವಿಕಾಸಪರ್ವ ಆಗುತ್ತದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮಧ್ಯಮ, ವಯಸ್ಕರ ಸುತ್ತ ನಡೆಯುವ ಸಾಂಸಾರಿಕ ಕಥೆಯ ಜೊತೆಗೊಂದು ಮೆಸೇಜ್ ಈ ಚಿತ್ರದಲ್ಲಿದೆ. ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಈಗಾಗಲೇ ಕೇಳುಗರ, ನೋಡುಗರ ಮನ ಗೆದ್ದಿದ್ದು, ಚಿತ್ರದಲ್ಲಿ ಏನೋ ವಿಶೇಷವಿದೆ ಎಂಬ ಕಾತುರ ಹುಟ್ಟಿಸಿವೆ.

ಕನ್ನಡಪ್ರಭ ವಾರ್ತೆ ಹಾಸನ

ನಮ್ಮ ಸಮಾಜದ ಪ್ರತಿಯೊಂದು ಮನೆಯಲ್ಲೂ ಇರುವಂಥ, ಇರಬಹುದಾದಂಥ ಒಂದು ಗಹನವಾದ ಸಮಸ್ಯೆಯನ್ನು ನಿರ್ದೇಶಕ ಅನ್ನು ಅರಸ್ ಅವರು “ವಿಕಾಸಪರ್ವ " ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ನಿರೂಪಿಸಿದ್ದಾರೆ ಎಂದು ಯುವ ನಾಯಕ ನಟ ರೋಹಿತ್ ನಾಗೇಶ್ ಮತ್ತು ನಾಯಕಿ ಸ್ವಾತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಾನು ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅಭಿಮಾನಿ ಬಳಗವನ್ನು ಹೊಂದಿರುವ ಯುವನಟನಾಗಿ, ಈ ಚಿತ್ರದ ನಾಯಕನಾಗಿ ನಟಿಸಿದ್ದು, ನಟಿ ಸ್ವಾತಿ ಅವರು ಚಿತ್ರದ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಕಥೆಯನ್ನು ಚಿತ್ರ ತಂಡ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಒಂದು ಸೋಷಿಯಲ್ ರೆಸ್ಪಾನ್ಸಿಬಲಿಟಿ ಇಟ್ಟುಕೊಂಡು ಮಾಡಿರುವ ಚಿತ್ರ ಎಂದಷ್ಟೇ ಹೇಳಿಕೊಂಡಿದೆ. ವಿಕಾಸಪರ್ವ ಒಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದ್ದು, ಈ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ಕಮರ್ಷಿಯಲ್ ಆಗಿ ಹೇಳುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ವಿಶೃತ್ ನಾಯಕ್ ಅವರು ವಿಕಾಸ ಪರ್ವ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜೊತೆಗೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಅರಸ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಎಂದರು. ಮನುಷ್ಯ ಸ್ವಲ್ಪ ವಿವೇಚನೆಯಿಂದ ನಡೆದುಕೊಂಡರೆ ಅದು ವಿಕಾಸಪರ್ವ ಆಗುತ್ತದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮಧ್ಯಮ, ವಯಸ್ಕರ ಸುತ್ತ ನಡೆಯುವ ಸಾಂಸಾರಿಕ ಕಥೆಯ ಜೊತೆಗೊಂದು ಮೆಸೇಜ್ ಈ ಚಿತ್ರದಲ್ಲಿದೆ. ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಈಗಾಗಲೇ ಕೇಳುಗರ, ನೋಡುಗರ ಮನ ಗೆದ್ದಿದ್ದು, ಚಿತ್ರದಲ್ಲಿ ಏನೋ ವಿಶೇಷವಿದೆ ಎಂಬ ಕಾತುರ ಹುಟ್ಟಿಸಿವೆ.

ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ, ಶನಿವಾರಸಂತೆ ಸುತ್ತಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಈ ಚಿತ್ರದಲ್ಲಿ ೩ ಹಾಡುಗಳಿದ್ದು, ಎಲ್ಲಾ ಹಾಡುಗಳು ಕಥೆಯ ಜೊತೆ ಜೊತೆಗೇ ಸಾಗುತ್ತವೆ. ಅದೇ ರೀತಿ ಬರುವ ಒಂದು ಹೊಡೆದಾಟದ ಸೀನ್ ಕೂಡ ಚಿತ್ರಕಥೆಗೆ ಅನುಗುಣವಾಗಿದೆ. ಎಲ್ಲ ಹಾಡುಗಳಿಗೂ ಡಾ.ವಿ. ನಾಗೇಂದ್ರಪ್ರಸಾದ್ ಅವರೇ ಸಾಹಿತ್ಯ ರಚಿಸಿದ್ದು, ಎಪಿಒ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ನವೀನ್ ಸುವರ್ಣ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಶ್ರೀನಿವಾಸ ಕಲಾಲ್ ಅವರ ಸಂಕಲನ, ಟೈಗರ್‌ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ನಾನು ಹಾಸನದವನೇ ಆಗಿದ್ದು, ಯಾವುದೇ ಲಾಭ, ಹಣ ಗಳಿಸಬೇಕೆಂದು ಈ ಸಿನಿಮಾ ನಿರ್ಮಿಸಿಲ್ಲ. ಪ್ರೇಕ್ಷಕರಿಗೆ ಮುಖ್ಯವಾಗಿ ಸಮಾಜಕ್ಕೆ ಉತ್ತಮ ಸಂದೇಶ ಹೇಳಬೇಕು ಎಂದು ಮಾಡಿದ ಚಿತ್ರ. ಸಿನಿಮಾ ನೋಡಿ ಥಿಯೇಟರಿನಿಂದ ಹೊರಬರುವಾಗ ಪ್ರೇಕ್ಷಕರ ಮುಖದಲ್ಲಿ ಒಂದು ಮಂದಹಾಸ ಖಂಡಿತ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಚಿತ್ರದ ಉಳಿದ ತಾರಾಗಣದಲ್ಲಿ ಅಶ್ವಿನ್ ಹಾಸನ್, ನಿಶಿತಾ ಗೌಡ, ಬಲ ರಾಜವಾಡಿ, ಕುರಿರಂಗ ಮುಂತಾದವರಿದ್ದಾರೆ ಎಂದು ಚಿತ್ರದ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಿಶೃತ್ ನಾಯಕ್, ನವೀನ್ ಸುವರ್ಣ, ಅಮ್ಸಬರ್ನ್, ಕುರಿರಂಗ ಇತರರು ಉಪಸ್ಥಿತರಿದ್ದು, “ವಿಕಾಸಪರ್ವ " ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡರು.